Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕನ್ನಡದ ಕಂಪು ಗ್ರಾಮೀಣದಲ್ಲಿ ಉಳಿದಿದೆ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ 
ತಾಜಾ ಸುದ್ದಿ

ಕನ್ನಡದ ಕಂಪು ಗ್ರಾಮೀಣದಲ್ಲಿ ಉಳಿದಿದೆ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ 

Dinamaana Kannada News
Last updated: March 18, 2024 4:13 pm
Dinamaana Kannada News
Share
Kannada campu remains rural
ಹರಿಹರದಲ್ಲಿ ಸೋಮವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಸ್.ಎಸ್.ಲೈಫ್ ಕೇರ್ ಟ್ರಸ್ಟ್‍ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೆವಪ್ಪ, ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಹಾಗೂ ಕಸಾಪಪದಾಧಿಕಾರಿಗಳಿದ್ದರು.
SHARE

ಹರಿಹರ:
ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ಕಂಪು ಉಳಿದಿದೆ ಎಂದು ಬೆಂಗಳೂರು ಸಂಸ್ಕøತ ವಿವಿ ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ನಗರದ ಸಿದ್ದೇಶ್ವರ ಪ್ಯಾಲೇಸ್‍ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಸೋಮವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳನದ ಪ್ರಧಾನ ಭಾಷಣ ಮಾಡಿದರು.
ಒಂದು ಸರ್ವೆ ಪ್ರಕಾರ ರಾಜ್ಯದಲ್ಲಿ ಆಂಗ್ಲ ಭಾಷೆ ಮಾತನಾಡುವವರು ಸಂಖ್ಯೆ ಶೇ.76ರಷ್ಟಿದೆ, ಕನ್ನಡವೂ ಸೇರಿದಂತೆ ಇತರೆ ಭಾಷೆ ಮಾತನಾಡುವವರ ಸಂಖ್ಯೆ ಶೇ.24ರಷ್ಟಿದೆ, ಮಹಾನಗರಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ಕಂಪು ಉಳಿದಿದೆ, ಈ ವಾತಾವರಣವನ್ನು ಬದಲಾಯಿಸುವ ಶಕ್ತಿ ಮತ್ತು ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲೆಯೆ ಇದೆ ಎಂದರು.

ದಿನ ಪತ್ರಿಕೆ, ಪುಸ್ತಕಗಳಿಗೆ ಹಣ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ

ಕೇರಳ ನಿವಾಸಿಗಳಂತೆ ಕರ್ನಾಟಕ ರಾಜ್ಯ ವಾಸಿಗಳೂ ಕೂಡ ದಿನ ಪತ್ರಿಕೆ, ಪುಸ್ತಕಗಳಿಗೆ ಹಣ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಬೆಂಗಳೂರು ಸಂಸ್ಕøತ ವಿವಿ ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿರಪಾಯಪಟ್ಟರು.
ಕೇರಳದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳನ್ನು ಖರೀದಿಸಲು ಹಣ ಮೀಸಲು ಇಡುತ್ತಾರೆ. ಇದೇ ರೀತಿ ಕನ್ನಡಿಗರೂ ಮಾಡಿದರೆ ಕನ್ನಡದ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡವೂ ಬೆಳೆಯುತ್ತದೆ ಎಂದರು.

ಕನ್ನಡ ಶ್ರೀಮಂತ ಭಾಷೆ ಮಕ್ಕಳಿಗೆ ಪರಿಚಯಿಸಿ

ಕರ್ನಾಟಕದಲ್ಲಿ ನಿರ್ಮಲ ವಾತಾವರಣವಿದೆ, ಕನ್ನಡಿಗರು ಮೂಲತಃ ಸಹಿಷ್ಣುಗಳಾಗಿದ್ದಾರೆ, ಕನ್ನಡ ಉಳಿದರೆ ಕನ್ನಡಿಗರು ಉಳಿಯುತ್ತಾರೆ, ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ, ಶ್ರೀಮಂತವಾದ ಕನ್ನಡ ಭಾಷಾ ಪರಂಪರೆಯ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು.

12ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿದ್ದ ಯುಗಧರ್ಮ ರಾಮಣ್ಣ ನೂತನ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲರಿಗೆ ಕನ್ನಡದ ಧ್ವಜವನ್ನು ಹಸ್ತಾಂತರಿಸಿ, ಶಿಕ್ಷೆ ಮತ್ತು ಶಿಕ್ಷಣ ಕನ್ನಡದಲ್ಲಿರಬೇಕು, ಸಾಧನೆ ಮಾಡುವ ಜೊತೆಗೆ ಸಾಕ್ಷಾತ್ಕಾರ ಮಾಡಿಸಬೇಕು, 1ನೇ ತರಗತಿಯಲ್ಲಿ 5 ಬರಿ ಫೇಲ್ ಆದ ನನ್ನಂತಹ ವ್ಯಕ್ತಿಗೆ 12ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ಉಂಟು ಮಾಡಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ರವರು ಹೆಳವನಕಟ್ಟೆ ಗಿರಿಯಮ್ಮ ಹಾಗೂ ಪ್ರೊ.ಬಿ.ಕೃಷ್ಣಪ್ಪರನ್ನು ಸ್ಮರಿಸುತ್ತಾ ಮಾತನಾಡಿ, ಹತ್ತಿಗಿರಣಿಗೆ ಹೆಸರುವಾಸಿಯಾಗಿದ್ದ ದಾವಣಗೆರೆ ಈಗ ವಿದ್ಯಾಕಾಶಿಯಾಗಿ ರೂಪಾಂತರವಾಗಿದೆ. ಹರಿಹರವನ್ನು ನಡುನಾಡು, ಅಥವಾ ಮದ್ಯಾನಡು ಎಂದು ಗುರುತಿಸಲಾಗಿದ್ದು ದಕ್ಷಿಣ ಮತ್ತು ಉತ್ತರ ನಾಡಿನ ಸಾಂಸ್ಕøತಿಕ ಹೆಬ್ಬಾಗಿಲಾಗಿದೆ ಎಂದರು.
ಒಂದು ಮೂರ್ತಿ ದೇವರಿಬ್ಬರು ಎಂಬ ಹಿರಿಮೆ ಹೊಂದಿರುವ ಹರಿಹರೇಶ್ವರ ದೇವಲಾಯ ಹರಿಹರದ ಐತಿಹಾಸಿಕ ಹಿನ್ನೆಲೆಯನ್ನು ವ್ಯಕಪಡಿಸುತ್ತದೆ. ಇಲ್ಲಿರುವ ಶಾಸನಗಳು 7ರಿಂದ 19ನೇ ಶತಮಾನದ ಅವಧಿಯದ್ದಾಗಿವೆ. ನಾಡಿನ ಖ್ಯಾತ ಸಾಹಿತಿಗಳಾದ ತ.ರಾ.ಸು., ನಾಡಿಗೇರ್ ಕೃಷ್ಣರಾಯರು, ದಾಶರತಿ ದೀಕ್ಷಿತರು, ಪ್ರೊ.ಎಚ್.ಎಂ.ಶಂಕರ ನಾರಾಯಾಣರು, ಡಾ.ಪೊಲಂಕಿ ರಾಮಮೂರ್ತಿ, ಪಿ.ಲಂಕೇಶ್‍ರ ಪೂರ್ವಜರು ಹರಿಹರದವರಾಗಿದ್ದಾರೆ ಎಂದರು.

ಭೌಗೋಳಿಕ, ಪೌರಾಣಿಕ ಹಾಗೂ ಚಾರಿತ್ರಿಕವಾಗಿ ವಿಶೇಷ ಮಹತ್ವವನ್ನು ಹೊಂದಿದ ಹರಿಹರ ಅಭಿವೃದ್ಧಿಯನ್ನು ಪಡೆಯಲು ಎಲ್ಲಾ ರ್ಹತೆ ಹೊಂದಿದೆ. ನದಿ ಇದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು ಅಗಸನಕಟ್ಟೆ ಕೆರೆ ಯನ್ನು ಪರ್ಯಾಯ ನೀರಿನ ಮೂಲವಾಗಿ ಅಭಿವೃದ್ಧಿಪಡಿಸಬೇಕು, ಭೈರನಪಾದ ನೀರಾವರಿ ಯೋಜನೆ ಕೈಗೂಡಬೇಕು, ಕೈಗಾರಿಕಾ ಘಟಕಗಳನ್ನು, ಜವಳಿ ಪಾರ್ಕ್, ಪವನ ವಿದ್ಯುತ್ ಸ್ಥಾವರ ಘಟಕಗಳ ಸ್ಥಾಪನೆಯಾಗಿ ನಗರವು ಸಂತಷ್ಟುಗೊಳ್ಳಬೇಕು, ಈ ದಿಸೆಯಲ್ಲಿ ಜನಪ್ರತಿಗಳು ಸರ್ಕಾರದ ಮೇಲೆ ಒತ್ತಡ ತರಲಿ ಎಂದರು.

ಶ್ರಾವಣ ಸಂಭ್ರಮ ಕವನ ಸಂಕಲನಗಳನ್ನು ಲೋಕಾರ್ಪಣೆ

ಸಮ್ಮೇಳನವನ್ನು ಉದ್ಘಾಟಿಸಿದ ಎಸ್.ಎಸ್.ಲೈಫ್ ಕೇರ್ ಟ್ರಸ್ಟ್‍ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯುತ್ತಾರೆ ಎಂದ ಅವರು, ಬೇರೆ ರಾಜ್ಯಗಳಲ್ಲಿ ಶಿಕ್ಷಣ ಪಡೆದು ಮರಳಿದ ನನ್ನ ಹಿರಿಯ ಪುತ್ರನಿಗೆ, ನನ್ನ ಕಿರಿಯ ಪುತ್ರನೆ ಗುರುವಾಗಿ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾನೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಎನ್.ಟಿ.ಎರ್ರಿಸ್ವಾಮಿ ರಚಿತ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ, ಸೀತಾ ಎಸ್.ನಾರಾಯಣ ರಚಿತ ಜ್ಞಾನವಾರದಿ ಪ್ರಬಮಧ, ಎಚ್.ಎನ್.ಶಿವಕುಮಾರ್ ರಚಿತ ಶ್ರಾವಣ ಸಂಭ್ರಮ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಯಿತು.

ಸಂಗಮ ಸಿರಿ ಸ್ಮರಣ ಸಂಚಿಕೆ ಕುರಿತು ಸಂಚಿಕೆಯ ಸಂಪಾದಕ ಪ್ರೊ.ಎಚ್.ಎ.ಭಿಕ್ಷಾವರ್ತಿ ಮಠ ಮಾತನಾಡಿದರು.

ಸುಗಮ ಸಂಗೀತ ಪರಿಷತ್ತಿನ ಗಾಯಕರು ಸುಗಮ ನಾಡಗೀತೆ ಹಾಗೂ ರೈತ ಗೀತೆ ಹಾಡಿದರು.ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ಮತ್ತು ಕೆ.ರಾಘವೇಂದ್ರ ನಾಯರಿ ನಿರೂಪಿಸಿದರು, ಜಿಗಳಿ ಪ್ರಕಾಶ್ ವಂದಿಸಿದರು. ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಿಸಿದರು.

ಬೆಳಿಗ್ಗೆ 8ಕ್ಕೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾದ್ಯಕ್ಷ ಬಿ.ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ, ಪೌರಾಯುಕ್ತ ಐಗೂರು ಬಸವರಾಜ್ ನಾಡ ಧ್ವಜಾರೋಹಣ ಮಾಡಿದರು. ನಂತರ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಸಮ್ಮೇಳನಾದ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಚಾಲನೆ ನೀಡಿದರು.

ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಕೆ.ಬಿ.ಕೊಟ್ರೇಶ್, ಹಾವೇರಿ ಕಸಾಪ ಜಿಲ್ಲಾದ್ಯಕ್ಷ ಎಚ್.ಬಿ.ಲಿಂಗಯ್ಯ, ಕಸಾಪ ಹರಿಹರ ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಎ.ರಿಯಾಜ್ ಅಹ್ಮದ್, ಜಿಗಳಿ ಪ್ರಕಾಶ್, ಚಿದಾನಂದ ಕಂಚಿಕೇರಿ, ಕುಂಬಳೂರು ಸದಾನಂದ, ವೀರೇಶ್ ಎಸ್.ಒಡೇನಪುರ, ಎ.ಕೆ.ಭೂಮೇಶ್, ಸಿದ್ದಪ್ಪ, ಬಿ.ಬಿ.ರೇವಣನಾಯ್ಕ್, ಶಶಿಕುಮಾರ್ ಮೆಹರ್ವಾಡೆ, ಗಣಪತಿ ಮಾಳಂಜಿ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ರಮೇಶ್ ಮಾನೆ, ಎಂ.ಇಲಿಯಾಸ್ ಅಹ್ಮದ್, ಎಚ್.ಸುಧಾಕರ, ಪ್ರೀತಮ್ ಬಾಬು, ಈಶಪ್ಪ ಬೂದಿಹಾಳ್, ರಾಜೇಶ್, ಶಶಿನಾಯ್ಕ್, ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಕಸಾಪ ಅಧ್ಯಕ್ಷರಾದ ಎ.ಜಿ.ಸುಮತಿ ಜಯಪ್ಪ, ಜಿ.ಮುರುಗೆಪ್ಪ ಗೌಡ, ಎಲ್.ಜಿ.ಮಧುಕುಮಾರ್, ಡಿ.ಎಂ.ಹಾಲಾರಾದ್ಯ, ಕೆ.ಸುಜಾತಮ್ಮ ಇದ್ದರು.

 

TAGGED:Davanagere Newsdinamaana.comKannada campu remains ruralಕನ್ನಡದ ಕಂಪು ಗ್ರಾಮೀಣದಲ್ಲಿ ಉಳಿದಿದೆಕಾಂದಿನಮಾನದಿನಮಾನ.ಕಾಂ.ದಾವಣಗೆರೆ ಸುದ್ದಿ
Share This Article
Twitter Email Copy Link Print
Previous Article cm siddaramaya ಯಡಿಯೂರಪ್ಪನವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ? ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ  ಪ್ರಶ್ನೆ
Next Article Establishment of 32 check posts in the district : DC ಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್‌ಗಳ ಸ್ಥಾಪನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Harihara | ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಶಾಹಿನಾ ದಾದಾಪೀರ್

ದಾವಣಗೆರೆ (Davanagere):ಹರಿಹರ ನಗರಸಭೆಯ ಮಾಜಿ ಅಧ್ಯಕ್ಷ್ಯೆ  ಶ್ರೀಮತಿ ಶಾಹಿನಾ ದಾದಾಪೀರ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು,  ಜಿಲ್ಲಾ…

By Dinamaana Kannada News

DAVANAGERE Electrical variation : ಆ.7 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ ಆ.6 (DAVANAGERE)   : ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಆಗಸ್ಟ್ 7 ರಂದು…

By Dinamaana Kannada News

Davanagere | 23 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ

ದಾವಣಗೆರೆ.ಅ.1 (Davanagere):  ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ ಮತ್ತು ದೇವಸ್ಥಾನಗಳಲ್ಲಿ ನಡೆದಿದ್ದ 23 ಕಳ್ಳತನ ಪ್ರಕರಣಗಳಲ್ಲಿ…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?