ದಾವಣಗೆರೆ: ಜಾತಿ ಗಣತಿ ವರದಿ ಜಾರಿಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು. ಎಷ್ಟೇ ಅಡ್ಡಿ, ಆತಂಕ ಎದುರಾದರೂ ಜಾತಿ ಗಣತಿ ವರದಿ ಜಾರಿಗೊಳಿಸಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯರು ಜಾತಿ ಗಣತಿ ವರದಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಬಲಾಢ್ಯ ಸಮುದಾಯವದರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಜಾರಿಗೆ ಹೆಚ್ಚಿನ ಸಮುದಾಯಗಳು ಒತ್ತಾಯಿಸುತ್ತಿವೆ. ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಆದ್ರೆ, ಕೆಲವೇ ಕೆಲ ಸಮುದಾಯದವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಆದ್ರೆ, ಇದುವರೆಗೆ ಬಿಡುಗಡೆ ಆಗಿಲ್ಲ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿತ್ತು. ಆದರೂ ಜಾತಿ ಗಣತಿ ಪ್ರತಿಬಾರಿಯೂ ಆಗುತ್ತಿರಲಿಲ್ಲ. ವಿರೋಧ ವ್ಯಕ್ತವಾಗುತತಿದ್ದ ಕಾರಣಕ್ಕೆ ಅಧಿಕಾರಕ್ಕೆ ಬಂದವರು ಮನಸ್ಸು ಮಾಡಲಿಲ್ಲ. 2014ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಸಿದ್ದರಾಮಯ್ಯ ಅವರು ಆದೇಶಿಸಿದ್ದರು. ನಂತರ ಅಧಿಕಾರಕ್ಕೆ ಬಂದವರು ಜಾರಿಗೆ ಮುಂದಾಗಲಿಲ್ಲ. ಇವರಿಗೆ ಮೇಲ್ವರ್ಗದವರ ಮೇಲಿದ್ದ ಭಯ ಎಂದು ತಿಳಿಸಿದ್ದಾರೆ.
Read also : ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ 38ನೇ ವಾರ್ಡ್ ಮಾದರಿ: ಮೇಯರ್ ಕೆ. ಚಮನ್ ಸಾಬ್
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಈ ವರದಿ ಜಾರಿಯಿಂದ ಅನುಕೂಲವಾಗಲಿದೆ. ತಳಸಮುದಾಯ, ಹಿಂದುಳಿದ ಸಮುದಾಯಗಳಿಗೆ ಅನುಕೂಲವಾಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯವಾಗಲಿದೆ. ಆದಕಾರಣ ಆದಷ್ಟು ಬೇಗ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು. ಅನುಮಾನಗಳಿದ್ದರೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಆದ್ರೆ, ಯಾವುದೇ ಪರಾಮರ್ಶೆ ನಡೆಸದೇ, ಪೂರ್ಣವಾಗಿ ಓದದೇ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಏನಾದರೂ ಲೋಪದೋಷ ಇದ್ದರೆ ಸರಿಪಡಿಸುವಂತೆ ಮನವಿ ಮಾಡಲಿ. ಆದರೆ ಸಾರಸಗಟಾಗಿ ಜಾರಿಯೇ ಬೇಡ ಎನ್ನುವುದು ಅರ್ಥಹೀನ ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.