ದಾವಣಗೆರೆ (Davanagere): ನಗರದ ಜಿಎಂ ವಿಶ್ವವಿದ್ಯಾಲಯ ಮತ್ತು ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದು, ಪ್ರಸಕ್ತ ವರ್ಷದ ಸಾಲಿನಲ್ಲಿ ಒಟ್ಟು ಒಂದು ಸಾವಿರ ಜಾಬ್ ಆಫರ್ಸ್ ಸ್ವೀಕರಿಸಲಾಗಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1000 ಜಾಬ್ ಆಫರ್ಸ್ ಸ್ವೀಕರಿಸಿದ ಮೊದಲ ಸಂಸ್ಥೆಯಾಗಿದ್ದು, ಮಧ್ಯ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಇದೆ ವೇಳೆ ತಿಳಿಸಿದರು.
ವಿವಿಧ ಪ್ರತಿಷ್ಠಿತ ಕಂಪನಿಗಳಾದ ಎಸ್ಎಲ್‌ಕೆ ಸಾಫ್ಟ್ವೇರ್ ಸರ್ವಿಸಸ್, ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇನ್ಫೋಸಿಸ್, ಸಾಸ್ಕಿನ್ ಕಮ್ಯೂನಿಕೇಶನ್, ಅನೋರ, ಕಾಗ್ನಿಜೆಂಟ್, ಆಕ್ಟಲೆಂಟ್, ಆರ್ ಬಿ ಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ಐಒಎಂಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಕಲ್ಪತರು ಪ್ರಾಜೆಕ್ಟ್ಸ್, ಬಲ್ದೋಟ ಸ್ಟೀಲ್ ಅಂಡ್ ಪವರ್ ಲಿಮಿಟೆಡ್, ಅಪೇಕ್ಸ್ ಆಟೋ ಪ್ರೈವೇಟ್ ಲಿಮಿಟೆಡ್, ಆಫ್ಟಂ, ಫೇಸ್ ಡಿಜಿಟಕ್, ಎಚ್ ಡಿ ಎಫ್ ಸಿ, ಡಿ ಮಾರ್ಟ್, ಏರ್ಟೆಲ್, ಇಂಡೋ ಎಂ ಐ ಎಂ, ಕೇನ್ಸ್ ಟೆಕ್ನಾಲಜಿ, ಸ್ನೈಡರ್ ಎಲೆಕ್ಟ್ರಿಕ್ ಮುಂತಾದ ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 28 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಯ ಅಂತಿಮ ಸಂದರ್ಶನ ಪ್ರಕ್ರಿಯೆಯನ್ನು ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಹಲವಾರು ಕಂಪನಿಗಳಿದ್ದು, ಜೂನ್ ತಿಂಗಳ ಕೊನೆಯವರೆಗೂ ಕಂಪನಿ ಸಂದರ್ಶನ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
Read also : Davanagere | ಆವರಗೆರೆ ನಿರಾಶ್ರಿತರಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ
ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ವೈ ಯು ಸುಭಾಷ್ ಚಂದ್ರ, ಜಿ ಎಂ ಯು ಕುಲಪತಿ ಡಾ ಎಸ್ ಆರ್ ಶಂಕಪಾಲ್, ಸಹಕುಲಪತಿ ಡಾ ಎಚ್ ಡಿ ಮಹೇಶಪ್ಪ, ರಿಜಿಸ್ಟ್ರಾರ್ ಡಾ ಬಿ ಎಸ್ ಸುನಿಲ್ ಕುಮಾರ್, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ ಸಂಜಯ್ ಪಾಂಡೆ ಎಂಬಿ, ವಿಭಾಗಗಳ ಮುಖ್ಯಸ್ಥರುಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.