ದಾವಣಗೆರೆ (Davanagere): ಪೆಟ್ರೋಲ್ ಬಂಕ್ ನಿವೇಶನದ ಕಂದಾಯದ ಹಣ ಕಡಿಮೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹರಿಹರ ನಗರಸಭೆಯ ಕಂದಾಯಾಧಿಕಾರಿ ರಮೇಶ ಮತ್ತು ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ರಾಜು ಲಕ್ಷ್ಮಣ ಅವರ ಶ್ರೀದೇವಿ ಪೆಟ್ರೋಲ್ ಬಂಕ್ ನಿವೇಶನದ 3-4 ವರ್ಷದ ಕಂದಾಯ ರೂ 1.39,400 ಪಾವತಿ ಬಾಕಿಯಿದ್ದು, ಅದರಲ್ಲಿ ಹಣ ಕಡಿಮೆ ಮಾಡಿಕೊಡಲಾಗುವುದು . ಅದಕ್ಕೆ ಶೇ 50 ರಷ್ಟು ಹಣ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿರುವುದಾಗಿ ಪೆಟ್ರೋಲ್ ಬಂಕ್ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದರು.
ದೂರುದಾರರಿಂದ ಆರೋಪಿ ಅಧಿಕಾರಿ ನಾಗೇಶ್ 20 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಧಿಕಾರಿಗಳಾದ ರಮೇಶ್ ಮತ್ತು ನಾಗೇಶ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Read also : Davanagere | ಅ.26, 27 ರಂದು ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ