ದಾವಣಗೆರೆ: ಜಮೀನಿನಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ಕಚ್ಷಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ
ಗ್ರಾಮದ ಹನುಮಂತಪ್ಪ (52) ಮೃತಪಟ್ಟ ರೈತ. ಎಂದಿನಂತೆ ಪ್ರತಿದಿನ ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯಲು ಸೋಮವಾರ ಬೆಳಗ್ಗೆ ಹೋಗಿದ್ದರು. ಮೇವು ಕೊಯ್ಯುವ ಸಂದರ್ಭದಲ್ಲಿ ವಿಷಜಂತು ಕಚ್ಚಿದೆ. ಆದರೆ ಮೇವು ಕೊಯ್ಯುವುದರಲ್ಲಿ ಮಗ್ನರಾಗಿದ್ದರಿಂದ ವಿಷಜಂತು ಕಚ್ಚಿರುವುದು ಗಮನಕ್ಕೆ ಬಂದಿಲ್ಲ. ಹಾವು ಕಚ್ಚಿದ ವಿಷ ಮೈಯಲ್ಲ ಆವರಿಸಿ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ.
Read also : ದಾವಣಗೆರೆ : ಇ.ವಿ ಪವರ್ ಪ್ಲಸ್ ಸೇವೆಯ ಮಾರ್ಗದ ಬದಲಾವಣೆ
ಅಕ್ಕಪಕ್ಕದ ರೈತರು ಜಮೀನಿನಲ್ಲಿ ಕುಸಿದು ಬಿದ್ದಿರುವುದನ್ನು ಗಮನಿಸಿ ನೋಡಿದಾಗ ರೈತ ಕೊನೆಯುಸಿರೆಳೆದ್ದಾರೆ. ಏನಾಗಿರಬಹುದು ಎಂದು ರೈತರು ನೋಡಿದಾಗ ಕಾಲಿಗೆ ಹಾವು ಕಚ್ಚಿರುವ ಗುರುತು ಕಂಡು ಬಂದಿದೆ ಎಂದು ಹೇಳಲಾಗಿದೆ. ಮೃತ ರೈತನಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರಿಂದ ಸಾಂತ್ವನ: ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.