ದಾವಣಗೆರೆ : ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ್ ಆದಾಲತ್‌ನಲ್ಲಿ ವಿವಾಹ ವಿಚ್ಚೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 24 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ನ್ಯಾಯಾಧೀಶ ಸಮ್ಮುಖದಲ್ಲಿ ತೀರ್ಮಾನಿಸಿದರು.
ದಾವಣಗೆರೆ ನ್ಯಾಯಲಯಗಳಲ್ಲಿ 20, ಹರಿಹರ ತಾಲ್ಲೂಕು ನ್ಯಾಯಾಲಯಗಳಲ್ಲಿ 03, ಚನ್ನಗಿರಿ ತಾಲ್ಲೂಕು ನ್ಯಾಯಾಲಯಗಳಲ್ಲಿ 01, ಪ್ರಕರಣದಲ್ಲಿ ವಿವಾಹ ವಿಚ್ಛೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಒಟ್ಟಾರೆ 24 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದರು.
ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ರ್ಕಾಯದರ್ಶಿಗಳು, ವಕೀಲರ ಸಂಘದ ಅಧ್ಯಕ್ಷರು ಮತ್ತು ಇತರರು ಅಭಿನಂಧನೆ ಸಲ್ಲಿಸಿ ಒಂದಾದ ಜೋಡಿಗಳ ಮುಂಬರುವ ಜೀವನ ಸುಖಕರವಾಗಲೀ ಎಂದು ಸಿಹಿ ಹಂಚಿ ಹಾರೈಸಿದರು.
ಸರ್ವೋಚ್ಚ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯಗಳ ನಿರ್ದೇಶನದಂತೆ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಹಿನ್ನಯಲ್ಲಿ ಸೆ 13 ರಂದು ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಆದಾಲತ್ ನಡೆದು ಜಿಲ್ಲೆಯಲ್ಲಿ ಒಟ್ಟು 5684 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು 10,37,26,307/- ಹಣದ ಪರಿಹಾರ ಆಗಿದೆ ಮತ್ತು 7,19,455 ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 61,46,80,196/- ಹಣದ ವ್ಯವಹಾರದ ಸರ್ಕಾರಿ ವಸೂಲಾತಿ ಮತ್ತು ಪರಿಹಾರ ಇತ್ಯಾದಿಯಾಗಿ ರಾಜೀ ಮೂಲಕ ಮುಕ್ತಾಯಗೊಂಡಿವೆ.
46 ಅಪರಾಧಿಕ ಪ್ರಕರಣಗಳು, 142 ಚಕ್ ಅಮಾನ್ಯ ಪ್ರಕರಣಗಳು, 29 ಬ್ಯಾಂಕ್ ವಸೂಲಾತಿ ಕೇಸ್‌ಗಳು, 15 ಇತರೆ ಹಣ ವಸೂಲಾತಿ, 55 ಅಪಘಾತ ಪರಿಹಾರ ಪ್ರಕರಣಗಳು, 88 ವಿದ್ಯುತ್ ಕಳ್ಳತನದ ಪ್ರಕರಣಗಳು, 35 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 54 ಮೊಟಾರು ವಾಹನ ಪರಿಹಾರ ಜಾರಿ ಅರ್ಜಿ, 65 ಇತರೆ ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 60 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 47 ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 5,684 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ.
ಜಿಲ್ಲೆಯಾದ್ಯಂತ ಸುಮಾರು 845 ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಶ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಡಲಾಯಿತು.
Read also : ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ
ವ್ಯಾಜ್ಯಾ ಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಾಸೂಲಾತಿ, ಕಾರ್ಮಿಕ ವ್ಯಾಜ್ಯಾಗಳು, ನೀರಿನ ಬಾಕಿ ವಸೂಲಾತಿ, ಕಂದಾಯ ಪ್ರಕರಣಗಳು, ಟ್ರಾಫಿಕ್ ಪ್ರಕರಣಗಳು ಇತ್ಯಾದಿ ಸೇರಿದಂತೆ ಒಟ್ಟಾರೆಯಾಗಿ 7,19,455 ಪ್ರಕರಣಗಳು ಇತ್ಯರ್ಥಗೊಂಡು ಮೇಲ್ಕಾಣಿಸಿದ ಎಲ್ಲಾ ಪ್ರಕರಣಗಳಿಂದಾಗಿ 61,46,80,196/-ವಸೂಲಾತಿಯಾಗಿದೆ. ಸದರಿ ಪ್ರಕರಣಗಳಲ್ಲಿ ಸರ್ಕಾರವು ಸಂಚಾರ ಇ-ಚಲನ್ ಪ್ರಕರಣಗಳಿಗೆ ಸಂಬAಧಪಟ್ಟ 25,772 ಪ್ರಕರಣಗಳೂ ಕೂಡ ಸೇರಿವೆ.
ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ. ಹೆಚ್ಚು ಪ್ರಕರಣಗಳು ರಾಜೀಯಾಗಲು ಮತ್ತು ಪಕ್ಷಗಾರರಿಗೆ ಯೋಗ್ಯ ಮಾಹಿತಿ, ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಿದ ಜಿಲ್ಲೆಯ ಎಲ್ಲಾ ಗೌ॥ ನ್ಯಾಯಾಧೀಶರಿಗೂ, ಸಂಧಾನಕಾರರಿಗೂ, ವಕೀಲರಿಗೂ, ಲೋಕ ಅದಾಲತ್ ಯಶಸ್ವಿಗೊಳಿಸಲು ಸಹಕಾರಿಯಾದ ನ್ಯಾಯಾಂಗ ಇಲಾಖೆ ಎಲ್ಲರಿಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ ಕರಣ್ಣವರ ಅಭಿನಂದಿಸಿದ್ದಾರೆ.