ದಾವಣಗೆರೆ: ಇಲ್ಲಿನ ಕೆಟೆಜೆ ನಗರದ ಪಿಎಸ್‌ಐ ನಾಗರಾಜ (59) ಅವರು ತುಮಕೂರಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಟಿಜೆ ನಗರದ ಪೊಲೀಸ್ ವಸತಿ ಗೃಹದಲ್ಲಿ ವಾಸವಿದ್ದ ಪಿಎಸ್‌ಐ ನಾಗರಾಜ ಜುಲೈ 1ರಂದು ಮನೆಯಿಂದ ಹೋಗಿದ್ದು, ಮೊಬೈಲ್ ಸ್ವಿಚ್ ಆಗಿದೆ. ಕುಟುಂಬಸ್ಥರು ಹುಡುಕಾಟ ನಡೆಸಿದರೂ ನಾಪತ್ತೆಯಾಗದ ಹಿನ್ನೆಲೆಯಲ್ಲಿ ಜುಲೈ ೨ರಂದು ಕೆಟಿಜೆ ನಗರ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು.
ನಾಗರಾಜರವರಿಗೆ ಬಿಪಿ, ಶುಗರ್, ವೆರಿಕೋಸ್ ವೇನ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನಲೆ ಮಾನಸಿಕ ಸಮಸ್ಯೆಗೆ ಒಳಗಾಗಿದ್ದರು.
ಈ ಕುರಿತು ಹೇಳಿಕೆ ನೀಡಿರುವ ಮೃತ ನಾಗರಾಜ ಪತ್ನಿ ಲಲಿತಾ ನಮಗೆ ಒಂದು ಗಂಡು, ಒಂದು ಹೆಣ್ಣು ಸೇರಿ ಇಬ್ಬರು ಮಕ್ಕಳಿದ್ದಾರೆ. ಮಗಳಿಗೆ ಮದುವೆ ಮಾಡಿಕೊಟ್ಟಿದ್ದು ಈಗ ತುಂಬು ಗರ್ಭಿಣಿಯಿದ್ದಾಳೆ. ಮಗ ಇಂಜಿನಿಯರಿAಗ್ ಮುಗಿಸಿದ್ದಾನೆ. ನಿವೃತ್ತಿಗೆ ಇನ್ನೂ ಒಂದು ವರ್ಷ ಬಾಕಿ ಇತ್ತು. ಜು ೧ರಂದು ಮನೆಯಿಂದ ಹೋಗಿದ್ದರು. ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಹುಡುಕಾಟ ನಡೆಸಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ವಿ ಎಂದು ತಿಳಿಸಿದ್ದಾರೆ.