ದಾವಣಗೆರೆ: ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಮಾರುಕಟ್ಟೆಯಲ್ಲಿ ಧಾನ್ಯಗಳ ಪರಿಶೀಲನೆ ನಡೆಸಿದರು.
ಕಳಪೆ ಧಾನ್ಯಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎನ್ನುವ ಆರೋಪ ಹಿನ್ನಲೆಯಲ್ಲಿ ಇಲ್ಲಿನ ಚೌಕಿಪೇಟೆಯಲ್ಲಿ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲನೆ ನಡೆಸಿದರು.
ಚೌಕಿಪೇಟೆಯಲ್ಲಿ ಧಾನ್ಯಗಳ ಮಾರಾಟಗಾರರು ಶಾಸಕರಿಗೆ ಧಾನ್ಯಗಳನ್ನು ನೀಡಿ ಪರೀಕ್ಷೆಗೆ ಒಳಪಡಿಸಿದ್ದು ಕಂಡು ಬಂತು. ಉತ್ತಮ ಗುಣ ಮಟ್ಟದ ಧ್ಯಾನ್ಯಗಳನ್ನು ಮಾರಾಟ ಮಾಡುವಂತೆ ಅಂಗಡಿಗಳಲ್ಲಿ ಮಾರಾಟಗಾರರಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಧ್ಯಾನಗಳ ಮಾರಾಟಗಾರರು ಇದ್ದರು.