ಹರಿಹರ ಅ 1 (Davangere district ) : ದಲಿತರಿಗೆ ಸ್ಮಶಾನ (ಸುಡುಗಾಡು,ಶ್ಮಶಾನ ) ಇಲ್ಲದ ಗ್ರಾಮವೆಂದೇ ಖ್ಯಾತಿಪಡೆದಿರುವ ತಾಲೂಕಿನ ಗುತ್ತೂರು ಗ್ರಾಮದ ದಲಿತ ಸಮುದಾಯದವರು, ಗುರುವಾರ ನಗರದ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿಪತ್ರ ಅರ್ಪಿಸಿದರು.
ನಗರದ ತಾಲೂಕು ಪಂಚಾಯ ಆವರಣದಲ್ಲಿ ಸೇರಿದ್ದ ದಲಿತ ಸಮುದಾಯದ ಜನರೆಲ್ಲಾ ಹಲಗೆಗಳನ್ನು ಭಾರಿಸುತ್ತ, ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಮೂಲಕ ಹರಪನಹಳ್ಳಿ ಸರ್ಕಲ್‍ಗೆ ಬಂದು ಅಲ್ಲಿ ಮಾನವ ಸರಪಳಿ ನಿರ್ಮಿಸಿ, ದೇಶ ಸ್ವಾತಂತ್ರ್ಯಗೊಂಡು 70 ವರ್ಷ ಗತಿಸಿದರು ಸುಡುಗಾಡು ಇಲ್ಲದ ಗ್ರಾಮ ಗುತ್ತೂರು ಗ್ರಾಮಕ್ಕೆ ಶಾಶ್ವತ ಸುಡುಗಾಡು (crematorium) ನೀಡಬೇಕೆಂದು ಆಗ್ರಹಿಸಿದರು.
ನಂತರ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಗುರುಬಸವರಾಜ ಮೂಲಕ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗುತ್ತೂರು ಗ್ರಾಂ.ಪಂ ಮಾಜಿ ಸದಸ್ಯ ಅಜ್ಜಪ್ಪ ಡಿಕೆಜಿ ಮಾತನಾಡಿ, ಗುತ್ತೂರು ಗ್ರಾಮದಲ್ಲಿ ದಲಿತರಿಗಾಗಿ ಸ್ಮಶಾನ (ರುದ್ರಭೂಮಿ) ಇಲ್ಲದಿರುವ ಕಾರಣ, ಸುಮಾರು 70 ವರ್ಷಗಳಿಂದ ತುಂಗಭದ್ರಾ ನದಿಯ ದಡದಲ್ಲಿ ಶವಸಂಸ್ಕಾರ ಮಾಡುತ್ತಾ ಬಂದಿರುತ್ತಾರೆ. ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ. ದಲಿತ ಸಮುದಾಯದವರು ಸತ್ತರೆ ಶವವನ್ನು ಹೊತ್ತು ಸಾಗಲು ಸರಿಯಾದ ರಸ್ತೆ ಇಲ್ಲದಿರುವ ಕಾರಣ, ರೈತರ ಹೊಲಗದ್ದೆಗಳಲ್ಲಿ ಹಾದು ಹೋಗಿ ಸತ್ತವರ ಶವವನ್ನು ಉಳುವುದು ದಲಿತರ ಗೋಳಿನ ಕಥೆಯಾಗಿದೆ.
ಇನ್ನು ಮಳೆಗಾಲ ಬಂತೆಂದರೆ ಸಾಕು. ಜೀವ ಕೈಯಲ್ಲಿ ಹಿಡಿದುಕೊಂಡು ಶವವನ್ನು ಹೆಗಲಮೇಲೆ ಹೊತ್ತುಕೊಂಡು ಅಂತ್ಯಕ್ರಿಯೇಗೆ ತೆರಳುವ ದೃಷ್ಯವಂತೂ ಕರುಳು ಕಿತ್ತುಬರುವಂತಿರುತ್ತದೆ. ಈ ಕುರಿತು ಈಗಾಗಲೆ ಎಷ್ಟೋ ಭಾರಿ ಮನವಿ ಮಾಡಕೊಂಡರು ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ನಮಗೆ ಸಹಕರಿಸಿಲ್ಲವೆಂಬುದು ದಲಿತರ ನೋವಿನ ಮಾತಾಗಿದೆ. ಎಷ್ಟೋ ಬಾರಿ ಶವಸಂಸ್ಕಾರಕ್ಕೆ ಬಂದ ಜನರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆಗಳು ನಡೆದಿವೆ.
READ ALSO : DAVANGAGERE : ಕಾಂಗ್ರೆಸ್ ಸರ್ಕಾರ ಅಸ್ಥಿರತೆಗಾಗಿ ಬಿಜೆಪಿ ಯತ್ನ
ತುಂಗಭದ್ರಾ ನದಿ ನೀರು ಹೆಚ್ಚಾದರೆ ಸಾಕು ಶವವನ್ನು ನೀರಿನಲ್ಲಿ ಹೊತ್ತು ಸಾಗಿ ಅಂತ್ಯ ಸಂಸ್ಕಾರ ಮಾಡುವಾಗ ಕಣ್ಣೀರು ಹಾಕುತ್ತ, ದುಕ್ಕದಲ್ಲಿಯೇ ಶವದ ಜೊತೆ ನೀರು ಪಾಲು ಆಗುತ್ತೆವೆಂಬ ಭಯ, ಆತಂಕದ ನಡುವೆಯೇ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ನಾವು ಬಡವರು ಶವ ಅಂತ್ಯ ಸಂಸ್ಕಾರ ಮಾಡಲು ಜಮೀನು ಇರುವುದಿಲ್ಲ. ಮಾಜ್ಯ ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿಗಳು ಗುತ್ತೂರಿನ ದಲಿತರಿಗೆ ರುದ್ರಭೂಮಿಯನ್ನು ಮುಂಜೂರು ಮಾಡಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ಹೆಚ್.ಬಿ.ಸಿ ನಾಗರಾಜ್ ಮಾತನಾಡಿ, ಮನೆಯಲ್ಲಿ ಯಾರಾದರೂ ಸತ್ತರೆ(ದೈವಧೀನರಾದರೆ) ತುಂಗಭದ್ರಾ ನದಿಯ ದಡವೆ ನಮಗೆ ಸ್ಮಶಾನವಾಗಿದೆ. ಆದ ಕಾರಣ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಗುತ್ತೂರಿನ ಹತ್ತಿರ ಇರುವ ಕೆಇಬಿ ಪಕ್ಕದಲ್ಲಿನ ಸರ್ವೆ ನಂ 89/1ರ, 77/1, 78/* ಸರಕಾರದ ಜಾಗ ಇದ್ದು ನಮಗೆ ಇವುಗಳಲ್ಲಿ ಯೋವುದಾದರು ಒಂದರಲ್ಲಿ ರುದ್ರಭೂಮಿಗೆ ಸ್ಥಳಾವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತಾಲೂಕು ಮಾದಿಗ ಸಮಾಜದ ಅಧ್ಯಕ್ಷರು, ನಗರಸಭೆ ಸದಸ್ಯರಾದ ರಜನಿಕಾಂತ, ವಿರುಪಾಕ್ಷಪ್ಪ, ಅಟೋ ಹನುಮಂತಪ್ಪ, ವೀರೇಶಪ್ಪ. ನಿಜಗುಣಪ್ಪ. ಹೆಚ್.ಎಸ್ ಕೊಟ್ರೇಶ್. ಸುಧಾಕರ. ಚಂದ್ರಪ್ಪ. ಪರಸಪ್ಪ ಎ. ದೊಡ್ಮನಿ ಕೊಟ್ರಪ್ಪ. ವೈ.ಬಿ ಪ್ರಭಾಕರ, ಎನ್ ಕೆ ಡಿ ಕೊಟ್ರಪ್ಪ. ಮಂಜಪ್ಪ ಭಾನುವಳ್ಳಿ ದಲಿತರಿಗಾಗುತ್ತಿರುವ ಅನ್ಯಾಯದ ಕುರಿತು ಮಾತನಾಡಿ, ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಅಂಜನಪ್ಪ. ಜೆಡಿಎಂ.ಅಂಜಿನಪ್ಪ. ಮಾಕರ್ಂಡಪ್ಪ. ಬೋಲಪ್ಪ. ಬಸವರಾಜಪ್ಪ. ಚೌಡಪ್ಪ. ಭೂತಪ್ಪರ ಹಾಲಪ್ಪ. ನಿಂಗಪ್ಪ ಚಿಕ್ಕಳ್ಳೋರು. ಹನುಮಂತಪ್ಪ. ಮೈಲಪ್ಪ ದೊಡ್ಮನೆ. ಬಸಪ್ಪ ಕುಲ್ಡವರ. ಹನುಮಂತಪ್ಪ. ಎಂಬಿ ಅವಿನಾಶ್. ಎಂಡಿ ನಾಗರಾಜ. ಮರಿದೇವ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ದಲಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.