ದಾವಣಗೆರೆ: ನಗರದ ಪ್ರತಿಷ್ಠಿತ ಆಭರಣಗಳ ಮಾರಾಟ ಶೋರೂಮ್ ರಾಧಾಕೃಷ್ಣ ಜ್ಯುವೆಲರ್ಸ್ ನಿಂದ ಈ ಬಾರಿ ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಕಿ ಡ್ರಾ ಬಹುಮಾನಗಳ ಘೋಷಣೆ ಮಾಡಿದ್ದು, ಒಬ್ಬ ಅದೃಷ್ಟಶಾಲಿ 1 ಲಕ್ಷ ರೂಪಾಯಿ ಮೆಗಾ ಬಂಪರ್ ಬಹುಮಾನ ಗಳಿಸಿದ್ದು, ಮೂವರು ಅದೃಷ್ಟಶಾಲಿಗಳು ತಲಾ 50 ಸಾವಿರ ರೂಪಾಯಿ ಬಹುಮಾನ ಗಳಿಸಿದ್ದರಾರೆ.
ಗುಣಮಟ್ಟದ ಆಭರಣಗಳ ಮಾರಾಟದಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ರಾಧಾಕೃಷ್ಣ ಜ್ಯುವೆಲರ್ಸ್ ಈ ಬಾರಿ ಹಬ್ಬದ ಸಂಭ್ರಮಕ್ಕೆ ಭರಪೂರ ಬಹುಮಾನಗಳ ಘೋಷಣೆ ಮಾಡಿದ್ದು, ಹಲವು ಕೊಡುಗೆ ನೀಡಿದೆ. ದಾವಣಗೆರೆ ಬೂದಾಳ್ ರಸ್ತೆಯ ನಿವಾಸಿ ಕೆ.ವಿನಾಯಕ ಎಂಬುವವರು 1 ಲಕ್ಷ ರೂಪಾಯಿ ಬಹುಮಾನ ಗಳಿಸಿದ್ದು, ಗೋಪಗೊಂಡನಹಳ್ಳಿ ಆಫ್ರಿನ್, ಹೊಳಲ್ಕೆರೆ ರೇವತಿ ಗಾರ್ಡ್‌ನ ಅರ್ಚನಾ ಬಿ, ದಾವಣಗೆರೆ ಬಾಷಾನಗರದ ಜಮೀರ್ ಉಲ್ಲಾ 50 ಸಾವಿರ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಹಲವು ಗ್ರಾಹಕರು 5 ಸಾವಿರ ಹಾಗೂ 2500 ರೂ ಬಹುಮಾನ ಗಳಿಸಿದ್ದಾರೆ.