ದಾವಣಗೆರೆ : ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿತರನ್ನು ಬಂಧಿಸಿರುವ ಬಸವಾಪಟ್ಟಣ ಪೊಲೀಸ್ ಠಾಣೆಯ ಪೊಲೀಸರು 3,75,400/- ರೂ ಮೌಲ್ಯದ ಖೋಟಾ ನೋಟುಗಳು ವಶಕ್ಕೆ ಪಡೆದಿದ್ದಾರೆ.
ಚಿರಡೋಣಿ ಗ್ರಾಮದ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಎದುರಿನ ರಸ್ತೆಯಲ್ಲಿ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರು ದಾಳಿ ನಡೆಸಿ ಸಂತೋಷಕುಮಾರ, ವಿರೇಶ ಬಿ.ಪಿ ದಸ್ತಗಿರಿ ಮಾಡಿ ಬಳಿ ಇದ್ದ 500/- ರೂ ಮುಖ ಬೆಲೆಯ 2 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕೆಎ-27 ಕ್ಯೂ 1629 ನೇ ಮೋಟಾರ್ ಸೈಕಲ್ ವಶ ಪಡೆಸಿಕೊಂಡು ಮಾಹಿತಿಯ ಮೇರೆಗೆ ಕಬ್ಬಳ ಗ್ರಾಮದ ಕರೆಕಟ್ಟೆ ರಸ್ತೆಯಲ್ಲಿದ್ದ ಕುಬೇರಪ್ಪ, ಹನುಮಂತಪ್ಪ ಮೇಲೆ ದಾಳಿ ಮಾಡಿ ಅವರ ಬಳಿ ಇದ್ದ 500/- ರೂ ಮುಖ ಬೆಲೆಯ 28 ಸಾವಿರ ಮೌಲ್ಯದ ಹಾಗೂ 200/- ರೂ ಮುಖ ಬೆಲೆಯ 47,400/- ರೂ ಮೌಲ್ಯದ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡು ಎ-03 ಆರೋಪಿಯ ಕುಕ್ಕವಾಡ ಗ್ರಾಮದ ಮನೆಯಲ್ಲಿಟ್ಟಿದ್ದ 500/- ರೂ ಮುಖ ಬೆಲೆಯ 1 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣದಲ್ಲಿ 4 ಜನ ಆರೋಪಿತರಿಂದ 500/-ಹಾಗು 200/- ರೂ ಮುಖ ಬೆಲೆಯ ಒಟ್ಟು 3,75,400/- ರೂ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Read also : ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ
ಆರೋಪಿತರ ಹಿನ್ನೆಲೆ: ಆರೋಪಿ ಕುಬೇರಪ್ಪ ಮೇಲೆ ದಾವಣಗೆರೆ ಜಿಲ್ಲೆಯ ಹರಿಹರ ನಗಹರದಲ್ಲಿ 01 ಪ್ರಕರಣ, ವಿಜಯನಗರ ಜಿಲ್ಲೆಯ ಹೊಸಪೇಟೆ ನರ ಠಾಣೆಯಲ್ಲಿ 01 ಪ್ರಕರಣ, ಮೈಸೂರು ಜಿಲ್ಲೆಯಲ್ಲಿ 01 ಪ್ರಕರಣ ಒಟ್ಟು 03 ಖೋಟಾನೋಟು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ
ಪತ್ತೆ ಕಾರ್ಯದಲ್ಲಿ ಭಾಗಿಯಾದ ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಬಸವಾಪಟ್ಟಣ ಠಾಣೆಯ ಇಮ್ಮಿಯಾಜ್, ಪಿ.ಎಸ್.ಐ (ಕಾಹಿಸು), ಭಾರತಿ ಜೆ.ಇ, ಮ.ಪಿ.ಎಸ್.ಐ (ತನಿಖೆ) ಸಿಬ್ಬಂದಿಯವರಾದ ರಂಗನಾಥ, ಶಂಕರಗೌಡ, ಬಸವರಾಜ್, ಬಾಲಾಜಿ, ಇಬ್ರಾಹಿಂ, ಅಣ್ಣೇಶ, ಮೋಹನ್, ಅಂಜಿನಪ್ಪ, ಪ್ರಕಾಶ್, ಎಂ.ಎಂ. ಖಾನ್, ತಿಮ್ಮರಾಜು, ವೆಂಕಟೇಶ್ ಹಾಗೂ ಇರ್ಷಾದ್ ಇವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.