ದಾವಣಗೆರೆ (Davanagere): ಪ್ರಸ್ತುತ ದಿನಗಳಲ್ಲಿ ಯುವಕರು ಸಂಚಾರ ನಿಮಮವನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಚಿತ್ರನಟ ಮಂಡ್ಯ ರಮೇಶ್ ಹೇಳಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಮದ್ಯಪಾನ ಸೇವನೆ, ಮಾದಕ ವಸ್ತು ಸೇವನೆಯಿಂದ ಚಾಲನೆ ಮಾಡುವುದು, ತ್ರಿಬಲ್ ರೈಡಿಂಗ್ , ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ. ಇದರಿಂದ ಅಪಘಾತಗಳಾಗಿ ನಮ್ಮ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಇದರಿಂದ ನಿಮ್ಮನ್ನೆ ನಂಬಿಕೊಂಡಿರುವಂತಹ ನಿಮ್ಮ ಕುಟುಂಬ ಅನಾಥವಾಗುತ್ತದೆ. ಆದ್ದರಿಂದ ಯುವ ಪೀಳಿಗೆ ಓದಿನ ಜೊತೆಗೆ ಕಾನೂನು ನಿಯಮಗಳನ್ನು ತಪ್ಪದೇ ಪಾಲಿಸಿ, ಇನ್ನೊಬ್ಬರಿಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಸಂಚಾರಿ ನಿಯಮ ಪಾಲಿಸಿ ರಸ್ತೆ ಅಪಘಾತ ತಪ್ಪಿಸಿ ಎಂದು ಜ.1 ರಿಂದ 31ರ ವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ನಡೆಸಲಾಗುತ್ತಿದೆ. ನೀವು ಬೇಜವಾಬ್ದಾರಿತನದಿಂದ ಸಂಚಾರಿ ನಿಯಮ ಪಾಲಿಸದೇ ಅಪಘಾತ ಮಾಡಿ ಬೇರೆಯವರ ಪ್ರಾಣ ತೆಗೆದು, ಅವರ ಕುಟುಂಬಕ್ಕೂ ತೊಂದರೆ ನೀಡುತ್ತೀದ್ದೀರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತಾ ಹೀರೋ ಆಗಿರಿ ಎಂದು ಕರೆ ನೀಡಿದರು.
ಕಳೆದ 2024 ರಲ್ಲಿ ಒಟ್ಟು 4 ಲಕ್ಷದ 80 ಸಾವಿರ ಅಪಘಾತಗಳಾಗಿದ್ದು ಅದರಲ್ಲಿ 1 ಲಕ್ಷದ 72 ಸಾವಿರ ಜನ ಸಾವನ್ನಪ್ಪಿದ್ದಾರೆ. ಇದು ಗಂಭೀರವಾದ ವಿಷಯ. ಆಗಾಗಿ ವಾಹನ ಸವಾರರು ಮೊದಲು ರಸ್ತೆ ಸುರಕ್ಷತೆಯ ಬಗ್ಗೆ ತಿಳಿದುಕೊಂಡು ಅದನ್ನು ಶೇಕಡಾ 100 ರಷ್ಟು ಪಾಲನೆ ಮಾಡಿದರೆ ಅಪಘಾತಗಳನ್ನು ಕಡಿಮೆ ಮಾಡುವುದ ಜೊತೆಗೆ ತಮ್ಮಗಳ ಜೀವ ಹಾಗೂ ಬೇರೆಯವರ ಜೀವಗಳನ್ನು ಉಳಿಸಬಹುದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಷಾ ವಿಧಿ ಬೋಧಿಸಿದರು.
ಎಎಸ್ಪಿಗಳಾದ ವಿಜಯ್ಕುಮಾರ್ ಸಂತೋಷ್, ಮಂಜುನಾಥ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ರವರು, ಪೊಲೀಸ್ ನಿರೀಕ್ಷಕರಾದ ಲಕ್ಷ್ಮಣ್ ನಾಯ್ಕ್, ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಶಿಲ್ಪಾ, ಸುನೀಲ್ ಕುಮಾರ ರವರು ಹಾಗೂ ಡಿಡಿಪಿಯು ಕರಿಸಿದ್ದಪ್ಪ ಮತ್ತು ಹಲವು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂಧಿಗಳು ಹಾಜರಿದ್ದರು.
Read also : ಎಸ್.ಎಸ್ ಹೈಟೆಕ್ ಆಸ್ಪತ್ರೆ ಬಳಿಯ ಕೆಳಸೇತುವೆ ಪರಿಶೀಲನೆ : ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳೊಂದಿಗೆ ಸಂಸದರ ಚರ್ಚೆ