Davangere News | Lokesh Talikatte Interview | Dinamaana.com | 31-05-2024
Lokesh Talikatte Interview: ಶಾಲೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತ ಕಾಯುವುದೇ ನನ್ನ ಪ್ರಮುಖ ಧ್ಯೇಯ ಎಂಬ ಉದ್ದೇಶ ಇಟ್ಟುಕೊಂಡು ಕರ್ನಾಟಕ ರುಪ್ಸ ಅಧ್ಯಕ್ಷರಾಗಿರುವ ಲೋಕೇಶ್ ತಾಳಿಕಟ್ಟೆ , ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಲೋಕೇಶ್ ತಾಳಿಕಟ್ಟೆ ಸಂದರ್ಶನ (Lokesh Talikatte Interview)
ನಿಮಗೆ ಏಕೆ ಮತ ಹಾಕಬೇಕು?
ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಅಮೂಲಾಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ವಿಧಾನ ಪರಿಷತ್‌ಗೆ ಶಿಕ್ಷಕರ ಕ್ಷೇತ್ರದ ಸ್ಥಾನ ಮೀಸಲಿರಿಸಿದ್ದು, ಈವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರಾಗಿ ದುಡಿದು ಹಾಗೂ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನವುಳ್ಳ ವ್ಯಕ್ತಿ ವಿಧಾನ ಪರಿಷತ್‌ಗೆ ಆಯ್ಕೆಯಾದ ನಿದರ್ಶನಗಳಿಲ್ಲ. ತಾವು ಶಿಕ್ಷಕನಾಗಿ, ರೂಪ್ಸ ಅಧ್ಯಕ್ಷನಾಗಿ ಶಿಕ್ಷಕರ ಜ್ವಲಂತ ಸಮಸ್ಯೆಗಳ ಅರಿವಿದೆ. ಹೀಗಾಗಿ ಶಿಕ್ಷಕ ಸಮೂಹ ಹಾಗೂ ಶಿಕ್ಷಣ ಸಂಸ್ಥೆಗಳ ಸದಸ್ಯರು, ಶಿಕ್ಷಕರೇ ಈ ಕ್ಷೇತ್ರವನ್ನು ಪ್ರತಿನಿಧಿಸಬೇಕೆಂದು ನಿರ್ಧಾರ ಮಾಡಿ ಶಿಕ್ಷಕರು ನನಗೆ ಬೆಂಬಲಿಸುವ ಸಂಪೂರ್ಣ ವಿಶ್ವಾಸ ನನಗಿದೆ.
Dont Miss This: ಅನಧಿಕೃತವಾಗಿ ಮಗು ಸಾಕಿದ ಆರೋಪ : ಕ್ರಮಕ್ಕೆ ಸೂಚನೆ
ಆಯ್ಕೆಯಾದರೆ ಯಾವ ಕೆಲಸಗಳಿಗೆ ಆದ್ಯತೆ ನೀಡುತ್ತೀರಿ?
ಶಿಕ್ಷಕರ ಪ್ರತಿನಿಧಿಯಾಗಿ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಗಟ್ಟಿಯಾಗಿ ದ್ವನಿ ಎತ್ತುತ್ತೇನೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಪಿಂಚಣಿ ಸೌಲಭ್ಯ ಸೇರಿದಂತೆ ಶಿಕ್ಷಕರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.
ಶಿಕ್ಷಕರ ಅಭ್ಯುದಯಕ್ಕೆ ವಿಶೇಷ ಕಾರ್ಯಕ್ರಮಗಳು ಇವೆಯೇ?
ಖಾಸಗಿ ಶಾಲಾ ಶಿಕ್ಷಕರ ವೇತನ ತಾರತಮ್ಯ, ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಸದಸ್ಯತ್ವದ ವಿಚಾರ ಹಾಗೂ ಶಿಕ್ಷಕರ ನೇಮಕಾತಿ ಸಂಬAಧ ವೈ.ಎ.ನಾರಾಯಣಸ್ವಾಮಿ ಅವರು ಸದನದಲ್ಲಿ ಒಂದು ಬಾರಿಯೂ ದ್ವನಿ ಎತ್ತಿಲ್ಲ ಎಂದು ಆರೋಪಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ.
ಜೊತೆಗೆ ಸರ್ಕಾರಿ ಶಾಲಾ ಶಿಕ್ಷಕರ ಟೈಮ್ ಬಾಂಡ್, ಒಪಿಎಸ್, ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ಹಾಕುವುದೇ ನನ್ನ ಮೊದಲ ಕರ್ತವ್ಯವಾಗಿದೆ.
ಕ್ಷೇತ್ರದಲ್ಲಿ ಸುತ್ತಿದಾಗ ಸ್ಪಂದನೆ ಹೇಗಿದೆ?
ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ತುಮಕೂರು, ದಾವಣಗೆರೆ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಐದು ಜಿಲ್ಲೆಯ ಬಹುತೇಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಐದು ಜಿಲ್ಲೆಗಳ ಖಾಸಗಿ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ಬೆಂಬಲವೂ ನನ್ನ ಬೆನ್ನಿಗೆ ಇರುವುದರಿಂದ ನನ್ನ ಗೆಲುವು ಖಚಿತ.
ಈ ಚುನಾವಣೆಯಲ್ಲಿ ನಿಮ್ಮ ನೇರ ಎದುರಾಳಿ ಯಾರು?
ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನೇರ ಎದುರಾಳಿಗಳಾಗಿದ್ದಾರೆ. ಆದರೆ ಶಿಕ್ಷಕರ ಕ್ಷೇತ್ರದಲ್ಲಿ ಈವರೆಗೂ ಆಯ್ಕೆಯಾದ ಜನಪ್ರತಿನಿಧಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದು ನನ್ನ ಗೆಲುವಿಗೆ ಉತ್ತಮ ವಾತಾವರಣ ಕಲ್ಪಿಸಿದೆ. ರೂಪ್ಸ ಅಧ್ಯಕ್ಷನಾಗಿ ಶಿಕ್ಷಕರ ಸಮಸ್ಯೆಗಳ ಪರ ಹೋರಾಟ ನಡೆಸಿರುವ ನನಗೆ ಶಿಕ್ಷಕರು ಕೈ ಹಿಡಿಯಲಿದ್ದಾರೆ ಎಂಬ ಆಶಾಭಾವನೆ ದೃಢವಾಗಿದೆ.
English Summary: Vidhan Parishad South East Teachers Constituency Election, Lokesh Talikatte Interview, dinamaana.com, Kannada News