ಚನ್ನಗಿರಿ : ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮಟ್ಕಾ ಜೂಜಾಟ ಪ್ರಕರಣದ ಆರೋಪಿ ಆದೀಲ್ ಎಂಬಾತನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಮೃತಪಟ್ಟಿದ್ದು ಈ ಹಿನ್ನಲೆಯಲ್ಲಿ ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯ ಮೇಲೆ ಮೃತನ ಸಂಬಂಧಿಕರು ಕಲ್ಲು ತೂರಾಟ ನಡೆಸಿದ್ದು, 7 ಪೊಲೀಸ್ ವಾಹನಗಳನ್ನು ಜಖಂ ಗೊಳಿಸಿದ್ದು ಹಾಗೂ 11 ಜನ ಪೊಲೀಸ್ ಸಿಬ್ಬಂದ್ದಿಗಳಿಗೆ ಗಾಯಗಳಾಗಿದ್ದವು.
ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಪ್ರಕ್ಷ್ಯಬ್ದ ಪರಿಸ್ಥಿತಿ ನಿರ್ಮಾಣ ಗೊಂಡಿದ್ದು ಮೃತ ವ್ಯಕ್ತಿಯ ಶವ ಪರೀಕ್ಷೆಯನ್ನು ದಾವಣಗೆರೆಯ ಚಿಗಟೇರಿ ಆಸ್ಫತ್ರೆಯಲ್ಲಿ ಶನಿವಾರ ನಡೆಸಿದ್ದು ಅಲ್ಲಿಂದ ಮಧ್ಯಾನ 2.15ರ ಸುಮಾರಿಗೆ ಚನ್ನಗಿರಿ ಪಟ್ಟಣದಲ್ಲಿರುವ ಮೃತನ ನಿವಾಸಕ್ಕೆ ಮೃತ ದೇಹವನ್ನು ತರಲಾಯಿತು.
ನಂತರ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಶಾಂತಯುತವಾಗಿ ಅಂತ್ಯ ಸಂಸ್ಕಾರವನ್ನು ಪಟ್ಟಣದ ತರಳಬಾಳು ವೃತ್ತದಲ್ಲಿರುವ ಖಬರಸ್ಥಾನದಲ್ಲಿ ನಡೆಸಲಾಯಿತು.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚನ್ನಗಿರಿಯ ಡಿ.ವೈ.ಎಸ್.ಪಿ ಪ್ರಶಾಂತ್ ಜಿ.ಮುನ್ನೂಳಿ, ಸಿ.ಪಿ.ಐ ನಿರಂಜನ್ ಇವರನ್ನು ಅಮಾನತ್ತು ಪಡಿಸಲಾಗಿದೆ ಎಂಬ ವಿಚಾರ ಹರಿದಾಡುತ್ತಿದ್ದು ಈ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶಗಳು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಸ್ಫಷ್ಠ ಪಡಿಸಿದರು.
ಪಟ್ಟಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಪಟ್ಟಣದ ಆಯಾ ಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೃತ ದೇಹವು ಮೃತನ ನಿವಾಸವನ್ನು ತಲುಪುತ್ತಿದ್ದಂತೆಯೇ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ರಾತ್ರಿ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿದ್ದು ಈ ಘಟನೆ ಕುರಿತಂತೆ ಪೊಲೀಸ್ ಠಾಣೆಯ ಸುತ್ತಲೂ ಮತ್ತು ನಮ್ಮ ಸಿಬ್ಬಂದ್ದಿಗಳು ಮಾಡಿಕೊಂಡಿರುವ ವಿಡಿಯೋ ಚಿತ್ರಿಕರಣಗಳನ್ನು ಗಮನಿಸಿ ತಪ್ಪಿತಸ್ಥರನ್ನು ಬಂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಮಾಧ್ಯಮದವರಿಗೆ ತಿಳಿಸಿದರು.
ನಿನ್ನೆ ರಾತ್ರಿ ಮಟ್ಕಾ ಜೂಜಾಟದ ಹಿನ್ನಲೆಯಲ್ಲಿ ವಿಚಾರಣೆಗಾಗಿ ಕರೆಸಿದ್ದ ಆರೋಪಿ ಆದೀಲ್ ಪೊಲೀಸ್ ಠಾಣೆಯಲ್ಲಿ 4ರಿಂದ 5ನಿಮಿಷಗಳ ಕಾಲನೂ ಇರಲಿಲ್ಲ ಎಂದು ತಿಳಿಸುತ್ತಾ ವಿಚಾರಣೆಗೆ ಕರೆತಂದ ಕೆಲ ನಿಮಿಷಯಗಳಲ್ಲಿಯೇ ಆತ ಕುಸಿದು ಬಿದಿದ್ದು ತಕ್ಷಣವೇ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಅತ ಮೃತಪಟ್ಟಿದ್ದಾನೆ.
ಈ ದಿನ ಆದೀಲ್ ನ ಮೃತ ದೇಹದ ಮರಣೋತ್ತರ ಪರೀಕ್ಷೆಯು ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.