ದಾವಣಗೆರೆ (Davangere district ) : ಎಸ್ಸಿ-ಎಸ್ಟಿ ಸಮುದಾಯಗಳು ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಸೇರಿ ಇತರೆ ಯೋಜನೆಗಳಿಗೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಪ.ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟಿರುವಂತಹ 42 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಗ್ಯಾರಂಟಿ ಮತ್ತು ಇತರೆ ಯೋಜನೆಗಳಿಗೆ ಬಳಕೆ ಮಾಡುವುದರಿಂದ ಪ.ಜಾತಿ, ಪಂಗಡದವರ ಅಭಿವೃದಿ ಕಾರ್ಯಗಳಿಗೆ ಪೂರ್ಣ ಪ್ರಮಾಣದ ಅನುದಾನ ದೊರೆಯದಂತಾಗಿ ಅಭಿವೃದ್ಧಿ ಕೆಲಸ ಕುಂಠಿತವಾಗುತ್ತವೆ. ಹಾಗಾಗಿ ಸರ್ಕಾರ ಪ. ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಇತರೆಯದ್ದಕ್ಕೆ ಬಳಕೆ ಮಾಡದೆ ಸಂಪರ್ಣವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದಿನ ಬಿಜೆಪಿ ರ್ಕಾರದ ಅವಧಿಯಲ್ಲಿ ಎಸ್ಸಿಪಿ, ಟಿಎಸ್ಪಿ( scp-tsp )ಯೋಜನೆಗಳ ಅನುದಾನ ದುರುಪಯೋಗದ ಜೊತೆಗೆ ದಲಿತ ವಿರೋಧಿನೀತಿ ಅನುಸರಿಸುತ್ತಿತ್ತು. ಕಾಂಗ್ರೆಸ್‌ನ ಮೇಲೆ ಸಂಪೂರ್ಣ ಭರವಸೆಯಿಟ್ಟು ಜನರು ಅಧಿಕಾರಕ್ಕೆ ತಂದಿದ್ದಾರೆ. ಪ.ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನ ಬೇರೆಯ ಕರ್ಯಕ್ಕೆ ಬಳಕೆ ಮಾಡುವುದಿಲ್ಲ. ಎಸ್ಸಿಪಿ, ಟಿಎಸ್ಪಿ ( scp-tsp ) ಯೋಜನೆಯಡಿ 7(ಸಿ) ಮತ್ತು 7(ಡಿ) ರದ್ಧುಪಡಿಸುವ ಭರವಸೆ ನೀಡಿದ್ದವರೇ ಅನುದಾನವನ್ನ ಈಗ ಬೇರೆ ಯೋಜನೆಗಳಿಗೆ ಬಳಕೆ ಮಾಡುವಂತಾಗುತ್ತಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.
DAVANAGERE Electrical variation : ವಿದ್ಯುತ್ ವ್ಯತ್ಯಯ
ವಾಲ್ಮೀಕಿ ಮತ್ತು ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತಹ ಹಣ ದರ್ಬಳಕೆ ಮಾಡಿಕೊಳ್ಳುವ ಮೂಲಕ ಪ. ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಪೆಟ್ಟು ನೀಡುತ್ತಿರುವುದು ಸರಿಯಲ್ಲ. ಕೂಡಲೇ ಎರಡೂ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರ ಮನವಿ ಸಲ್ಲಿಸಿದರು.
ರಾಜ್ಯ ಸಂಚಾಲಕ ಆವರಗೆರೆ ವಾಸು, ಎಸ್. ಚಂದ್ರಪ್ಪ, ಸುರೇಶ್, ಹುಚ್ಚೆಂಗೆಪ್ಪ, ರೇಣುಕಮ್ಮ, ಮೈಲಮ್ಮ, ಕವಿತಾ, ಹನುಮಂತ ನಿಟುವಳ್ಳಿ, ರಾಜು ಕೆರೆಯಾಗಳಹಳ್ಳಿ, ಬಸವರಾಜ್ ನಿಟುವಳ್ಳಿ, ಹನುಮಂತ ನರಗನಹಳ್ಳಿ, ಚೌಡಪ್ಪ, ಭರತ್, ನಂದೀಶ್, ಗುರುಮರ್ತಿ, ಮೋಹನ್, ವಿ. ಲಕ್ಷ್ಮಣ್, ರಂಗನಾಥ್ ನರೇಗಾ, ಪರಶುರಾಮ್ ಇದ್ದರು.