Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ :  ಡಾ. ವೀರಣ್ಣ ಗಡಾದ್
ತಾಜಾ ಸುದ್ದಿ

ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ :  ಡಾ. ವೀರಣ್ಣ ಗಡಾದ್

Dinamaana Kannada News
Last updated: July 22, 2024 4:19 pm
Dinamaana Kannada News
Share
davanagere c g hosptial
ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ
SHARE

ದಾವಣಗೆರೆ.ಜುಲೈ. 22  :   ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಜನರು ಜೀವನವಿಡಿ ಅಂಗವೈಕಲ್ಯತೆ ಹೊಂದಿದ್ದಾರೆ, ಇದನ್ನು ತಡೆಯಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು  ಬ್ರೈನ್ ಹೆಲ್ತ್ ಕ್ಲಿನಿಕ್ ನ ನರರೋಗ ತಜ್ಞರಾದ ಡಾ. ವೀರಣ್ಣ ಗಡಾದ್ ತಿಳಿಸಿದರು.

ಸೋಮವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಇವರ ಸಹಯೋಗದೊಂದಿಗೆ ಆಯೋಜಿಸಲಾದ  ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೆದುಳು ಆರೋಗ್ಯ ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ  ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಉಪಕ್ರಮ ( ಬ್ರೈನ್ ಹೆಲ್ತ್ ಕ್ಲಿನಿಕ್ ) ಆರಂಭಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು, ಮೂರ್ಚೆರೋಗ, ತಲೆನೋವು ಹಾಗೂ ಮರೆವಿನ ಕಾಯಿಲೆಗೆ ನರರೋಗ ತಜ್ಞರು ಚಿಕಿತ್ಸೆಯನ್ನು ನೀಡುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ನರರೋಗಗಳ ಕುರಿತಂತೆ ಸಾಮಾನ್ಯ ಜನರಲ್ಲಿ ಅನೇಕ ಭಾವನೆಗಳಿದ್ದು ಮೆದುಳು ಆರೋಗ್ಯ ಮತ್ತು  ಅನಾರೋಗ್ಯದ ಕುರಿತು  ಅರಿವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು ಜನರು ರೋಗಗಳ ಬಗ್ಗೆ ಮಾಹಿತಿಯನ್ನು ಪಡೆದು ಗುಣಮುಖರಾಗಬೇಕೆಂದು ತಿಳಿಸಿದರು.

ಅನೇಕ ಕಾಯಿಲೆಗಳಿಗೆ ಜನರು ಭಯಭೀತರಾಗಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ, ಇವರಿಗೆ ಆತ್ಮವಿಶ್ವಾಸ ಮತ್ತು  ನುರಿತ ಸಮಾಲೋಚಕರಿಂದ ಆಪ್ತ ಸಮಾಲೋಚನೆಯನ್ನು ನೀಡಲಾಗುತ್ತದೆ. ಪಾರ್ಶ್ವ ವಾಯು ಕಾಯಿಲೆಗೆ ಸಂಬಂಧಪಟ್ಟ ಹಾಗೆ ಅನೇಕ ಜನರು ಫಿಜಿಯೋಥೆರಪಿ ಮಾಡಿಸಿಕೊಳ್ಳದೇ ಜೀವನವಿಡಿ ಅಂಗ ವೈಕಲ್ಯತೆಯಲ್ಲಿಯೇ ನರಳುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಫಿಜಿಯೋಥೆರಪಿ  ಮಾಡಿಸಿಕೊಂಡಲ್ಲಿ ದೈಹಿಕ ಚಲನವಲನಗಳು ಸಹಜ ರೀತಿಗೆ ಬರುವ ಸಾಧ್ಯತೆಗಳಿದೆ.  ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ಅನೇಕ ಬದಲಾವಣೆ ಬೇಕಾಗಿರುತ್ತದೆ, ಈ ನಿಟ್ಟಿನಲ್ಲಿ ನರ್ಸಿಂಗ್ ಸಿಬ್ಬಂದಿ ಸೂಕ್ತ ಮಾಹಿತಿ ನೀಡುವರು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ನಾಗೇಂದ್ರಪ್ಪ ಮಾತನಾಡಿ, ವಿಶ್ವ ಮೆದುಳು ಆರೋಗ್ಯ  ದಿನದಂದು ಮಾತ್ರ ನಾವು ನಮ್ಮ ಮೆದುಳಿನ ಆರೋಗ್ಯಕ್ಕೆ ಕ್ರಮ ವಹಿಸದೆ, ಪ್ರತಿನಿತ್ಯವೂ ಉತ್ತಮ ಜೀವನಶೈಲಿ ಹಾಗೂ ಒತ್ತಡ ನಿಭಾಯಿಸುವ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ,  ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನರರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುರುತಿಸಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ಬ್ರೈನ್ ಕ್ಲಿನಿಕ್ ಗೆ  ರೋಗಿಗಳನ್ನು ಶಿಫಾರಸು ಮಾಡಲು ಸೂಚಿಸಿದರು.

ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿಗಳು,  ನಿವಾಸಿ ವೈದ್ಯಾಧಿಕಾರಿ ಡಾ. ನಾಗವೇಣಿ, ಸಂಯೋಜಕ ಡಾ.ಸುನಿಲ್ ಕುಮಾರ್ ಎನ್,  ಬ್ರೈನ್ ಹೆಲ್ತ್ ಕ್ಲಿನಿಕ್ ಸಂಯೋಜಕರು, ಜೆಜೆ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರೆ  ವೈದ್ಯಕೀಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಆಪ್ತ ಸಮಾಲೋಚಕರಾದ ಸ್ಪೂರ್ತಿ‌. ಸಿ ಸ್ವಾಗತಿಸಿದರು, ಸುಷ್ಮಾ.ಬಿ ನಿರೂಪಿಸಿದರು. ಲತಾ. ಟಿ   ವಂದಿಸಿದರು.

TAGGED:CG Hospital DavangereDinamana.comKannada Newsಕನ್ನಡ ಸುದ್ದಿದಿನಮಾನ.ಕಾಂಸಿ.ಜಿ. ಅಸ್ಪತ್ರೆ ದಾವಣಗೆರೆ
Share This Article
Twitter Email Copy Link Print
Previous Article Applications invited ಶಿಕ್ಷಕರ ಸೇವೆ ಪಡೆಯಲು ಅರ್ಜಿ ಆಹ್ವಾನ
Next Article Karnataka Dalit Conflict Committee ಅಂಬೇಡ್ಕರ, ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ : ಪ್ರತಿಭಟನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕಂಗೊಳಿಸುತ್ತಿವೆ ಸಾಂಪ್ರದಾಯಿಕ, ಸಖಿ, ಯುವ, ವಿಶೇಷಚೇತನರ ಮತಗಟ್ಟೆಗಳು

ದಾವಣಗೆರೆ,ಮೇ.06 :  18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63…

By Dinamaana Kannada News

ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ

Make sure when leaving the world, Not just you were good, but leave  A good…

By Dinamaana Kannada News ಬಿ.ಶ್ರೀನಿವಾಸ

JJM Medical College : ಗ್ರಾಮೀಣ ವೈದ್ಯರ ಸೇವೆ ಎಲ್ಲರಿಗೂ ಸ್ಪೂರ್ತಿ : ಡಾ. ಸಂಪನ್ನ ಮುತಾಲಿಕ್  

ದಾವಣಗೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರು ಎಲ್ಲಾ ವೈದ್ಯರಿಗೆ ಸ್ಪೂರ್ತಿದಾಯಕವಾಗಬೇಕು, ಇಂತಹ ಸಮಾಜಮುಖಿ ವೈದ್ಯರನ್ನು ಕರೆತಂದು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಇಂದಿನ ವಿದ್ಯಾರ್ಥಿಗಳೇ ನಿಜವಾದ ದೇಶದ ರಕ್ಷಕರು : ವೈ.ಮಂಜಪ್ಪ ಕಾಕನೂರು

By Dinamaana Kannada News
Mohammad Hanif Siddiqui
ತಾಜಾ ಸುದ್ದಿ

77ನೇ ಗಣರಾಜ್ಯೋತ್ಸವ :ಮೊಹಮ್ಮದ್ ಹನೀಫ್ ಸಿದ್ದಿಕಿ ಅವರಿಗೆ ಪ್ರಶಸ್ತಿ ಪತ್ರ ವಿತರಣೆ

By Dinamaana Kannada News
Davanagere
ತಾಜಾ ಸುದ್ದಿ

ಗ್ರಾಮೀಣ ಜನರ ಉದ್ಯೋಗ ಕಸಿದ ಕೇಂದ್ರ: ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಜ.27 ಮಂಗಳವಾರ ಅಖಿಲ ಭಾರತ ಬ್ಯಾಂಕ್ ಮುಷ್ಕರ: ಕೆ.ರಾಘವೇಂದ್ರ ನಾಯರಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?