ದಾವಣಗೆರೆ: ಸಸ್ಯದಲ್ಲಿ ಆಯುರ್ವೇದ ಔಷಧ ಗುಣ ಹೇರಳವಾಗಿರುವುದರಿಂದ ಪ್ರಸಕ್ತ ದಿನದಲ್ಲಿ ಸಸ್ಯ ಸಂರಕ್ಷಣೆ ಅಗತ್ಯವೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಬಿ ಕಕ್ಕಳಮೇಲಿ ಹೇಳಿದರು.
ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 270ನೇ ಶಿವಾನುಭವ ಸಂಪದ ಹಾಗೂ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸ ನೀಡುತ್ತ ಪ್ರತಿಯೊಬ್ಬರ ಮನೆಯಿಂದಲೂ ಪರಿಸರ ಉಳಿಸಿ ಬೆಳೆಸುವ ಕರ್ತವ್ಯ ವಾಗಬೇಕೆಂದರು.
ವಿವಿಧ ರೀತಿಯ ಪ್ರಾಣಿ ಸಂಕುಲದ ಜೊತೆ ಬದುಕಬೇಕೆಂದರೆ ಅದು ಈ ಭೂಮಂಡಲದಲ್ಲಿ ಮಾತ್ರ. ಇಂಥ ಸ್ಥಿತಿಯಲ್ಲಿ ಗುಡ್ಡಗಾಡುಗಳನ್ನು ಹಾಳು ಮಾಡದೆ ಸಸಿ ನೆಡುವ ಕಾರ್ಯಕ್ರಮದ ಮೂಲಕ ಮನುಷ್ಯ ಜೀವ ಕುಲವನ್ನು ಉಳಿಸುವಲ್ಲಿ ಎಲ್ಲರೂ ಶ್ರಮಿಸಬೇಕೆಂದರು.
ಪ್ರತಿಯೊಂದು ಜೀವರಾಶಿ ಮನುಷ್ಯ ಕುಲದಲ್ಲಿ ದೇವರಿದ್ದಾನೆ, ಇಲ್ಲದಿದ್ದರೆ ಮನುಷ್ಯ ಖಾಯಂ ಜೀವಂತವಾಗಿರಲು ಇಷ್ಟಪಡುತ್ತಿದ್ದ ಎಂದು ಡಾ. ಸಿದ್ದಪ್ಪನವರು ಅಭಿಪ್ರಾಯಪಟ್ಟರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಹಾಲಕೆರೆ ಸಂಸ್ಥಾನ ಜಗದ್ಗುರು ಶ್ರೀ ಮ.ನಿ.ಪ್ರ.ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರು ಮಾತನಾಡಿ, ಕಣ್ಣಿಗೆ ಕಾಣುವ ವಸ್ತುಗಳೆಲ್ಲವೂ ಮಾಯವಾಗುತ್ತದೆ. ಆದ್ದರಿಂದ ಮನುಷ್ಯನಿಗೆ ಅರಿವು ಅಗತ್ಯವೆಂದರು.
ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟು ಅಂಧಕಾರವಿದೆ ಎನ್ನುವುದಕ್ಕಿಂತ ಅದರ ಬಗ್ಗೆ ನನ್ನ ಅರಿವು ಎಷ್ಟಿದೆ ಎಂಬುದನ್ನು ಚಿಂತಿಸಬೇಕು. ನಮ್ಮ ಜೀವನದ ದುಃಖದ ತಾಪಮಾನ ಕಡಿಮೆ ಮಾಡಬೇಕೆಂದರೆ ನಮ್ಮ ಅರಿವಿನ ಜ್ಞಾನ ಹೆಚ್ಚಾಗಬೇಕು ಎಂದರು.
ಹರಿಹರ ಪುರಸಭೆ ಮಾಜಿ ಅಧ್ಯಕ್ಷ ಲಿಂ. ಯಜಮಾನ್ ಟಿ. ಜಯದೇವಪ್ಪ, ಲಿಂ. ಶ್ರೀಮತಿ ತಿಪ್ಪಮ್ಮ ಇವರ ಸ್ಮರಣಾರ್ಥವಾಗಿ ಅವರ ಪುತ್ರರಾದ ಬಕಪ್ಪ, ರುದ್ರೇಶ್ ಮತ್ತು ಟಿ.ಸುರೇಶ್ ರವರು ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.
ಆರಂಭದಲ್ಲಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಶಾಲೆಯ ಟಿ. ಹೆಚ್. ಎಂ. ಶಿವಕುಮಾರ್ ಸ್ವಾಮಿ ಮತ್ತು ಸಂಗಡಿಗರಿಂದ ವಚನ ಗಾಯನ, ನಂತರ ನಿವೃತ್ತ ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ ಸ್ವಾಗತಿಸಿದರು. ಅಂತ್ಯದಲ್ಲಿ ಸಹಶಿಕ್ಷಕಿ ಶ್ರೀಮತಿ ಸುಜಾತ ವಂದಿಸಿದರು.
ಸಹ ಶಿಕ್ಷಕಿ ಶ್ರೀಮತಿ ತನುಜ .ವಿ.ಬಿ. ಇವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಕಾರ್ಯದರ್ಶಿ ಎನ್ ಅಡಿವೆಪ್ಪ, ಟ್ರಸ್ಟಿಗಳಾದ ಇಂದಿನ ಸುದ್ದಿ ಸಂಪಾದಕ ವೀರಪ್ಪ .ಎಂ.ಭಾವಿ, ನಾಗರಾಜ ಯರಗಲ್ ಮತ್ತಿತರರು ಉಪಸ್ಥಿತರಿದ್ದರು.