ದಾವಣಗೆರೆ (Davanagere): ಜೀತೋ ಸಂಸ್ಥೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ಸಲುವಾಗಿ ‘ಉದ್ಯೋಗ ಮೇಳ-2025’ನ್ನು ಏ. 5 ರಂದು ಬೆಳಿಗ್ಗೆ 10 ಗಂಟೆಗೆ, ಪಿಜೆ ಬಡಾವಣೆಯ ಜೈನ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ
ಉದ್ಯೋಗ ಮೇಳದಲ್ಲಿ 18 ರಿಂದ 35 ವಯೋಮಾನದ ಯಾವುದೇ ವಿದ್ಯಾರ್ಹತೆಯವರು ಪಾಲ್ಗೊಳ್ಳಬಹುದಾಗಿದ್ದು, ಐ.ಟಿ. ವಲಯ, ಬ್ಯಾಂಕಿಂಗ್, ಫೈನಾನ್ಸ್, ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್, ಮ್ಯಾನೇಜೆಂಟ್, ಫಾರ್ಮ್ ಸುಟಿಕಲ್, ಬಿ.ಪಿ.ಓ. ವಾಯ್ಸ್, ರೀಟೇಲ್ ಸೇಲ್ಸ್ ಅಂಡ್ ಮಾರ್ಕೆಟಿಂಗ್, ಆಟೋಮೇಟೀವ್, ಡಾಟಾ ಎಂಟ್ರಿ ಆಪರೇಟರ್, ಸೇವಾ ಕ್ಷೇತ್ರ ಹೀಗೆ ಹಲವಾರು ಖ್ಯಾತ ಸಂಸ್ಥೆಗಳು ಭಾಗವಹಿಸಲಿದ್ದು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿರುತ್ತವೆ.
ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಅಗತ್ಯ ದಾಖಲೆಗಳೊಂದಿಗೆ ಮೇಳಕ್ಕೆ ಆಗಮಿಸಬೇಕು.
Read also : ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ : ಕರ್ನಾಟಕ ಭೀಮ್ ಸೇನೆಯಿಂದ ಪಥ ಸಂಚಲನ
ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 94816 – 71954, 98445-83442 ಸಂಪರ್ಕಿಸಿ. ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.