ದಾವಣಗೆರೆ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವೃತ್ತಿ ರಂಗನಾಟಕ ರಚನೆಗೆ ಆಹ್ವಾನ ನೀಡಿತ್ತು. ಈ ಆಹ್ವಾನದಡಿ ಸಲ್ಲಿಕೆಯಾದ ನಾಟಕಗಳ ಪೈಕಿ ಡಾ. ವೀಣಾ ಪಿ. ಅವರ “ಜೀವದಾಯಿ” ನಾಟಕವು ಆಯ್ಕೆಯಾಗಿದೆ ಎಂದು ರಂಗಾಯಣದ ವಿಶೇಷಾಧಿಕಾರಿಗಳಾದ ರವಿಚಂದ್ರ ಮತ್ತು ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.
2025ರ ಫೆಬ್ರವರಿ ತಿಂಗಳಲ್ಲಿ ರಂಗಾಯಣವು ವೃತ್ತಿ ರಂಗನಾಟಕ ರಚನಾ ತರಬೇತಿ ಶಿಬಿರ ಏರ್ಪಡಿಸಿತ್ತು. ಕೊಂಡಜ್ಜಿ ಬೆಟ್ಟದಲ್ಲಿ ಒಂದು ವಾರ ಕಾಲ ನಡೆದ ಈ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವೃತ್ತಿ ರಂಗನಾಟಕ ರಚನೆಗೆ ಅವಕಾಶ ಕಲ್ಪಿಸಲಾಗಿತ್ತು. ತೀರ್ಪುಗಾರರ ಸಮಿತಿಯ ಮೌಲ್ಯಮಾಪನದ ಆಧಾರದಲ್ಲಿ ಡಾ. ವೀಣಾ ಪಿ. ಅವರ “ಜೀವದಾಯಿ” ನಾಟಕ ಆಯ್ಕೆಯಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : ಮುಂಗಾರು ಬೆಳೆಗೆ ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು : ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರಿಗೆ ನಿಷೇಧ