ದಾವಣಗೆರೆ: ಯುವಜನೋತ್ಸವ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಜಾನಪದ ಮೇಳವನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ನೆರವೇರಿಸಿದರು. ಜನಪದ ಲೋಕದ ರಂಗು ಬೆಣ್ಣೆನಗರಿಯನ್ನು ಆವರಸಿತ್ತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮೇಳಕ್ಕೆ ಚಾಲನೆ ನೀಡುತ್ತಿದ್ದಂತೆ ನೃತ್ಯ, ಸಂಗೀತಗಳ ಸದ್ದು ಜೋರಾದವು. ಡೊಳ್ಳು ಸೇರಿದಂತೆ ಹಲವು ಕಲಾ ತಂಡಗಳು ನೋಡಗರನ್ನು ಸೆಳೆದವು.
ಈ ವೇಳೆ ಶಾಸಕರಾದ ಬಿಪಿ ಹರೀಶ್, ಮೇಯರ್ ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಡಿಸಿ ಗಂಗಾಧರ ಸ್ವಾಮಿ ಜಿ.ಎಂ, ಸಿಇಓ ಡಾ.ಸುರೇಶ್ ಬಿ.ಇಟ್ನಾಳ್ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು. ಜಾನಪದ ಕಲಾ ತಂಡ, ಕುಂಬ ಮೇಳ, ಲಂಬಾಣಿ ನೃತ್ಯ ಸೇರಿದಂತೆ ಅನೇಕ ಜಾನಪದ ಪ್ರಕಾರಗಳಿಂದ ಆಕರ್ಷಕ ಮೆರವಣಿಗೆಗೆ ಚಾಲನೆ ದೊರೆಯಿತು.