ದಾವಣಗೆರೆ: ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದ ಮೇರಿ ದೇವಾಸಿಯಾ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಸಂಘದ ರಾಜ್ಯಾಧ್ಯಕ್ಷ ಎಂ.ಎ ನಾಗನಗೌಡ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಎರಡನೇ ರಾಜ್ಯ ಕಾರ್ಯಕಾರಿಣಿಯನ್ನು ದಾವಣಗೆರೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಉದ್ಘಾಟಿಸಲಿದ್ದಾರೆ. ಅಂದು ರಾಜ್ಯ ನೌಕರರ ಸಂಘದ ಜೊತೆಗೆ ಸಮನ್ವಯ ಸಾಧಿಸಿ ಹೋರಾಟದ ಎಚ್ಚರಿಕೆಯ ಘಂಟೆಯನ್ನು ಬಾರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎನ್‌ಪಿಎಸ್ ತೊಲಗಿಸಿ ಓಪಿಎಸ್ ಪಡೆಯಲು ಉಗ್ರ ಸಂದೇಶ ರವಾನಿಸಲಾಗುವುದು ಎಂದರು.
ಕಾರ್ಯಕಾರಿಣಿ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಆದ ವೀರೇಶ ಎಸ್. ಒಡೇನಪುರ, ಕಾರ್ಯಾಧ್ಯಕ್ಷ ಪರಶುರಾಮಪ್ಪ, ಜಿಲ್ಲಾಧ್ಯಕ್ಷ ಬಿ. ಶಿವಣ್ಣ, ನೌಕರ ಸಂಘದ ಚನ್ನಗಿರಿ ಅಧ್ಯಕ್ಷ ಗಣೇಶ್, ರಾಜ್ಯ ಪದಾಧಿಕಾರಿಗಳಾದ ಮಂಜಮ್ಮ, ಸುಧಾ, ಗೋವಿಂದಪ್ಪ, ಜಿಲ್ಲಾಧ್ಯಕ್ಷ ಮಂಜುನಾಥ್, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಲೋಕೇಶ್, ಕರಿಬಸಪ್ಪ, ಗೌರವಾಧ್ಯಕ್ಷ ಮಾರುತಿ, ಕಿರಣ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾ. ಅಧ್ಯಕ್ಷ ಈಶಪ್ಪ ಬೂದಿಹಾಳ, ರಾಜ್ಯ ಮಾಧ್ಯಮ ಸಂಚಾಲಕ ಹಾಗೂ ನೌಕರ ಸಂಘದ ಖಜಾಂಚಿ ಎಮ್. ಗಿರೀಶ್, ಪೀರ್ಯಾ ನಾಯಕ್, ಪರಶುರಾಮ್, ನಾಗರಾಜ್ ಗೋಪಾಲ್ ಪವಾರ್, ಜ್ಯೋತಿ ಕುಮಾರ್, ಪರಸಪ್ಪ, ಕಿರಣ್ ಕುಮಾರ್ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಆರ್.ಬಿ ಮಲ್ಲಿಕಾರ್ಜುನ ಸ್ವಾಗತಿಸಿದರು, ವಿ.ಟಿ. ಅನಿತಾ ಪ್ರಾರ್ಥಿಸಿದರು, ಗಿರೀಶ್.ಎಮ್ ರಾಜ್ಯ ಮಾಧ್ಯಮ ಸಂಚಾಲಕರು ವಂದಿಸಿದರು.
