ದಾವಣಗೆರೆ: ಪ್ರಸ್ತುತ ಕಲುಷಿತ ಮನಸ್ಸುಗಳ ಶುದ್ಧ ಮಾಡಲು ಬಸವಾದಿ ಶಿವಶರಣರ ವಚನಬೋಧೆ ಅಗತ್ಯವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೆಂಕಭೋವಿ ಕಾಲೋನಿಯಲ್ಲಿ ಜರುಗಿದ ಶ್ರೀ ಸಿದ್ಧರಾಮೇಶ್ವರ ದೇವರ 63ನೇ ರಥೋತ್ಸವ ಹಾಗೂ ಲಿಂಗೈಕ್ಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯವರ 23ನೇ ಸ್ಮರಣೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಾದಿ ಶರಣರು ಕಾಯಕ ಸಂಸ್ಕೃತಿ ಜನರಿಗೆ ಜೀವನಾಡಿಯಾಗಿದ್ದವರು. ಆ ಕಾರಣದಿಂದಲೇ ಮದ್ದಳೆ ಕಾಯಕದ ಅಲ್ಲಮ ಪ್ರಭುವಿನ ಜ್ಞಾನಪ್ರಭೆಗೆ ಶೂನ್ಯಪೀಠದ ಪ್ರಥಮ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ವಯೋಬೇಧವಿಲ್ಲದೆ ಅರಿವಿಂಗೆ ಶರಣಾಗಿ ವಿಪ್ರ ಕುಲದ ಯುವಕ ಚನ್ನಬಸವವರನ್ನು ದ್ವೀತಿಯ ಪೀಠಾಧ್ಯಕ್ಷರಾನ್ನಾಗಿಸಿದರು. ಸರ್ವಸಿದ್ಧಿ ಯೋಗಿಗಳ ಯೋಗಿ ವಡ್ಡರ ಕುಲದ ಸಿದ್ಧರಾಮರ ತೃತೀಯ ಪೀಠಾಧ್ಯಕ್ಷರನ್ನಾಗಿಸಿದರು. ಶೂನ್ಯಪೀಠ ಜಾತ್ಯಾತೀತ ಪೀಠವಾಗಿದೆ ಎಂದು ತಿಳಿಸಿದರು.
ಇಂದು ಸ್ವಜಾತಿ ಮೀರಿ ತಮ್ಮ ಪೀಠಗಳಿಗೆ ವಿವಿಧ ಸಮಾಜದ ಯೋಗ್ಯರನ್ನು ಪೀಠಾಧಿಪತಿಗಳು ನೇಮಿಸಿದ ಮಠಗಳು ಮಾತ್ರ ಜಾತ್ಯಾತೀತ ಮಠಗಳು. ಉಳಿದವೆಲ್ಲ ಜಾತ್ಯಾತೀತ ಸೊಗಿನ ಜಾತಿ ಮಠಗಳೇ ಆಗಿವೆ ಎಂದು ಮಾರ್ಮಿಕವಾಗಿ ಹೇಳಿದರು.
ಶ್ರೀಗಳು ಸಿದ್ಧರಾಮೇಶ್ವರರು ಜಾತಿ, ಧರ್ಮ, ವರ್ಣಾಶ್ರಮದ ವಿರುದ್ಧ ಬಂಡೆದ್ದು ಮಾನವ ಜಾತಿ, ಧರ್ಮ ಒಂದೇ ಸಾರಿದವರು. ಸಿದ್ದರಾಮೇಶ್ವರರು ತನು, ಮನ, ಆತ್ಮ ಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೇ ತಿಳಿ ಹೇಳಿದ್ದಲ್ಲದೇ ಕಾರ್ಯರೂಪಕ್ಕೂ ತಂದವರು ಎಂದು ಬಣ್ಣಿಸಿದರು.
ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಸಿದ್ದರಾಮೇಶ್ವರ ತತ್ವ, ಆದರ್ಶಗಳನ್ನು ಜನ ಮಾನಸದಲ್ಲಿ ಬಿತ್ತುವ ಕೆಲಸವನ್ನು ಲಿಂಗೈಕ್ಯ ಸಿದ್ದರಾಮೇಶ್ವರ ಮಹಾಸ್ವಾಮೀಗಳು ಆರಂಭಿಸಿದರು. ಅದನ್ನು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲಾ ಶೋಷಿತ, ಹಿಂದುಳಿದ ದಲಿತ, ತಳ ಸಮುದಾಯದ ಮಠಾಧೀಶರನ್ನು ಸೇರಿಸಿ ಜಾತ್ರೆಯ ವೈಭವದಂತೆ ಮೇರಗು ಹೆಚ್ಚಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ರಥೋತ್ಸವದ ವೈಭವ ಇಮ್ಮಡಿಕೊಳ್ಳುತ್ತಿದೆ ರಥೋತ್ಸವ ಭೋವಿ ಜನಾಂಗದ ಸಂಘಟನೆ ಮತ್ತು ಸಂಸ್ಕಾರವನ್ನು ಮೂಡಿಸುವಂತಹ ಕಾರ್ಯ ಸಂತೋಷದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿಗೆ ಸಮಾನತೆ ಸಂದೇಶವನ್ನು ಸಾರಿದವರು ಸಿದ್ದರಾಮೇಶ್ವರು, ಭಕ್ತಿಯೇ ಬಸವಲಿಂಗ, ಬಸವ ಎಂದರೆ ಜ್ಞಾನ ಹೀಗೆ ವಚನ ಸಾಹಿತ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು. ಅವರ ರಥೋತ್ಸವ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
Read also : ದಾವಣಗೆರೆ|ತೆಂಗು ಬೆಳೆ ಪ್ರದೇಶಾಭಿವೃದ್ದಿ ವಿಸ್ತರಣೆಗೆ ಸಹಾಯಧನ
ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಶ್ರೀ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ (ಉಪ್ಪಾರ) ಗುರುಪೀಠದ ಜಗದ್ಗುರು ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು,ಚಿತ್ರದುರ್ಗದ ಶ್ರೀ ಯಾದವ ಮಹಾಸಂಸ್ಥಾನ (ಗೊಲ್ಲರ) ಗುರುಪೀಠ ಜಗದ್ಗುರು ಶ್ರೀ ಕೃಷ್ಣಯಾದವ ಮಹಾಸ್ವಾಮಿಗಳು, ತೀರ್ಥಹಳ್ಳಿ ಈಡಿಗರ ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಜಗದ್ಗುರು ಶ್ರೀ ಆರ್ಯರೇಣುಕಾನಂದ ಮಹಾಸ್ವಾಮಿಗಳು, ಗುಬ್ಬಿ ಹೆಳವ ಗುರುಪೀಠದ ಶ್ರೀ ಬಸವ ಬೃಂಗೇಶ್ವರ ಮಹಾಸ್ವಾಮಿಗಳು, ಎರೇ ಹೊಸಹಳ್ಳಿ ಶ್ರೀ ವೇಮನ ಮಹಾಸಂಸ್ಥಾನ ಮಠ, ರೆಡ್ಡಿ ಗುರುಪೀಠದ ಜಗದ್ಗುರು ಶ್ರೀ ವೇಮನಾನಂದ ಮಹಾಸ್ವಾಮಿಗಳು, ತೆಲಸಂಗ ಅಥಣಿಯ ಶ್ರೀ ಕುಂಬಾರ ಗುಂಡಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವ ಕುಂಬಾರಗುಂಡಯ್ಯಾ ಮಹಾಸ್ವಾಮಿಗಳು,ಮುದ್ದೇಬಿಹಾಳ ಶ್ರೀ ಹಡಪದಗುರುಪೀಠದ ಜಗದ್ಗುರು ಶ್ರೀ ಅನ್ನಧಾನಿ ಭಾರತೀಅಪ್ಪಣ್ಣ ಮಹಾಸ್ವಾಮಿಗಳು, ಕನಕ ಗುರುಪೀಠ ಶಾಖೆಯ ಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಚಿತ್ರದುರ್ಗ ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಹಾಗೂ ಇನ್ನಿತರ ಮಠಾಧೀಶರು ಸಾನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ಎಚ್. ಜಯಣ್ಣ, .ಬಸವರಾಜ್, ಬಿ ಟಿ ಸಿದ್ದಪ್ಪ, ಎಚ್. ವೆಂಕಟೇಶ್, ವಿ. ಗೋಪಾಲ್, ಎನ್. ಆನಂದಪ್ಪ, ಶ್ಯಾಮ ಸಿದ್ದಪ್ಪ, ಚನ್ನಗಿರಿ ಗರಗ ರಾಜಪ್ಪ, ಜಗಳೂರು ಅರ್ಜುನಪ್ಪ, ಹೊನ್ನಳ್ಳಿ ಶಿವಮೂರ್ತ್ಯಪ್ಪ, ಮಾಯಕೊಂಡ ಶ್ರೀನಿವಾಸ, ಹರಿಹರ ಭದ್ರಿ ದೊರೆರಾಜ್, ಎಚ್. ಮಂಜುನಾಥ್, ಎಚ್. ಬಸವರಾಜ್, ಎಚ್. ಡಿ. ವಿಜಯ್, ಎ.ವಿ ನಾಗರಾಜ್, ಎಲ್. ನಾಗರಾಜ್, ಶ್ರೀನಿವಾಸ್, ಪಿ .ಎ ಪ್ರವೀಣ್, ಈಶ್ವರ್, ನಾರಾಯಣ, ಎಚ್. ಚಂದ್ರಪ್ಪ, ಆರ್. ಶ್ರೀನಿವಾಸ, ಮೂರ್ತಪ್ಪ ಭೋವಿಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಎಸ್‌ಜೆಎಸ್ ಜ್ಞಾನಪೀಠದ ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ ಭಾಗವಹಿಸಿದ್ದರು.
ರಥೋತ್ಸವ ಸಾಗಿದ ಮಾರ್ಗ
ಸಿದ್ದರಾಮೇಶ್ವರ ದೇವಸ್ಥಾನದಿಂದ ಮಾಗನಹಳ್ಳಿ ರಸ್ತೆ, ಕೆ.ಆರ್ ರಸ್ತೆ, ಹರಳಿಮರ ಸರ್ಕಲ್, ಕೆ. ಆರ್. ರಸ್ತೆ ಎಕ್ಸ್ ಮುನ್ಸಿಪಾಲ್ ಜೂನಿಯರ್ ಕಾಲೇಜ್ ಮುಂಭಾಗದಿಂದ ಚಾಮರಾಜಪೇಟೆ ರಸ್ತೆ ಮೂಲಕ ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ ಚೌಕಿಪೇಟೆ ರಸ್ತೆ ಹರಬಾವಿ ಸರ್ಕಲ್ ನಿಂದ ಕೆಆರ್ ರಸ್ತೆ ಮೂಲಕ ದೇವಸ್ಥಾನಕ್ಕೆ ಸೇರಿತು.