ದಿನಮಾನ.ಕಾಂ, ದಾವಣಗೆರೆ : ಖಾಸಗಿ ಕಾಲೇಜುಗಳ ವಾಣಿಜ್ಯ ಕಾರ್ಯಕ್ರಮ ಒಂದಕ್ಕೆ ದಾವಣಗೆರೆ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ದಾವಣಗೆರೆ ಸಾಹಿತ್ಯ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಖಾಸಗಿ ಕಾರ್ಯಕ್ರಮಕ್ಕೆ ಸಾಹಿತ್ಯ ಪರಿಷತ್ ಸಹಯೋಗ ಪಡೆದುಕೊಂಡು ಪರಿಷತ್ತಿನ ಅಧ್ಯಕ್ಷರನ್ನೇ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಜಾನಪದ ಪರಿಷತ್ ಅಕಾಡೆಮಿ ಸದಸ್ಯ ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ, ನಿವೃತ್ತ ಪ್ರಾಧ್ಯಾಪಕ ಡಾ.ಗಂಗಾಧರಯ್ಯ ಹಿರೇಮಠ ಸೇರಿದಂತೆ ಇತರರು ಪ್ರಶ್ನಿಸಿದ್ದಾರೆ.
ಇದು ಯಾವ ಲೆಕ್ಕಾಚಾರ ಎಂದ ಕಲಮರಹಳ್ಳಿ
ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿದ್ದಕೊಂಡು ಖಾಸಗಿ ವಾಣಿಜ್ಯ ಕಾರ್ಯಕ್ರಮವೊಂದಕ್ಕೆ ಸರ್ವಾಧ್ಯಕ್ಷರಾಗಲು ಮೊದಲು ವಾಮದೇವಪ್ಪ ಅವರು ಒಪ್ಪಬಾರದಿತ್ತು. ಇದು ಪರಿಷತ್ ಅಧ್ಯಕ್ಷ ಹುದ್ದಗೆ ಘನತೆ ತರುವುದಿಲ್ಲ. ಸಾಹಿತ್ಯ ಪರಿಷತ್ ಸಹಯೋಗ ಪಡಕೊಂಡು ಪರಿಷತ್ತಿನ ಅದ್ಯಕ್ಷರನ್ನೇ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಮಾನ್ಯ ವಾಮದೇವಪ್ಪನವರು ಇದಕ್ಕೆ ಒಪ್ಪಬಾರದಿತ್ತು. ಅಲ್ಲದೆ ಖಾಸಗಿ ಕಾಲೇಜುಗಳ ವಾಣಿಜ್ಯ ಈವೆಂಟ್ ಪ್ರೋಗ್ರಾಂ.ಇAಥವಕ್ಕೆ ಸಾಹಿತ್ಯ ಪರಿಷತ್ ಜೊತೆಯಾಗ ಬಾರದಿತ್ತು ಎಂದು ವಾಟ್ಸ್ಪ್ ಗ್ರೂನಲ್ಲಿ ಜಾನಪದ ಪರಿಷತ್ ಅಕಾಡೆಮಿ ಸದಸ್ಯ ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ ವಿರೋಧಿಸಿದ್ದಾರೆ.
ಸಾಹಿತ್ಯ ಪರಿಷತ್‌ನಲ್ಲಿ ಗುಂಪುಗಾರಿಕೆ ನಡೆಯುತ್ತಿದೇಯಾ ?
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಗುಂಪುಗಾರಿಕೆ ನಡೆಯುತ್ತಿದೇಯಾ ಎಂಬ ಅನುಮಾನ ದಟ್ಟವಾಗಿದೆ. ಈ ಕುರಿತು ಹೆಸರು ಹೇಳದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅರ್ಹರಿಗೆ ಅವಕಾಶ ಸಿಗುತ್ತಿಲ್ಲ. ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳದವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Read also : ವಿರಕ್ತಮಠದ ಬಸವ ಪ್ರಭು ಸ್ವಾಮೀಜಿಗೆ ಕುವೆಂಪು ವಿವಿಯಿಂದ ಪಿಹೆಚ್ ಡಿ ಪದವಿ