ದಾವಣಗೆರೆ: ನಗರದ ಪ್ರವಾದಿ ಮುಹಮ್ಮದ್ ಜನ್ಮದಿನದ ಹಿನ್ನಲೆಯಲ್ಲಿ ಮುಸ್ಲಿಂ ಬಾಂದವರು ಈದ್ ಮಿಲಾದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಸಿರು ತೋರಣ, ಬಂಟಿಂಗ್ಸ್ ಮತ್ತು ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು.
ಅಜಾದನಗರ 7 ನೇ ಕ್ರಾಸ್‌ನಲ್ಲಿ ಮಿಲಾದ್ ಕಮಿಟಿ ಏರ್ಪಡಿಸಿರುವ ಮೆರವಣೆಗೆಗೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ, ಅಧ್ಯಕ್ಷ ಎ.ಬಿ.ಹಬೀಬ್ ಸಾಬ್, ಉಪಾಧ್ಯಕ್ಷ ಯಾಸೀನ್ ಪೀರ್, ಖಾಸೀಂ ಪೀರ್, ಕಾರ್ಯದರ್ಶಿ ವಕೀಲ ನಜೀರ ಅಹಮದ್ ಸೇರಿದಂತೆ ಕಮಿಟಿ ಸದಸ್ಯರು ಚಾಲನೆ ನೀಡಿದರು.
ಮದೀನಾ ವೃತ್ತದಿಂದ ಆರಂಭವಾದ ಮೆರವಣಿಗೆಯು ಅಹ್ಮದ್ ನಗರ, ಕೆ.ಆರ್ ಮಾರುಕಟ್ಟೆ, ಚಾಮರಾಜ್ ಪೇಟೆ ವೃತ್ತ ಮಂಡಿಪೇಟೆ, ಗಡಿಯಾರ ಕಂಬ ತಲುಪಿ ಪಿಬಿ ರಸ್ತೆ ಸಾಗುವ ಮೂಲಕ ಗಾಂಧಿ ವೃತ್ತ ತಲುಪಿತು.
Read also : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಗ್ಯಾರಂಟಿ ಕೊಡಿ :ಶಾಸಕ ಕೆ.ಎಸ್.ಬಸವಂತಪ್ಪ
ಇಲ್ಲಿಗೆ ವಿನೋಬ ನಗರ ಮತ್ತು ಕೆಟಿಜೆ ನಗರದಿಂದ ಬಂದ ಮೆರವಣಿಗೆಗಳು ಸಮಾಗಮಗೊಂಡವು. ಮೆರವಣಿಗೆ ಮಾಗನಹಳ್ಳಿ ರಸ್ತೆಯ ಮಿಲಾದ್ ಮೈದಾನ ತಲುಪಿ ಮುಕ್ತಾಯವಾಯಿತು.
ಅಧ್ಯಕ್ಷ ಎ.ಬಿ.ಹಬೀಬ್ ಸಾಬ್, ಉಪಾಧ್ಯಕ್ಷ ಯಾಸೀನ್ ಪೀರ್, ಖಾಸೀಂ ಪೀರ್, ಕಾರ್ಯದರ್ಶಿ ವಕೀಲ ನಜೀರ ಅಹಮದ್ , ಸಹ ಕಾರ್ಯದರ್ಶಿಗಳಾದ ವಿ.ಪಿ.ಶಫೀಸಾಬ್, ಸೈಯದ್ ರಿಯಾಜ್ , ಸೈಯದ್ ಖಜಾಂಚಿ ಜೀಬಿವುಲ್ಲಾ ರಜ್ವಿ, ಸದಸ್ಯರಾದ ಮಹಮ್ಮದ್ ಅಕ್ಬರ್ ಆಲಿ, ಕಲೀಂ ಖಾನ್ ಹಾಷ್ಮೀ, ಅಬ್ದುಲ್ ಘನಿ ತಾಹೀರ್, ಇಬ್ರಾಹಿಂ ಕಲೀಲ್ ವುಲ್ಲಾ, ವಾಜೀದ್ ಹತ್ತರ್ ಮುನ್ನಾ, ನೂರ್ ಅಹಮದ್, ದಲಿತ ಮುಖಂಡ ಬಿ.ಎಂ.ಹನುಮಂತಪ್ಪ ಸೇರಿದಂತೆ ಇತರರು ಇದ್ದರು.