ದಾವಣಗೆರೆ : ತಾಲ್ಲೂಕಿನ ಹಳೇಬಾತಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ನಗರ ಸಾರಿಗೆ ಬಸ್ ವ್ಯವಸ್ಥೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸ್ಪಂದಿಸುವ ಮೂಲಕ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ.
ಶುಕ್ರವಾರದಿಂದ ಈ ಭಾಗದಲ್ಲಿ ಪ್ರತಿನಿತ್ಯ ನಗರಸಾರಿಗೆ ಬಸ್ ಸಂಚರಿಸಲಿದೆ. ದಾವಣಗೆರೆ ರೈಲ್ವೆ ನಿಲ್ದಾಣದಿಂದ ಹಳೇಬಾತಿಗೆ ಬಸ್ ಸಂಚಾರ ವ್ಯವಸ್ಥೆಗೆ ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಪ್ರತಿನಿತ್ಯ ರೈಲ್ವೆ ನಿಲ್ದಾಣದಿಂದ ಹಳೇಬಾತಿಗೆ ಬೆಳಗ್ಗೆ 8-00,9-50,11-45 ಹಾಗೂ ಮಧ್ಯಾಹ್ನ 1-35,3-45 ಸಾಯಂಕಾಲ 5-30 ಕ್ಕೆ ಎವಿಕೆ ಕಾಲೇಜ್,ಸಿಜಿ ಆಸ್ಪತ್ರೆ, ಲಕ್ಷ್ಮೀ ಫ್ಲೋರ್ ಮಿಲ್,ಶಾಮನೂರು,ಹೊಸ ಕುಂದುವಾಡ,ಕೆಹೆಚ್ ಬಿ ಕಾಲೋನಿ ಮಾರ್ಗವಾಗಿ ಹಳೇಬಾತಿಗೆ ತಲುಪಲಿದೆ.
ಅದೇ ರೀತಿ ಹಳೇಬಾತಿಯಿಂದ ಪ್ರತಿನಿತ್ಯ ಬೆಳಿಗ್ಗೆ 8-00 ಗಂಟೆಗೆ,9-50,11-45 ಹಾಗೂ ಮಧ್ಯಾಹ್ನ 1-35,3-45 ಹಾಗೂ ಸಾಯಂಕಾಲ 5-30 ಕ್ಕೆ ಹೊಸಕುಂದವಾಡ,ಶಾಮನೂರು, ಲಕ್ಷ್ಮೀಫ್ಲೋರ್ ಮಿಲ್,ಸಿಜಿ ಆಸ್ಪತ್ರೆ, ವಿದ್ಯಾರ್ಥಿ ಭವನ ಮಾರ್ಗವಾಗಿ ರೈಲ್ವೆ ನಿಲ್ದಾಣ ತಲುಪಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read also : ಮಲೇಬೆನ್ನೂರು|ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಶುಕ್ರವಾರ ಬೆಳಗ್ಗೆ ಬಸ್ ಸಂಚಾರ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಿಹಿವಿತರಣೆ ಮಾಡಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.