ದಾವಣಗೆರೆ : ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜೆಐಟಿ)ಯ ಪ್ರಾಂಶುಪಾಲರು ಮತ್ತು ನಿರ್ದೇಶಕ ಡಾ. ಗಣೇಶ್ ಡಿ.ಬಿ ಅವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ನ ಹೊಸ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರಮುಖ ನೀತಿ-ನಿರ್ಣಯ ಹಾಗೂ ಶೈಕ್ಷಣಿಕ ಸುಧಾರಣೆಗಳನ್ನು ರೂಪಿಸುವ ಕಾರ್ಯಕಾರಿ ಮಂಡಳಿಯಲ್ಲಿ ಸ್ಥಾನ ದೊರಕಿರುವುದು ಡಾ. ಗಣೇಶ್ ಡಿ ಬಿ ಅವರ ಶೈಕ್ಷಣಿಕ ನಾಯಕತ್ವಕ್ಕೆ ಲಭಿಸಿದ ಮಹತ್ವದ ಸಮ್ಮಾನವಾಗಿದೆ.
ಆಯ್ಕೆಯ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಜೆಐಟಿಸಂಸ್ಥೆಯ ವೃದ್ಧಿ, ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ನವೀನತೆಯ ಪ್ರೋತ್ಸಾಹ ದಲ್ಲಿ ಡಾ. ಗಣೇಶ್ ಡಿ ಬಿ ಅವರ ಪಾತ್ರ ಮಹತ್ವದ್ದೆಂದು ಕಾಲೇಜು ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Read also : ಸಂವಿಧಾನ : ಬಿ.ಶ್ರೀನಿವಾಸ
ಪ್ರಾಂಶುಪಾಲರಾಗಿ ನೀಡುತ್ತಿರುವ ಶೈಕ್ಷಣಿಕ ಸೇವೆ, ಸಂಸ್ಥೆಯ ಒಳ್ಳೆಯ ಆಡಳಿತ ಮತ್ತು ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳಿಗೆ ದೊರೆತಿರುವ ಗುರುತಾಗಿ ಈ ಆಯ್ಕೆಯನ್ನು ಪರಿಗಣಿಸಲಾಗಿದೆ. ಜೆಐಟಿ ಆಡಳಿತ ಮಂಡಳಿ, ಆಧ್ಯಾಪಕರು, ಆಧ್ಯಾಪಕೇತರು ಡಾ. ಗಣೇಶ್ ಡಿ.ಬಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿ, ಅವರ ಮುಂದಿನ ಕಾರ್ಯಕಾಲಕ್ಕೆ ಶುಭ ಹಾರೈಸಿದ್ದಾರೆ.
