ದಾವಣಗೆರೆ .ಜೂ.18 : ನಗರದ ಶಿವಯೋಗಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆಯುಷ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಇವರ ಸಹಯೋಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ತರಬೇತಿ ಶಿಬಿರವನ್ನು ಸಾರ್ವಜನಿಕರಿಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿತ್ತು.
ಬಸವ ಪ್ರಭು ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಯೋಗದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ. ಯೋಗೇಂದ್ರಕುಮಾರ್.ಬಿ ಯು. ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ ಪದ್ದತಿಯ ಪ್ರಯೋಜನಗಳು ಹಾಗೂ ಯೋಗದಿಂದಾಗುವ ಪ್ರಯೋಜನಗಳನ್ನು ಸಾರ್ವಜನಿಕರಿಗೆ ತಿಳಿಸಿದರು.
ಯೋಗ ಒಕ್ಕೂಟದ ಅಧ್ಯಕ್ಷರಾದ ವಾಸುದೇವ ರಾಯ್ಕರ್ ಆಯುಷ ಇಲಾಖೆಯ ಜೊತೆಗೂಡಿ ಕಳೆದ 10 ವರ್ಷಗಳಿಂದಲೂ ಅಂತರಾಷ್ಟ್ರೀಯ ಯೋಗದಿನ ಆಚರಿಸುತ್ತಾ ಬಂದಿದ್ದು ಈ ವರ್ಷವೂ ಜೊತೆಗೂಡಿ 10ನೇ ಅಂತರಾಷ್ಟ್ರೀಯ ಯೋಗದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಯೋಗ ಪ್ರಾತ್ಯಕ್ಷಿತೆಯನ್ನು ಯೋಗಪಟು ಚನ್ನಬಸವಣ್ಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಯೋಗ ಒಕ್ಕೂಟದ ಪದಾಧಿಕಾರಿಗಳಾದ ಪರಶುರಾಮ್, ಕೀರ್ತಿರಾಜು, ಪ್ರಕಾಶ್ ವತ್ತಂಗಿ, ಮಾದೇಗೌಡ್ರು, ಅನಿಲ್ ರಾಯ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.