ದಾವಣಗೆರೆ (Davanagere) : ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನಾಪಡೆಯ ಶಕ್ತಿ ಮುಂದೆ ಪಾಕಿಸ್ತಾನ ಮಂಡಿಯೂರಿದೆ ಎಂದು ಮಾಜಿ ತಾಪಂ ಸದಸ್ಯರಾದ ಆಲೂರು ನಿಂಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಣ್ಣು ಮಕ್ಕಳ ಸಿಂಧೂರ ಅಳಿಸಿದವರಿಗೆ ತಕ್ಕ ಉತ್ತರ ಸಿಕ್ಕಿದೆ ಉಗ್ರವಾದಿಗಳು ಕನಸಿನಲ್ಲೂ ಊಹಿಸದ ಪ್ರತ್ಯುತ್ತರ ನೀಡಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದವರ ಅನಗತ್ಯ ರಾಜಕಾರಣ ಮಾಡಬಾರದು ಇಂತಹ ಹೊತ್ತಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾರತೀಯ ಸೇನೆಯನ್ನು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಗೌರವಿಸಬೇಕಿದೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ನೀಡಿದ್ದಾರೆ.
ಯುದ್ಧ ವಿರಾಮಕ್ಕೆ ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಕಾಂಗ್ರೆಸ್‍ನ ಕೆಲವು ಮುಖಂಡರು ಹಗುರವಾಗಿ ಮಾತನಾಡಲು ಆರಂಭಿಸಿದ್ದಾರೆ. ಅದು ಸರಿಯಲ್ಲ. ಸೂಕ್ಷ್ಮತೆಗಳನ್ನು ವಾಸ್ತವವಾಗಿ ಈಗ ಘೋಷಿಸಿರುವ ಯುದ್ಧ ವಿರಾಮ ಶಾಶ್ವತ ಅಲ್ಲ. ಮುಂದೆ ದೇಶದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ಆದರೂ ಅದನ್ನು ಭಾರತದ ಮೇಲಿನ ಯುದ್ಧಕ್ಕೆ ಸಮ ಎಂದು ಭಾವಿಸಬೇಕಾಗುತ್ತದೆ. ಎಂದು ಹೇಳಿದ್ದಾರೆ ಎಂದರು.
Read also : JOB NEWS | ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ : ಮೇ.26 ಕೊನೆಯ ದಿನ
ಈ ವಿಚಾರದಲ್ಲಿ ಅನಗತ್ಯವಾಗಿ ಕಾಂಗ್ರೆಸ್ ಪಕ್ಷ ಟೀಕಿಸುತ್ತಿರುವುದು ಶೋಭೆ ತರುವಂತದ್ದಲ್ಲವೆಂದು ಮಾಜಿ ತಾಪಂ ಸದಸ್ಯರಾದ ಆಲೂರು ನಿಂಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.