ದಾವಣಗೆರೆ: ದಸರಾ ಹಬ್ಬದ ಪ್ರಯುಕ್ತ ನಡೆಸಿದ ಬೈಕ್ ರ್ಯಾಲಿಯಲ್ಲಿ ಸಂವಿಧಾನ ಬಾಹಿರ ಘೋಷಣೆ ಕೂಗಲಾಗಿದ್ದು, ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ಅಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮುಸ್ಲಿಂ ಒಕ್ಕೂಟ ಮನವಿ ಸಲ್ಲಿಸಿದೆ.
ಇದೇ ವೇಳೆ ಒಕ್ಕೂಟದ ಸಂಚಾಲಕ ಟಿ. ಅಸ್ಗರ್ ಮಾತನಾಡಿ, ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆ ಮತ್ತು ಜಾತಿ, ಪಂಗಡ, ಧರ್ಮದರಿಗೆ ಸರಿಸಮಾನವಾಗಿ ಹಕ್ಕು ನೀಡಿದೆ. ಆದ್ದರಿಂದ ಇವರು ಕೂಗಿರುವ ಘೋಷಣೆ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂದೆ ದುರ್ಗ ದೌಡ್ ಹೆಸರಿನಲ್ಲಿ ನಡೆದ ಮೆರವಣಿಗೆಯಲ್ಲೂ ಹರಿತವಾದ ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಸರ್ವಜನಿಕವಾಗಿ ಪ್ರದರ್ಶನ ಮಾಡಿ ಮೆರವಣಿಗೆ ಮಾಡಿದ್ದು, ಇದನ್ನು ವಿಡಿಯೋ ಮಾಡಿ ರಕ್ತ ಚರಿತ್ರೆ ಎಂಬ ಹಾಡು ಸಂಯೋಜಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸರ್ವಜನಿಕರಿಗೆ ಭಯ ಉಂಟು ಮಾಡಲಾಗಿದೆ. ಇವೆರಡು ವಿಷಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಪೊಲೀಸ್ ಇಲಾಖೆ ಅಂಥವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Read also : ದಾವಣಗೆರೆ : ಸಮೀಕ್ಷಾ ಕಾರ್ಯಕ್ಕೆ ಸಹಾಯವಾಣಿಗೆ ಸಂಪರ್ಕಿಸಿ
ಈ ಸಂದರ್ಭದಲ್ಲಿ ಒಕ್ಕೂಟದ ಇಬ್ರಾಹಿಂ, ಖಲೀಲವುಲ್ಲಾ, ಮಹಮ್ಮದ್ ಅಲಿ, ಶೋಯೇಬ್, ಸಾಜಿದ್ ಅಹ್ಮದ್, ಜಬೀವುಲ್ಲಾ, ಆದಿಲ್ ಖಾನ್, ಇಲು, ದಾದಪೀರ್. ಇಮ್ರಾನ್, ರಫೀಕ್ ತಮನ್ನ, ಬಾಷ, ಅಜ್ಮತ್, ಖಾಜಾ, ಸಾಧಿಕ್, ಸಿದ್ದೀಕ್ ಇತರರು ಇದ್ದರು.
