ದಾವಣಗೆರೆ.ಆ.19 (Davangere District) : ಐರಣಿ ಮಠದ ಸ್ವಾಮೀಜಿಯ ಶಿಷ್ಯರೆಂದು ಹೇಳಿಕೊಂಡು ಅಸಲಿ ನೋಟಿನ ಕೆಳಗೆ ಬಿಳಿಯ ಹಾಳೆಗಳುಳ್ಳ ಬಾಕ್ಸ್ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 5 ಜನ ವಂಚಕರ ತಂಡವನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಲಿಯಾಜ್, ಕಿರಣ, ದಾದಾಪೀರ್, ಮಹಾಂತೇಶ ಹಾಗೂ ಮಂಜುನಾಥ ಬಂಧಿತ ವಂಚಕರು. ಬಂಧಿತರಿಂದ 2.80 ಲಕ್ಷ ರೂ ನಗದು ಮತ್ತು ಕೃತ್ಯಕ್ಕೆ ಬಳಸಿದ 15 ಲಕ್ಷ ರೂ ಮೌಲ್ಯದ 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 2023 ರಲ್ಲಿ ಹೊಸ ನಗರ ತಾಲೂಕಿನ ಕೆಂಚನಾಲ್ ಗ್ರಾಮದ ಚಮನ್ ಸಾಬ್ ಎನ್ನುವವರಿಗೆ ವಂಚಕರು, ನಾವು ಐರಣಿ ಮಠದ ಸ್ವಾಮೀಜಿಯವರ ಶಿಷ್ಯರು. ನಮ್ಮ ಬಳಿ 100/- ರೂ ಮುಖಬೆಲೆಯ ನೋಟುಗಳಿದ್ದು ನೀವು 500/- ರೂ ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಅಸಲಿ ನೋಟಿನ ಕೆಳಗೆ ಅದೇ ಸೈಜಿನ ಬಿಳಿಹಾಳೆಗಳ ಬಂಡಲ್‌ಗಳನ್ನು ನೀಡಿ ಹಣ ಪಡೆದು ಪರಾರಿಯಾಗಿದ್ದರು.
ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ ಮತ್ತು ಮಂಜುನಾಥ ಜಿ. ಹಾಗು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಅವರುಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ದಾವಣಗೆರೆಯ ಕಿರಣ, ದಾದಾಪೀರ್, ಮಂಜುನಾಥ್, ಚಿಕ್ಕಮಗಳೂರಿನ ಇಲಿಯಾಜ್, ಚಿತ್ರದುರ್ಗದ ಮಹಾಂತೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 2019 ರಲ್ಲಿ ಕಿರಣ್ ಮೇಲೆ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
Davanagere news | ಪ್ರತಿಭೆ ಪರಿಶ್ರಮ ಪಡುವವರ ಸ್ವತ್ತು : ಉಪ ಪ್ರಾಚಾರ್ಯ ಸಿದ್ಧರಾಮೇಶ್ವರ
ಕಾರ್ಯಾಚರಣೆಯಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ ಸಗರಿ, ಹರಿಹರ ಗ್ರಾಮಾಂತರ ಪೊಲೀಶ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರ, ಚಿದಾನಂದಪ್ಪ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಎಲ್.ಡಿ ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ರಾಘವೇಂದ್ರ ಶಾಂತರಾಜ ಅವರನ್ನು ಒಳಗೊಂಡ ತಂಡ ಭಾಗವಹಿಸಿತ್ತು.