ದಾವಣಗೆರೆ : ಪ್ರಸ್ತುತ ಸುಗ್ಗಿಯ ಕಾಲ ಪ್ರಾರಂಭವಾಗಿದ್ದು, ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಎಲ್ಲಾ ಅಧಿಸೂಚಿತ ಕೃಷಿ ಹುಟ್ಟುವಳಿಗಳನ್ನು ಇ-ಟೆಂಡರ್ ಮುಖಾಂತರ ಖರೀದಿ, ಮಾರಾಟ ಮಾಡಲಾಗುತ್ತಿರುವುದರಿಂದ, ರೈತಬಾಂಧವರ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಇ-ಟೆಂಡರ್ ಮುಖಾಂತರ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಈ ಮೂಲಕ ಕೋರಲಾಗಿದೆ.
ತಮ್ಮ ಉತ್ಪನ್ನಗಳನ್ನು ಮಾರಾಟ ಪೂರ್ವ, ನಂತರದಲ್ಲಿ ಈ ಕೆಳಕಂಡ ಸೂಚನೆ ಕ್ರಮಗಳನ್ನು ಅನುಸರಿಸಬೇಕು.
ರೈತರು ತಾವು ಬೆಳೆದ ಉತ್ಪನ್ನಗಳನ್ನು ಒಣಗಿಸಿ ಸ್ವಚ್ಛಗೊಳಿಸಿ ಮಾರುಕಟ್ಟೆ ಪ್ರಾಂಗಣಕ್ಕೆ ತಂದು ಇ-ಟೆಂಡರ್ ಮುಖಾಂತರ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆಯಿರಿ.
ರೈತರು ತಮ್ಮ ಉತ್ಪನ್ನಗಳಿಗೆ ಮಾರಾಟ ಮಾಡಿದ ನಂತರ ಯಾವುದೇ ರೀತಿಯ ಕಮೀಷನ್ ನೀಡಬಾರದು. ಉತ್ಪನ್ನಗಳ ಮಾರಾಟವಾದ ನಂತರ ಪೇಟೆ ಕಾರ್ಯಕರ್ತರುಗಳಿಂದ ಬಿಳಿ ಚೀಟಿ ತಿರಸ್ಕರಿಸಿ-ಅಧಿಕೃತ ಲೆಕ್ಕ ತೀರುವಳಿ ಪಟ್ಟಿಯನ್ನೇ ಕೇಳಿ ಪಡೆಯಿರಿ.
Read also : ಹಸಿಕಸ ಒಣಕಸ,ನೈರ್ಮಲ್ಯ ಕಸಗಳೆಂದು ಪ್ರತ್ಯೇಕವಾಗಿ ವಿಂಗಡಿಸಿ ನೀಡಿ : ಪಾಲಿಕೆ ಆಯುಕ್ತೆ ರೇಣುಕಾ
ತಮ್ಮ ಉತ್ಪನ್ನಗಳನ್ನು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ತೂಕದ ಯಂತ್ರದ ಮೂಲಕವೇ ತೂಕ ಮಾಡಿಸಿ ನಿಖರ ತೂಕ ಖಾತರಿಪಡಿಸಿಕೊಳ್ಳಿ.
ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಯಾವುದೇ ರೀತಿಯ ಶಾಂಪಲ್‍ಗಳನ್ನು, ತಳಗಾಳು, ಸೂಟ್, ಫೆಟ್ ನೀಡಬೇಡಿ, ಒಂದು ವೇಳೆ ಯಾರಾದರು ಪಡೆದುಕೊಂಡಲ್ಲಿ ಅಂತವರ ವಿರುದ್ಧ ಲಿಖಿತವಾಗಿ ಕಚೇರಿಗೆ ದೂರನ್ನು ನೀಡಬೇಕು.
ರೈತರು ಕೃಷಿ ಚಟುವಡಿಕೆಯಲ್ಲಿ ತೊಡಗಿರುವಾಗ ಅಪಘಾತ ಅಥವಾ ಮರಣ ಸಂಭವಿಸಿದರೆ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿಯಲ್ಲಿ ಪರಿಹಾರ ಪಡೆಯಬಹುದು.
ಮಾರುಕಟ್ಟೆಗಳಲ್ಲಿನ ಉತ್ಪನ್ನಗಳ ಬೆಲೆ ಹಾಗೂ ಇತರೆ ಮಾಹಿತಿಗಾಗಿ https://www. krama.kar.nic.in / http:// agmarknet.nic.in/ ವೆಬ್ ಸೈಟ್ ನಲ್ಲಿ ಪಡೆಯಬಹುದು.
ಯಾವುದೇ ಸಲಹೆ ಸೂಚನೆ ಇದ್ದಲ್ಲಿ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.
