ಹರಿಹರ: ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿಯಾ ಮಾಲ್‍ನಲ್ಲಿ ಇತ್ತೀಚೆಗೆ ನಡೆದ 12ನೇ ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ದೆಯಲ್ಲಿ ಹರಿಹರದ ಬ್ರದರ್ಸ್ ಜಿಮ್ ವತಿಯಿಂದ ಪುರುಷ ಮತ್ತು ಮಹಿಳೆಯರ ಗುಂಪಿನಿಂದ ಒಟ್ಟು 29 ಪದಕಗಳನ್ನು ಪಡೆದಿದ್ದಾರೆ.
ಜಿಮ್‍ನಿಂದ 35 ಕೀಡಾಪಟುಗಳು ಭಾಗವಹಿಸಿದ್ದು 21 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಒಟ್ಟು 29 ಗಳಿಸಿ ಕರ್ನಾಟಕ ಭೀಷ್ಮ 2024 ಶ್ರೀ ಹಾಗೂ ಚಂದ್ರಶೇಖರ್ ಪ್ರಶಸ್ತಿ ಪಡೆದಿದ್ದಾರೆ. ಮಹಿಳಾ ಕ್ರೀಡಾಪಟುಗಳು ಕರ್ನಾಟಕ ಓಬವ್ವ 2024 ಹಾಗೂ ಶ್ರೀಮತಿ ರೇಖಾ ಬಾಯಿ ಪ್ರಶಸ್ತಿ ಮುಡಿಗೇರಿಸಿದ್ದಾರೆ.
ಮುಂದಿನ ತಿಂಗಳು ಚತ್ತೀಸಗಡ ರಾಜ್ಯದ ರಾಯಪುರದಲ್ಲಿ ನಡೆಯಲಿರುವ 46ನೇ ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗೆ ಈ ತಂಡ ಅಯ್ಕೆ ಆಗಿದೆ. ವಿಜೇತ ಕ್ರೀಡಾಪಟುಗಳಿಗೆ ಬ್ರದರ್ಸ್ ಜಿಮ್ ಸಂಚಾಲಕ, ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಅಕ್ರಂ ಬಾಷಾ, ತರಬೇತುದಾರ, ಅಂತರರಾಷ್ಟ್ರೀಯ ಬಾಡಿ ಬಿಲ್ಡರ್ ಮೊಹಮ್ಮದ್ ರಫೀಕ್ ಅಭಿನಂದಿಸಿದ್ದಾರೆ.