Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ದೌರ್ಜನ್ಯದಡಿ ಕೊಲೆಯಾದ ಕುಟುಂಬದ ಅವಲಂಭಿತರಿಗೆ ಸರ್ಕಾರಿ ನೌಕರಿ ಮತ್ತು ಪರಿಹಾರ : ಡಿಸಿ
ತಾಜಾ ಸುದ್ದಿ

Davanagere | ದೌರ್ಜನ್ಯದಡಿ ಕೊಲೆಯಾದ ಕುಟುಂಬದ ಅವಲಂಭಿತರಿಗೆ ಸರ್ಕಾರಿ ನೌಕರಿ ಮತ್ತು ಪರಿಹಾರ : ಡಿಸಿ

Dinamaana Kannada News
Last updated: October 3, 2024 4:25 pm
Dinamaana Kannada News
Share
Davanagere
Davanagere
SHARE

ದಾವಣಗೆರೆ ಅ. 03 (Davanagere) :  ದೌರ್ಜನ್ಯದಡಿ ಕೊಲೆಯಾದ ಕುಟುಂಬದ ಅವಲಂಭಿತರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 3 ನೇ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವರ್ಷ ಫೆಬ್ರವರಿ 2 ರಂದು ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಡಾಕ್ಯಾನಾಯ್ಕ್ ಬಿನ್ ರಾಮಾನಾಯ್ಕ್ ಮತ್ತು ಏಪ್ರಿಲ್ 4 ರಂದು ಹೊನ್ನಾಳಿಯ ಮಂಜಪ್ಪ ಬಿನ್ ಬಸಪ್ಪ ಹಾಗೂ ಸೆಪ್ಟೆಂಬರ್ 18 ರಂದು ನ್ಯಾಮತಿ ತಾಲ್ಲೂಕಿನ ಮರಿಗೊಂಡನಹಳ್ಳಿ ಶಿವರಾಜ್ ಬಿನ್ ತೀರ್ಥಪ್ಪ ಇವರು ದೌರ್ಜನ್ಯದಡಿ ಕೊಲೆಯಾಗಿದ್ದು ಸರ್ಕಾರದ ಆದೇಶದಂತೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ.

ಈಗಾಗಲೇ ಡಾಕ್ಯಾನಾಯ್ಕ್ ಇವರ ಕುಟುಂಬದವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಉಳಿದ ಇಬ್ಬರಿಂದ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಕಳುಹಿಸಲು ಇವರ ಸಹಾಯಕ್ಕಾಗಿ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದ್ದು ಆದಷ್ಟು ಬೇಗ ಇವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ನೆರವು ನೀಡಲಾಗುತ್ತದೆ, ಇತ್ತೀಚೆಗೆ ಕೊಲೆಯಾದ ಮಾರಿಗೊಂಡನಹಳ್ಳಿ ಶಿವರಾಜ್ ಮನೆಗೆ ಭೇಟಿ ನೀಡಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ, ಇವರಿಗೆ ಆದಷ್ಟು ಬೇಗ ಸರ್ಕಾರದ ಸವಲತ್ತನ್ನು ತಲುಪಸಿಬೇಕಾಗಿದೆ ಎಂದರು.

Read also :  Davanagere | ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿ ಸಾವಿಗೆ ಕಾರಣನಾದ ಪತಿಗೆ 7 ವರ್ಷ ಸಜೆ

ದೌರ್ಜನ್ಯ ಪ್ರಕರಣದಡಿ ಈ ವರ್ಷ ಒಟ್ಟು 60 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯದ ಪ್ರಕರಣಗಳಾಗಿವೆ. ಇದರಲ್ಲಿ 28 ಕ್ಕೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿವೆ, ಎಫ್‍ಐಆರ್ ಹಂತದಲ್ಲಿ ರೂ. 38.70 ಲಕ್ಷ ಮತ್ತು ಚಾರ್ಜ್‍ಶೀಟ್ ಹಂತದಲ್ಲಿ ರೂ.79.88 ಲಕ್ಷ ಸೇರಿ 1.18 ಕೋಟಿ ಪರಿಹಾರ ನೀಡಿದ್ದು 66 ಪರಿಶಿಷ್ಟ ಜಾತಿ, 56 ಪರಿಶಿಷ್ಟ ಪಂಗಡರವರು ಸೇರಿ 122 ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿದೆ.

ದೌರ್ಜನ್ಯ ತಡೆ ಕಾಯ್ದೆಯಡಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ  2024 ತ ಜುಲೈನಲ್ಲಿ 144, ಆಗಸ್ಟ್ ನಲ್ಲಿ 147, ಸೆಪ್ಟೆಂಬರ್‍ನಲ್ಲಿ 145 ಪ್ರಕರಣಗಳಿದ್ದು ಈ ಮೂರು ತಿಂಗಳ ಅವಧಿಯಲ್ಲಿ 10 ಪ್ರಕರಣಗಳು ವಿಲೆಯಾಗಿವೆ. ಪ್ರಸ್ತುತ ಸೆಪ್ಟೆಂಬರ್ ಅಂತ್ಯಕ್ಕೆ 143 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು ಇದರಲ್ಲಿ 2018 ರ 1, 2019 ರ 3, 2020 ರ 20, 2021 ರಲ್ಲಿನ 14, 2022 ರ ಅವಧಿಯ 32, 2023 ರಲ್ಲಿನ 49 ಮತ್ತು 2024 ರಲ್ಲಿನ 34 ಪ್ರಕರಣಗಳಿವೆ. ಚಾರ್ಜ್‍ಶೀಟ್ ಹಾಕದಿರುವ ಪ್ರಕರಣಗಳಲ್ಲಿ ಕೂಡಲೇ ಚಾರ್ಜ್‍ಶೀಟ್ ಹಾಕಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿ ಸಾವಿಗೆ ಕಾರಣನಾದ ಪತಿಗೆ 7 ವರ್ಷ ಸಜೆ
Next Article Davangere ಪ.ಜಾತಿ ಹಾಗೂ ಬುಡಕಟ್ಟು ಉಪಯೋಜನೆ ಶೇ.100 ರಷ್ಟು ಪ್ರಗತಿ ಸಾಧಿಸಲು ಸೂಚನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಹಾಜರಿ ಹಾಕಿ ಹೋದ ಕಾರ್ಯಕರ್ತೆ ಶಾಸಕರು ಎರಡು ತಾಸು ಕಾದರೂ ಬರಲೇ ಇಲ್ಲ!

ದಾವಣಗೆರೆ (Davanagere) :  ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲ. ಬೆಳಗ್ಗೆ ಮಕ್ಕಳು ಬಂದರೂ ಹಾಜರಾತಿ ಹಾಕಿಲ್ಲ. ಕಾರ್ಯಕರ್ತೆ ಬೆಳಗ್ಗೆ…

By Dinamaana Kannada News

ಸುಕನ್ಯಾ ಸಮೃದ್ದಿ ಯೋಜನೆ ದುರುಪಯೋಗ : ಅಂಚೆ ಪಾಲಕನಿಗೆ ಶಿಕ್ಷೆ

ದಾವಣಗೆರೆ (Davanagere): ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿ ಸಾರ್ವಜನಿಕರಿಗೆ 1.08  ಲಕ್ಷ ರೂ. ವಂಚಿಸಿದ ಆರೋಪಿಗೆ…

By Dinamaana Kannada News

Davanagere Electrical variation : ಆ.6 ರಂದು ವಿವಿಧ ಬಡಾವಣೆಯಲ್ಲಿ ವಿದ್ಯುತ್‌ ವ್ಯತ್ಯಯ

ದಾವಣಗೆರೆ .ಆ05 (Davanagere)   66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಹೆಚ್ಚುವರಿ ಕಂಬಗಳನ್ನು ಅಳವಡಿಸಿಕೊಂಡು ಎಲ್.ಟಿ…

By Dinamaana Kannada News

You Might Also Like

Davangere
Blog

ಸಾಹಿತ್ಯ ,ಬರಹಗಳು ಸಾಮಾಜಿಕ‌ ದೋಷ ತಿದ್ದಬೇಕು : ಲೇಖಕಿ ಮಂಜುಳಾ ಮಂಜಪ್ಪ

By Dinamaana Kannada News
Davanagere
ತಾಜಾ ಸುದ್ದಿ

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Davanagere | ಹಾವು ಕಚ್ಚಿ ಬಾಲಕಿ ಸಾವು

By Dinamaana Kannada News
Davanagere police
ತಾಜಾ ಸುದ್ದಿ

Davanagere | ಆಟೋ ಚಾಲಕರಿಗೆ 20600 ರೂ. ದಂಡ : ಒಟ್ಟು 105 ಪ್ರಕರಣ ದಾಖಲು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?