ಹರಿಹರ : ಸಂಘ -ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಸಬಲೀಕರಣಗೊಳ್ಳುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ ಡಿ ಸಲಹೆ ನೀಡಿದರು.
ಹರಿಹರ ಸಮೀಪ ಗುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ ಲೇಖನ ಸಾಮಗ್ರಿ ವಿತರಿಸಿದರು.
ಬೆಂಗಳೂರಿನ ಮಾರ್ವಾಡಿ ಯುವ ಮಂಚ್ ಸಂಘದ ಅಧ್ಯಕ್ಷ ಸ್ನೇಹ ಕುಮಾರ್ ಜಾಜಿ ಮಾತನಾಡಿ, ನಮ್ಮ ಸಂಘದಿಂದ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ 5000 ಕಿಟ್ ವಿತರಣೆ ಮಾಡುತ್ತಾ ಬಂದಿರುತ್ತೇವೆ. ಈ ವರ್ಷ ಹರಿಹರ ತಾಲೂಕಿನ ಗುತ್ತೂರು, ದೀಟೂರು ವಿನೋಬನಗರ, ನೀಲಕಂಠನಗರ, ಕಾಳಿದಾಸನಗರ,ರಾಜನಹಳ್ಳಿ, ರಾಜನಹಳ್ಳಿ ಎ ಕೆ ಕಾಲೋನಿ, ಹಲಸುಬಾಳು, ಎಳೆಹೊಳೆ, ಆಶ್ರಯ ಕಾಲೋನಿ ಮಲೆಬೆನ್ನೂರು, ನಂದಿತಾವರೆ ಈ ಶಾಲೆಯ ಮಕ್ಕಳಿಗೆ 1100 ಬ್ಯಾಗ್ ಕಿಟ್ ಹಾಗೂ 20 ಫ್ಯಾನುಗಳನ್ನು ವಿತರಿಸಿದ್ದೇವೆ ಎಂದರು.
ಮತ್ತೋರ್ವ ಮಾರ್ವಾಡಿ ಯುವ ಮಂಚನ ಮಾಜಿ ಅಧ್ಯಕ್ಷ ಅಂಕಿತ್ ಮೋದಿ ಮಾತನಾಡಿ, ಮುಂದಿನ ದಿನದಲ್ಲಿ ಹರಿಹರದ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಸವಾರ್ಂಗಿನ ಅಭಿವೃದ್ಧಿ ಮಾಡುತ್ತೇವೆ ಎಂದರು.
DAVANAGERE (THEFT) : ಕಳವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಹೆಗಡೆ ಮಾತನಾಡಿ. ಹರಿಹರ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಹಾಗೂ ಮಕ್ಕಳಿಗೆ ಸಹಕಾರ ನೀಡಿದ ಮಾರ್ವಾಡಿ ಯುವ ಮಂಚನ ಎಲ್ಲಾ ಸರ್ವ ಪದಾಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು.
ಅಕ್ಷರ ದಾಸೋಹ ಸಹಾಯ ನಿರ್ದೇಶಕ ರಾಮಕೃಷ್ಣಪ್ಪ, ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ ಭೂಮೇಶ, ಬೆಳಗಾಂ ಡಿಸ್ಟ್ರಿಕ್ಟ್ ಮಾರವಾಡಿ ಯುವ ಮಂಚ್ ಅಧ್ಯಕ್ಷರಾದ ಗೋಪಾಲ್, ಉಪಾಧ್ಯಕ್ಷ ಮಾಜಿ ಅಧ್ಯಕ್ಷ ಅಜಯ್ ಹೆಡ್ಡ, ಮಧುಸೂದನ್ ಭಟ್, ರಾಜ್ಯ ಉಪಾಧ್ಯಕ್ಷ ಗೋಪಾಲ್ ಕುಮಾರ್, ಕಾರ್ಯದರ್ಶಿ ರೋಹಿತ್ ಶರ್ಮಾ, ಮೋನಿμÁ ಮನ್ಸೂರಿಯ, ಪಂಕಜ್ ಜಾಲ ಅಂಕಿತ್ ಮೋದಿ, ಹಾಗೂ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.