ದಾವಣಗೆರೆ : ಕ.ರಾ.ರ.ಸಾ. ನಿಗಮದ ವತಿಯಿಂದ ಬೆಂಗಳೂರು ದಾವಣಗೆರೆ ಮಾರ್ಗದ ಸಮಯ ಇ.ವಿ ಪವರ್ ಪ್ಲಸ್ ಸೇವೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬರುವಾಗ ಬಾಡಾ ಕ್ರಾಸ್-ವಿದ್ಯಾನಗರ- ಗುಂಡಿ ವೃತ್ತದ-ವಿದ್ಯಾರ್ಥಿಭವನ-ನೂತನ ಬಸ್ ನಿಲ್ದಾಣದ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಬಸ್ ಸಮಯದ ವೇಳೆ: ಬೆಂಗಳೂರು-ಸಂಜೆ 4.50 ಕ್ಕೆ ಹೊರಟು ದಾವಣಗೆರೆಗೆ ರಾತ್ರಿ 9.45 ತಲುಪಲಿದೆ. ಸಂಜೆ 6.30ಕ್ಕೆ ಹೊರಟು ರಾ.11.15 ಕ್ಕೆ ದಾವಣಗೆರೆ, 7.15 ಕ್ಕೆ ಹೊರಟು ರಾತ್ರಿ 1 ಕ್ಕೆ ದಾವಣಗೆರೆ, ರಾ. 8.15 ಕ್ಕೆ ಹೊರಟು ರಾತ್ರಿ 1.15ಕ್ಕೆ ದಾವಣಗೆರೆ, ರಾ.9.15ಕ್ಕೆ ಹೊರಟು ರಾತ್ರಿ 3 ಕ್ಕೆ ದಾವಣಗೆರೆ, ರಾತ್ರಿ 11.58 ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗಿನಜಾವ 5 ಗಂಟೆಗೆ ದಾವಣಗೆರೆ ತಲುಪಲಿದೆ.
Read also : ಹರಿಹರ : ನೌಜವಾನ್ ಗ್ರೂಪ್ ಆಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ
ಈ ಸಾರಿಗೆಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಲಭ್ಯವಿದ್ದು, ಪ್ರಯಾಣಿಕರು ಕ.ರಾ.ರ.ಸಾ ನಿಗಮದ www.ksrtc.in ನಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್ ಶಿವಕುಮಾರಯ್ಯ ತಿಳಿಸಿದ್ದಾರೆ.
