ದಾವಣಗೆರೆ (Davanagere): ಮಾನವನ ಜೀವನದಲ್ಲಿ ಬಾಲ್ಯದ ದಿನಗಳ ಕ್ಷಣಗಳು ಅವು ಬದುಕಿನ ಸ್ವರ್ಗದ ಕ್ಷಣಗಳಿಗೆ ಸಮಾನವಾಗಿವೆ ಎಂದು ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು.
ದಾವಣಗೆರೆ ವಿರಕ್ತಮಠದಲ್ಲಿರುವ ಎಸ್ ಜೆ ಎಂ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡು ಆಶೀರ್ವಚನ ನೀಡಿದರು.
ಬಹಳಷ್ಟು ಜನರು ಸ್ವರ್ಗವನ್ನು ನೋಡಬೇಕೆಂದು ಬಹಳ ಆಸೆಯನ್ನು ಪಡುತ್ತಾರೆ ನಿಜವಾಗಿಯೂ ಮಾನವನ ಜೀವನದಲ್ಲಿ ಸ್ವರ್ಗದ ಅನುಭವ ಸಿಗಬೇಕಾದರೆ ನಮ್ಮ ಬಾಲ್ಯಕ್ಕೆ ನಾವು ಹೋಗಬೇಕು ಅರ್ಥಾತ್ ನಮ್ಮ ಮನಸ್ಸು ಮಗುವಾಗಬೇಕು ಆಗ ಮಾತ್ರ ಬದುಕಿನ ಪ್ರತಿಕ್ಷಣವೂ ಸ್ವರ್ಗದ ಅನುಭವವನ್ನು ಪಡೆಯಲು ಸಾಧ್ಯ . ಮಾನವ ಹುಟ್ಟುತ್ತಾ ವಿಶ್ವಮಾನವನಾಗಿರುತ್ತಾನೆ ಬೆಳೆಯುತ್ತಾ ಜಾತಿ ಮಾನವ ಅವನು ಜಾತಿ ಮಾನವ , ಮತೀಯ ಮಾನವ ನಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಅವನನ್ನು ಮತ್ತೆ ವಿಶ್ವಮಾನವನನ್ನಾಗಿ ರೂಪಿಸುವ ಶಿಕ್ಷಣವನ್ನು ನೀಡಬೇಕು ಎಂದು ಸ್ವಾಮೀಜಿ ಹೇಳಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ರೋಷನ್ ಜಮೀರ್ , ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಎಸ್ ಜೆ ಎಂ ಸ್ಕೂಲ್ 9 ನೇ ತರಗತಿಯ ವಿದ್ಯಾರ್ಥಿ ಶೋಯೆಬ್ ಪಠಾಣ್ ಮುಂಬೈನಲ್ಲಿ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.