ದಾವಣಗೆರೆ (Davanagere): ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿತಳನ್ನು ಕೆಟೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟೂರೇಶ್ವರ ಬಡಾವಣೆ ನಿವಾಸಿ ತುನುಜಾ ಬಂಧಿತ ಆರೋಪಿ.
ಭಗತ ಸಿಂಗ್ ನಗರದ ಪ್ರಕಾಶ ಎಂಬುವವರು ಕೆಟಿಜೆ ನಗರ ಠಾಣೆಗೆ ಮನೆಯಲ್ಲಿಟ್ಟಿದ್ದ 63 ಗ್ರಾಂ ಬಂಗಾರ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಅಲ್ಲದೇ ಮನೆಯ ಮೇಲೆ ಬಾಡಿಗೆಗೆ ಇದ್ದ ತನುಜಾ ಎಂಬುವವರ ಮೇಲೆ ಅನುಮಾನವಿದೆ. ಬಂಗಾರದ ಆಭರಣ ಪತ್ತೆ ಮಾಡವಂತೆ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡ ರಚಿಸಿ ಆರೋಪಿ ತನುಜಾ ಬಂಧಿಸಿ ಆರೋಪಿತಳಿಂದ 3.24.800 ರೂ ಬೆಲೆಯ 63 ಗ್ರಾಂ ತೂಕದ ಬಂಗಾರದ ಆಭರಣ ವಶಕ್ಕೆ ಪಡೆದಿದ್ದಾರೆ.
Read also : LG Havanur | ಅರಸು -ಹಾವನೂರ್ ಜೋಡಿ ಮಾಡಿದ ಮೋಡಿ
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹೆಚ್.ಎಸ್., & ಪಿ.ಎಸ್.ಐ ಸಾಗರ್ ಅತ್ತರವಾಲಾ, ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡಸಿದ್ದಪ್ಪ, ಪುರುಶೋತ್ತಮ, ಗಣೇಶ, ರವಿನಾಯ್ಕ್ , ಗೌರಮ್ಮ, ಗೀತಾ, ಭಾವನ ಬೆಳ್ಳೋಡಿ, ರೇಣುಕಾ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.