ಶೂಟು-ಬೂಟು ಕಿತ್ತು ಹಾಕಿ ಕಚ್ಚೆ-ಪಂಜೆ ಹಾಕಿಕೊಂಡು ಕೈಯಲಿ ಕೋಲು ಹೆಗಲಲಿ ಶಾಲು ಅಹಿಂಸೆಯ ಸಾರವ ಸಾರುತ ಬಂದರು ಗಾಂಧೀ ತಾತ…..
ಕಣ್ಣಿಗೆ ಗ್ಲಾಸು ಸೊಂಟದಿ ಗಂಟೆ ಅಸಹಕಾರ-ದಂಡಿ ಸತ್ಯಾಗ್ರಹ ಹೂಡಿ ಹರತಾಳವ ಹೂಡಿ ಸತ್ಯಾಗ್ರಹ ಮಾಡಿ ಭಾರತ ಬಿಟ್ಟು ತೊಲಗಿರಿ ಎಂದರು ಗಾಂಧಿ ತಾತ…..
ಹೊತ್ತಲಿ ಎದ್ದು ಹೊತ್ತಿಗೆ ಬರೆದು ಶಾಂತಿ ಮಂತ್ರವ ಪಟಿಸಿ ಕಾನೂನು ಭಂಗದ ಚಳುವಳಿ ಹೂಡಿ ದೇಶದ ಐಕ್ಯತೆಗಾಗಿ ದಶ ದಿಕ್ಕಿಗೆ ಹೋಗಿ ಮಾಡು ಇಲ್ಲವೇ ಮಡಿ ಎಂದು ಕರೆಯನು ಕೊಟ್ಟರು ಗಾಂಧೀ ತಾತ…..
ಚರಕವ ಹಿಡಿದು ದಾರವ ನೂಲುತ ವಿದೇಶಿ ಸೋಕಿ ಬೇಡ-ಸ್ವದೇಶಿ ಖಾದಿ ಹಾಕು ಎಂದರು ಅಸ್ಪೃಶ್ಯತಾ ನಿವಾರಣೆಗಾಗಿ ಜಾಗೃತಿ ಮೂಡಿಸಿ ಪರಂಗೀಯರ ಸೊಕ್ಕನು ಒದ್ದು ಸ್ವಾತಂತ್ರವ ಗೆದ್ದು ತಂದರು ಗಾಂಧೀ ತಾತ….
Read also : ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಕನಸಿನ ಭಾರತ ಕಟ್ಟುತ ನೆಡೆದು ವೈರಿಯ ಕೋವಿಗೆ ಬಲಿಯಾದರೂ ಹೇ ರಾಮ್ ಹೇ ರಾಮ್ ಎನ್ನುವ ನಾಡಿಗೆ ದೇಹವು ಮುಡಿಪಿದು ವೈರಿಗೂ ಕೇಡನು ಬಯಸದು ಎಂದು ಹುತಾತ್ಮರಾಗಿ ಮಹಾತ್ಮರಾದರು ಗಾಂಧಿ ತಾತ….
ರಚನೆ:- ಮಂಜುನಾಥ.ಜಿ
Civil police constable, Dvg
