ದಾವಣಗೆರೆ (Davanagere) : ಬೇರೆಯವರ ಧರ್ಮಕ್ಕೆ ಧಕ್ಕೆ ತರದೆ ಈದ್ ಮಿಲಾದ್, ಗಣೇಶ ಚತುರ್ಥಿ ಹಬ್ಬವನ್ನು ಸೌಹಾರ್ಧಯುತವಾಗಿ ಆಚರಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಸಲಹೆ ನೀಡಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಶಾಂತಿ ಸೌಹಾರ್ಧ ಸಭೆಯಲ್ಲಿ ಅಧ್ಯಕ್ಷ ವಹಿಸಿ ಮಾತನಾಡಿದರು.
ಎಲ್ಲರೂ ಅವರ ಅವರ ಧರ್ಮ, ಸಂಸ್ಕçತಿಯನ್ನು ಅನುಸರಿಸಿ. ಆದರೆ, ಬೇರೆಯವರ ಧರ್ಮಕ್ಕೆ ಧಕ್ಕೆ ತರದೆ ಈದ್ ಮಿಲಾದ್, ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿ ಎಂದು ಕರೆ ನೀಡಿದರು.
ನಾವೆಲ್ಲರೂ ಭಾರತೀಯರಾಗಿದ್ದು, ಇಲ್ಲಿನ ಸಂಸ್ಕೃತಿಗಳಿಗೆ ಬೆಲೆ ಕೊಡುವುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರö್ಯವಿದೆ. ಆದರೆ ಸ್ವಾತಂತ್ರö್ಯ ಸ್ವೇಚ್ಛಾಚಾರವಾಗಬಾರದು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯಬೇಕು ಎಂದರೆ ೧೧೨ ಮೂಲಕ ಪೊಲೀಸರಿಗೆ ಕರೆ ಮಾಡಿ ಎಂದರು.
Read also : Davanagere news | ಒಳಮೀಸಲಾತಿ ಜಾರಿಗೆ ರಾಜ್ಯ ಸರಕಾರದಿಂದ ವಿಳಂಬ : ಸೆ.12 ರಂದು ಬೃಹತ್ ತಮಟೆ ಚಳುವಳಿ
ನಿಗಧಿಪಡಿಸಿದ ರಸ್ತೆಗಳಲ್ಲೇ ಸಾಗಿ, ನಿಗಧಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆಯ ಮಾರ್ಗವನ್ನು ಬದಲಾಯಿಸಬಾರದು. ನಿಗಧಿ ಮಾರ್ಗದಲ್ಲಿ ಸಂಚರಿಸುವಾಗಲೂ ಸೂಕ್ಷ್ಮ ಪ್ರದೇಶದಲ್ಲಿ ಬೇಕಾಬಿಟ್ಟಿ ವರ್ತಿಸಬಾರದು. ಪೊಲೀಸರು ಸೂಚನೆಯಂತೆ ನಡೆದುಕೊಳ್ಳುವ ಮೂಲಕ, ಎಲ್ಲರೂ ಶಾಂತಿ, ಸೌಜನ್ಯಯುತವಾಗಿ, ಸಡಗರ ಸಂಭ್ರಮದಿAದ ಈದ್ ಮಿಲಾದ್ ಮತ್ತು ಗಣೇಶ ಹಬ್ಬವನ್ನು ಆಚರಿಸಿ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ, ಜಿ. ಮಂಜುನಾಥ ರವರು, ನಗರ ಡಿವೈಎಸ್ಪಿ ರವರಾದ ಮಲ್ಲೇಶ್ ದೊಡ್ಡಮನಿ ರವರು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.