ಮೆಕ್ಕೆಜೋಳ ಬೆಳೆ ಕುಸಿತ ಕಂಡರೂ ಸಹ ಎದೆಗುಂದದ ರೈತರು ತಾಲೂಕಿನಲ್ಲಿ ಹಿಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ. ಇನ್ನೂ ಕೆಲವು ಭಾಗಗಳಲ್ಲಿ ಮೆಕ್ಕೆಜೋಳದ ಬೆಳೆ ಸೂಲಂಗಿ ಹಂತದಲ್ಲಿದ್ದು ಬೆಳೆಗಳು ನಳ ನಳಿಸುತ್ತಿವೆ. ಆದರೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ ಎಂಬ ಕೂಗು ರೈತ ವಲಯದಲ್ಲಿ ಕೇಳಿ ಬರುತ್ತಿತ್ತು.
ದರ ಸಿಗಲಿ ಬಿಡಲಿ ರೈತರು ಮಾತ್ರ ಬಿತ್ತನೆ ಮಾಡಿ ಬೆಳೆಯುವುದನ್ನು ಮಾತ್ರ ಬಿಡುವುದಿಲ್ಲ. ಮುಂಗಾರು ಹಂಗಾಮಿನಲ್ಲಿ ಸಾಲ ಸೂಲ ಮಾಡಿ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಸೊಕ್ಕೆ, ಬಿಳಿಚೋಡು,ಕಸಬಾ ಹೋಬಳಿಗಳಲ್ಲಿ ಸುಮಾರು 43000 ಹೆಕ್ಟರ್ ಮೆಕ್ಕೆಜೋಳವನ್ನು ಬೆಳೆಯಲಾಗಿತ್ತು.
ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ ಎಂದು ಕೆಲ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಯನ್ನು ಮಾರುಕಟ್ಟೆಗೆ ಹಾಕದೆ ಇಂದಲ್ಲ ನಾಳೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ಮೆಕ್ಕೆಜೋಳದ ತೆನೆಗಳರಾಶಿಯ ಗ್ರಾಮೀಣ ಪ್ರದೇಶಗಳಲ್ಲಿ ಕಣಗಳಲ್ಲಿ ಇನ್ನೂ ಸಹ ಕಂಡುಬರುತ್ತಿವೆ. ಆದರು ಸಹ ರೈತರು ಬೆಲೆಗಳ ಏರಿಳಿತ ಲೆಕ್ಕಿಸದೆ ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ಬಿಳಿಚೋಡು ಸೊಕ್ಕೆ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನೂರಕ್ಕೂ ಅಧಿಕ ಹೆಕ್ಟರ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಬೆಳೆಗಳು ಸಮೃದ್ದವಾಗಿ ಬೆಳೆದು ನಳ ನಳಿಸುತ್ತಿವೆ.
ಉತ್ತಮ ಇಳುವರಿ: ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳಕ್ಕೆ ಲದ್ದಿ ಉಳುಗಳ ಮತ್ತು ಕೀಟ ಬಾದೆ ಹಾಗೂ ರೋಗ ಬಾದೆಗಳು ಕಂಡುಬರುವುದರಿಂದ ಎಕರೆಗೆ 20 ಕ್ವಿಂಟಲ್ ಇಳುವರಿ ದೊರೆತರೆ. ಹಿಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ಬಿತ್ತನೆ ಮಾಡುವಂತಹ ಮೆಕ್ಕೆಜೋಳ ಬೆಳೆಗಳಿಗೆ ಕೀಟವಾದೆ ಮತ್ತು ರೋಗ ಭಾದೆಗಳು ಕಡಿಮೆ ಇರುವುದರಿಂದ ಒಂದು ಎಕರೆಗೆ 30 ಕ್ವಿಂಟಲ್ ಮೆಕ್ಕೆಜೋಳ ಇಳುವರಿ ದೊರೆಯುತ್ತದೆ ಹಾಗಾಗಿ ಅವಧಿಯಲ್ಲಿ ಮೆಕ್ಕೆಜೋಳ ಬಿತ್ತನೆಗೆ ಹೆಚ್ಚು ಒತ್ತು ನೀಡುತ್ತಾರೆ.
ಹಿಂಗಾರಿಗೆ ಮತ್ತು ಬೇಸಿಗೆಗೆ ಒತ್ತು : ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ಅಂತ್ಯದಿಂದ ಡಿಸೆಂಬರ್ ತಿಂಗಳವರೆಗೆ ಬಿತ್ತನೆ ಮಾಡಲಾಗುತ್ತದೆ. ತಂಪಾದ ಮತ್ತು ಒಣಹವಾಮಾನ ಮೆಕ್ಕೆಜೋಳ ಬೆಳೆಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಮಣ್ಣಿನಲ್ಲಿ ತೇವಾಂಶ ಉಳಿದಿರುವುದರಿಂದ ಕಡಿಮೆ ನೀರಾವರಿ ಸಾಕಾಗುತ್ತದೆ.
Read also : ಜಗಳೂರು|ಬೀದಿ ನಾಯಿಗಳಿಗೆ ಆಶ್ರಯ ತಾಣದ ಕಾಮಗಾರಿ ಪರಿಶೀಲನೆ
ಬೇಸಿಗೆ ಹಂಗಾಮಿನಲ್ಲಿ ಜನವರಿ-ಫೆಬ್ರವರಿ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಕಾಲದಲ್ಲಿ ತಾಪಮಾನ ಹೆಚ್ಚಿರುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಡ್ರಿಪ್ ಸಿಂಚನ ಪದ್ಧತಿ ಅನುಸರಿಸಿದರೆ ನೀರಿನ ಉಳಿತಾಯದೊಂದಿಗೆ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ.
ಬೇಸಿಗೆಯಲ್ಲಿ ಕಳೆ ಮತ್ತು ಕೀಟಗಳ ಹಾನಿ ಹೆಚ್ಚೇನು ಕಾಣಿಸಿಕೊಳ್ಳುವುದಿಲ್ಲ ಆದರು ಸಹ ಸಕಾಲಕ್ಕೆ ಸೂಕ್ತ ಔಷಧ ಸಿಂಪಡಣೆ ಮಾಡುವುದು ಸೂಕ್ತ ಎನ್ನುತ್ತಾರೆ ರೈತ ಬಸಪ್ಪ
ಹಿಂಗಾರು ಹಂಗಾಮಿನಲ್ಲಿ 90ಕ್ಕೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ ಬೇಸಿಗೆಯಲ್ಲಿ ಕೀಟವಾದೆ ಕಡಿಮೆ ಇರುವುದರಿಂದ ಇಳುವರಿಯು ಸಹ ಉತ್ತಮ ವಾಗಿ ಬರಲಿದೆ
ಶ್ವೇತಾ, ಸಹಾಯಕ ಕೃಷಿ ನಿರ್ದೇಶಕರುಬೆಳಗಳಿಗೆ ದರ ದೊರೆತರೂ ದೊರೆಯದೆ ಇದ್ದರೂ ಸಹ ರೈತರು ಋತುಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯುವಂತಹ ಕೌಶಲ್ಯವನ್ನು ಹೊಂದಿದ್ದಾರೆ ಸರ್ಕಾರವು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನೀಡಿದಾಗ ಮಾತ್ರ ರೈತರ ಜೀವನ ಹಸನಾಗಲಿದೆ.
ರಾಜು. ರೈತ ಸಂಘ ( ಹುಚ್ಚವ್ವನ ಹಳ್ಳಿ ಮಂಜುನಾಥ ಬಣ) ದ ಪ್ರಧಾನ ಕಾರ್ಯದರ್ಶಿ
