Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನ ಹೆಮ್ಮೆ : ಭಾವೈಕ್ಯದ ಅನನ್ಯ ಬಂಧು- ಎಲ್.ಖಾದರ್ ಬಾಷಾ
Blog

ದಿನಮಾನ ಹೆಮ್ಮೆ : ಭಾವೈಕ್ಯದ ಅನನ್ಯ ಬಂಧು- ಎಲ್.ಖಾದರ್ ಬಾಷಾ

Dinamaana Kannada News
Last updated: July 14, 2024 3:46 pm
Dinamaana Kannada News
Share
dinamaana
ಖಾದರ್ ಬಾಷಾ
SHARE

Kannada News | Dinamaanada Hemme  | Dinamaana.com | 14-07-2024

ಪಿಂಜಾರ ಬೀದಿಯ ಪೀರ್ ಬಾಷಾ ಮತ್ತು ಬಿಚ್ಚುಗತ್ತಿ ಬೀದಿಯ ಲಪಾಟಿ ಖಾದರ್ ಬಾಷಾ ಈರ್ವರೂ ಏಕಕಾಲಕ್ಕೆ ಕವಿತೆ ಬರೆಯಲು ಸುರುಮಾಡಿದವರು.

1990 ರ ದಶಕದಿಂದ ಇಲ್ಲಿಯವರೆಗಿನ ಮೂರೂ ಮೂರೂವರೆ ದಶಕಗಳ ಅವಧಿಯಲ್ಲಿ ಹೀಗೆ ಸಾಗುವಾಗ ಯಾರು ಗೆದ್ದರು , ಯಾರು ಸೋತರು ಎಂಬುದು ಇಲ್ಲಿ ಮುಖ್ಯವಲ್ಲ.ಇಬ್ಬರ ಗುರುಮನೆಯೂ ಶೇಷಗಿರಿ ಎಂಬ ಸಂಗಾತಿಯೊಬ್ಬನ ಮನೆಯಾಗಿತ್ತು ಎಂಬುದಂತೂ ಸತ್ಯ.

ಶೇಷಗಿರಿ-ಈ ಹುಡುಗರ ಭಾವಕ್ಕೆ ಒದಗಿದ ಚೈತನ್ಯ (Khader Basha)

ಶೇಷಗಿರಿ-ಈ ಹುಡುಗರ ಭಾವಕ್ಕೆ ಒದಗಿದ ಚೈತನ್ಯವೇ ಆಗಿದ್ದರು.ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಾರದು ಎಂಬ ಅದಮ್ಯ ನಂಬಿಕೆಯಲ್ಲಿಯೇ ತಮ್ಮದೇ ಆದ ಅಭಿವ್ಯಕ್ತಿಯ ಭಾಷಾ ಕ್ರಮವನ್ನು ಹೊಂದಿ ನಿರಂತರ ಬರೆದರು.

ಭಾವೈಕ್ಯ  ಕವನ ಸಂಕಲನ  (Khader Basha)

ಪ್ರತಿಭಾವಂತರಾದ ಕವಿ ಖಾದರ್ ಬಾಷರಿಗೆ ಸಮಕಾಲೀನ ಆಸಕ್ತಿಗಳು ಬಹಳ ಎಂದೆನಿಸುತ್ತದೆ. ರಾಷ್ಟ್ರೀಯ ಭಾವೈಕ್ಯತೆಯ ಆಕಾಂಕ್ಷೆಯೊಂದಿಗೆ ಬೀದಿಗಿಳಿದು  ಇಲ್ಲವಾದ ಸಫ್ದರ್ ಹಷ್ಮಿಅವರ ನೆನಪಿಗೆ “ಭಾವೈಕ್ಯ”ಎಂಬ ಕವನ ಸಂಕಲನವನ್ನು ನಾಡಿನ ಹಲವಾರು ಹೆಸರಾಂತ ಕವಿಗಳಿಂದ ಕವಿತೆಗಳನ್ನು ಆಯ್ದು ಸಂಪಾದಿಸುತ್ತಾರೆ. (ಮಲ್ಲಿಗೆ ಪ್ರಕಾಶನ: 1993)

ವಚನಗಳು ಚೌಪದಿಗಳ “ಭಾವೈಕ್ಯ ದೀಪ್ತಿ”(Khader Basha)

ಮಲ್ಲಿಗೆ ಪ್ರಕಾಶನ,ಬೀಚಿ ಗ್ರಂಥಾಲಯ ಬಳಗ , ಜಾನಪದ ಪರಿಷತ್ತು, ಸಾಹಿತ್ಯ, ಶಿಕ್ಷಣ ಎಂದೆಲ್ಲಾ ಸದಾ ಒಂದಿಲ್ಲೊಂದು ಕಾರ್ಯಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಎಲ್.ಖಾದರ್ ಬಾಷಾ ಅಪ್ಪಟ ಜಾತ್ಯತೀತವಾದಿ. ಭಾವೈಕ್ಯದ ಗಟ್ಟಿಸಂಬಂಧಗಳ ಬೇರುಗಳು ತಾನು ಉಂಡು,ಆಡಿ ಬೆಳೆದ ನೆಲದಲ್ಲಿ ಸಡಿಲವಾಗುತ್ತಿರುವುದನ್ನು ನೋಡಿ, ಖಾದರಲಿಂಗನನ್ನು ಧೇನಿಸುತ್ತಾರೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೌತಾಳಂ ನ ಭಾವೈಕ್ಯ ತಾಣ ಹಜರತ್ ಖಾದರಲಿಂಗ ಸ್ವಾಮಿಗಳಿಂದ ಪ್ರೇರಿತರಾಗಿ ಆಧುನಿಕ ವಚನಗಳು ಚೌಪದಿಗಳ “ಭಾವೈಕ್ಯ ದೀಪ್ತಿ”ಪ್ರಕಟಿಸುತ್ತಾರೆ.

ಪ್ರೀತಿ ಹಂಚಿಕೊಳ್ಳದ ಬಂಧುಗಳಿದ್ದೊಡೆ

ಬದುಕು ಬೇಸತ್ತು ತೃಣವಾಗುವುದು ನೋಡಾ!

ನೋವು ಹಂಚಿಕೊಳ್ಳದ ಬಂಧುಗಳಿದ್ದೊಡೆ

ಬದುಕೇ ಸತ್ತು ಒಂಟಿ ಪ್ರೇತ ವಾಗುವುದು ನೋಡ ಖಾದರಲಿಂಗ!!

ಹೂವಿನಹಡಗಲಿಯ ಬೀದಿಗಳಲ್ಲಿ ಹೋಳಿಹಬ್ಬದಂದು  ಪ್ರಕಾಶರ ಮಗ ರವೀಂದ್ರ, ಸೋಮಣ್ಣರ ಮಗ ಶಶಿ, ಅಟವಾಳಿಗಿ ಡಾಕ್ಟರ್ ಮಗ ಕೊಟ್ರೇಶ್, ಸಾಬರ ಹುಡುಗರು, ಜೈನರ ಹುಡುಗರು, ಮಾರ್ವಾಡಿಗಳು, ಮಾದರ, ಬೆಸ್ತರ, ಕುರುಬರ ಹುಡುಗರೆಲ್ಲ ಸೇರಿ ಮೈಗೆ ಬಣ್ಣ ಸುರಿದುಕೊಂಡು ಹಲಗೆಬಾರಿಸುತ್ತ ಸಾಗುವ ದೃಶ್ಯ ನೆನಪಾಗುತ್ತದೆ.   ಬದಲಾದ ಭಾರತದ ಪರಿಸ್ಥಿತಿಯಂತೆ ಹಡಗಲಿಯೂ ಬದಲಾಗಿದೆ.ಈ ಸ್ಥಿತ್ಯಂತರಗಳನ್ನು ಬಹುದುಖಿಯಾಗಿ ದಾಖಲಿಸುವ  ಖಾದರಬಾಷನ ಒಳಗೆ ಭಾರತವನ್ನು ಕಳೆದುಕೊಳ್ಳುತ್ತಿರುವ ಗಾಢ ನೋವು ಇದೆ.

ವ್ಯಕ್ತಿಗತ ಏಕಾಂಗಿತನವನ್ನಪ್ಪಿದೊಡೆ

ವಿಕಲ್ಪಿತ ಬದುಕು ಬರಡು ಆಗುವುದು ನೋಡ!

ಮೌನದ ಬಂಗಲೆಯೊಳಗೆ ನೋವು ಮಡುಗಟ್ಟಿದೊಡೆ

ಬಂಗಾರದ ಬದುಕು ಬೆಂದು ಕಪ್ಪಿಟ್ಟೀತು ನೋಡ ಖಾದರಲಿಂಗ!

ಸೌಹಾರ್ದ ಭಾರತ “(Khader Basha)

ಕಳೆದ ಮೂರೂವರೆ ದಶಕಗಳಿಂದ ನಿರಂತರವಾಗಿ ಹೂವಿನಹಡಗಲಿಯ ಸೌಹಾರ್ದ ಪರಂಪರೆಯ ಶ್ರೀ ಗವಿಮಠ, ಕೊಂಬಳಿಯ ಗಾಡಿತಾತಾ ಮಠ, ದರ್ಗಾ, ಉರುಸು, ಜಾತ್ರೆಗಳನ್ನು ನೋಡುತ್ತಲೇ ಬೆಳೆದ ಖಾದರ್ ಗೆ ಇವೆಲ್ಲವೂ ಸೌಹಾರ್ದ ಭಾರತದ ಮಂಟಪಗಳಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

Read also : ದಿನಮಾನ ಹೆಮ್ಮೆ : ಬೆಳಕ ಹೆಜ್ಜೆಯನ್ನರಸುವ ಕವಿ-ಊರಮುಂದಲ ಹರಿನಾಥ ಬಾಬು

ಪ್ರಸ್ತುತ ಹೂವಿನಹಡಗಲಿಯ ಬಡಾವಣೆಯೊಂದರಲ್ಲಿ ವಾಸಿಸುವ ಈ ಶಿಕ್ಷಕ ಮಿತ್ರ, ಮೊನ್ನೆ ದಿನ, ದೂರವಾಣಿಯಲ್ಲಿ ಮಾತನಾಡುತ್ತಾ…”ಶೇಷಗಿರಿ ಸರ್ ಹೋದ ಮ್ಯಾಲೆ ನಿಶ್ಯಕ್ತರಾಗೀವಿ , ಇದು ಕೇವಲ ಬರೆಹಕ್ಕ ಮಾತ್ರವೇ ಅಲ್ಲ….ಇಡೀ ದೇಶ,ಇಡೀ ರಾಜ್ಯ ನನ್ನದು, ಅಂತಿದ್ದವನ ಮನಸ್ಸಿನ ಮೇಲೆ ಅನಾಥಪ್ರಜ್ಞಿ ಮೂಡಿಸುತ್ತಿದೆ”.

ಬಿ.ಶ್ರೀನಿವಾಸ ದಾವಣಗೆರೆ

TAGGED:Davangere Newsdinamaana.comDinamaanada HemmeKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article Bangalore ಅಗಸ್ಟ್‌ 7 ಮತ್ತು ‌8ರಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ
Next Article movie ರಾಗಿಣಿ ಪ್ರಜ್ವಲ್ ಅಭಿನಯದ  “ಶಾನುಭೋಗರ ಮಗಳು” ಚಿತ್ರ ಶೀಘ್ರದಲ್ಲೆ ತೆರೆಗೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಡೆಂಗಿ: ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ

ದಾವಣಗೆರೆ:  ರಾಜ್ಯದಲ್ಲಿ ಡೆಂಗಿ ಜ್ವರ ಮರಣ ಮೃದಂಗ ಬಾರಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.…

By Dinamaana Kannada News

ನೀಟ್ ಪರೀಕ್ಷೆಯಲ್ಲಿ ಅಕ್ರಮ : ತನಿಖೆಗೆ ಆಮ್ ಆದ್ಮಿ ಪಕ್ಷ ಒತ್ತಾಯ

ದಾವಣಗೆರೆ: ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು…

By Dinamaana Kannada News

Political analysis | ಇತಿಹಾಸ ಮರೆಯದ ಕೌತುಕದ ಕ್ಷಣಗಳು..

ಅವತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಪುತ್ರ ಸಂಜಯ್ ಗಾಂಧಿ ಅವರೊಂದಿಗೆ ಕರ್ನಾಟಕಕ್ಕೆ ಬಂದರು. ರಾಜಕೀಯವಾಗಿ ಬಸವಳಿದಿದ್ದ ಅವರಿಗೆ ತುರ್ತು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Applications invited
ತಾಜಾ ಸುದ್ದಿ

ದಾವಣಗೆರೆ|ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?