ದಾವಣಗೆರೆ: ಆನ್‌ಲೈನ್ ಗೇಮ್‌ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಸರಸ್ವತಿ ನಗರದ ನಿವಾಸಿ ಶಶಿಕುಮಾರ್ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಿದ್ದ. ನಂತರ ಸಾಲ ಮಾಡಿಕೊಂಡು ಅದರಲ್ಲಿ ಸಿಲುಕಿ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ಗೇಮ್‌ನಲ್ಲಿ ಸುಮಾರು 18 ಲಕ್ಷ ರೂಪಾಯಿ ಕಳೆದುಕೊಂಡು ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದ ಎಂದು ಹೇಳಲಾಗಿದೆ.
ಶಶಿಕುಮಾರ್ ಸುಮಾರು 19,25,21,722 ರೂ. ಆನ್‌ಲೈನ್ ಗೇಮ್‌ನಲ್ಲಿ ಬಂದಿದ್ದು, ವೆಬ್‌ಸೈಟ್ ಮಾಲೀಕರಿಗೆ ಕೇಳಿದರೆ ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಣ ಹೂಡಿಕೆ ಮಾಡಿದ್ದೆ. ಆದರೆ ಸೋತಾಗ ಹಣ ಪಡೆದು ನಾನು ಗೆದ್ದಾಗ ನೀಡಿಲ್ಲ ಎಂದು ಶಶಿಕುಮಾರ್ ಡೆಟ್‌ನೋಟ್‌ನಲ್ಲಿ ಬರೆದಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದಾನೆ. ಶಶಿಕುಮಾರ್ ಆತ್ಮಹತ್ಯೆಗೂ ಮುನ್ನ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಸಿಎಂ, ಡಿಸಿಎಂ ಅಲ್ಲದೇ ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ. ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆಯೂ ಡೆತ್ ನೋಟ್‌ನಲ್ಲಿ ಬರೆದಿದ್ದು, ಆನ್‌ಲೈನ್ ಗೇಮ್ ನಂಥ ವೆಬ್ ಸೈಟ್ ವಿರುದ್ಧ ಧ್ವನಿ ಎತ್ತುವಂತೆ ಕೇಳಿಕೊಂಡಿದ್ದಾನೆ. ಕೆಟಿಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.