ಕುಮಾರಪಟ್ಟಣ : ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ ಕರ್ನಾಟಕದ ನಾಡಪ್ರಭು ಎಂದೇ ಪ್ರಸಿದ್ಧಿ ಪಡೆದಂತಹ ಕೆಂಪೇಗೌಡರ 515ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಪ್ರಯುಕ್ತ 6 ರಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷವಾಗಿ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಕೆಂಪೇಗೌಡರ ಬಾಲ್ಯ, ಸಾಧನೆ ಕೊಡುಗೆಗಳ ಬಗ್ಗೆ ಸರಳ ಹಾಗೂ ಅಚ್ಚುಕಟ್ಟಾದ ಭಾಷಣ ಹಾಗೂ ಪ್ರಬಂಧಗಳ ಮೂಲಕ ಪ್ರಸ್ತುತ ಪಡಿಸಿದರು.
ಪ್ರಕಾಶ್ ಪಿ ರಾವ್‍ರವರು ಮಾತನಾಡಿ. ಪ್ರಬುದ್ಧ ಸಮಾಜದ ಎಲ್ಲ ವಿಭಾಗಗಳ ಮುತ್ಸದ್ದಿಯಾಗಿ, ಆರ್ಥಿಕ ಅಭಿವೃದ್ಧಿ, ಪರಿಸರದ ಬಗೆಗಿನ ಕಾಳಜಿಯಿಂದಾಗಿ ಕೆಂಪೇಗೌಡರು ನಗರದ ಅಭಿವೃದ್ಧಿಗಾಗಿ ನಿರ್ಮಿಸಿದಂತಹ ಕೆರೆ ಕಟ್ಟೆಗಳು, ವೃತ್ತಿಯಾಧಾರಿತ ಪೇಟೆಗಳು, ದೇವಾಲಯಗಳು, ಕೋಟೆಗಳು, ಉದ್ಯಾನವನಗಳು, ಕಲೆ ಮತ್ತು ವಾಸ್ತುಶಿಲ್ಪಗಳ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವುದರ ಮೂಲಕ ಕೆಂಪೇಗೌಡರ ಸಾಹಸೀ ಜೀವನದ ಪರಿಚಯ ಮಾಡಿ ಕೊಟ್ಟರು.