ದಾವಣಗೆರೆ (Davanagere) : ಸುಪ್ರೀಂ ಕೋರ್ಟ್ ನ ಒಳಮೀಸಲಾತಿಯ ಪರ ತೀರ್ಪು ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ನೀಡಿದ ಮೇಲೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯ ಅನುಷ್ಠಾನಕ್ಕೆ ತೋರಿರುವ ನಿರ್ಲಕ್ಷದ ಕುರಿತು ದಾವಣಗೆರೆಯಲ್ಲಿ ಮಾದಿಗ ಸಂಘಟನೆ ಒಕ್ಕೂಟದ ಸದಸ್ಯರು ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಕೂಡಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೆಪಗಳನ್ನು ಹೇಳದೆ ಒಳಮೀಸಲಾತಿಯ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ನೀಡಿ ಮಾತನಾಡಿದ ಒಕ್ಕೂಟದ ಸಂಚಾಲಕ ಆಲೂರು ನಿಂಗರಾಜ್, “ಸುಪ್ರೀಂ ಕೋರ್ಟ್ ನ ತೀರ್ಪು ಬಂದು ಕೆಲವೇ ವಾರಗಳಲ್ಲಿ ಹರಿಯಾಣದ ಬಿಜೆಪಿ ಸರ್ಕಾರ, ತೆಲಂಗಾಣದ ಕಾಂಗ್ರೆಸ್, ಆಂಧ್ರಪ್ರದೇಶದ ತೆಲುಗುದೇಶಂ ಸರ್ಕಾರಗಳು ಒಳ ಮೀಸಲಾತಿ ಅನುಷ್ಠಾನಗೊಳಿಸಲು ಆದೇಶ ಜಾರಿ ಮಾಡಿವೆ. ಆದರೆ ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಸುಪ್ರೀಂ ತೀರ್ಪು ಬಂದು ಹಲವು ತಿಂಗಳುಗಳೇ ಕಳೆದರೂ ಒಳ ಮೀಸಲಾತಿ ಅನುಷ್ಠಾನಕ್ಕೆ ಜಾತಿಗಣತಿ, ಉದ್ಯೋಗಿಕ ಮಾಹಿತಿಯ, ಆಯೋಗದ ರಚಿಸುವ ನಾಟಕವಾಡಿ ಮುಂದೂಡುತ್ತಿದೆ” ಎಂದು ಆರೋಪಿಸಿದರು.
“ಮೊದಲ ಮೂರು ತಿಂಗಳು ಚರ್ಚೆಯ, ಆಯೋಗದ ನಾಟಕ ಮಾಡಿದ ಸರ್ಕಾರ ನ್ಯಾ. ನಾಗ ಮೋಹನ್ ದಾಸ್ ಆಯೋಗ ರಚಿಸಿ ವರದಿ ಕೇಳಿದ್ದು ಅವರಿಗೆ ಔದ್ಯೋಗಿಕ ಮಾಹಿತಿಗಳನ್ನು ನೀಡದೆ, ಈಗ ನಾಲ್ಕು ತಿಂಗಳು ಕಳೆದಿದೆ. ಆಯೋಗ ಮಧ್ಯಂತರ ವರದಿ ನೀಡಿದೆ. ಈಗ ಮತ್ತೆ ಎರಡು ತಿಂಗಳ ಕಾಲಾವಧಿಯನ್ನು ಕೇಳಿದ್ದು, ಇದು ಕಾಲಹರಣ ಮಾಡುವ ಸರ್ಕಾರದ ಕುಂಟುನೆಪವಾಗಿದೆ. ಕಳೆದ 30-40 ವರ್ಷಗಳಿಂದ ಒಳಮೀಸಲಾತಿಯನ್ನು ವಿರೋಧಿಸಿದ್ದ ಶಕ್ತಿಗಳೇ, ಆಯೋಗ ರಚನೆಯ ಬೇಡಿಕೆ ಇರಿಸಿ. ಈಗ ಕಾಲಹಲಣಮಾಡಲು ಕಾರಣವಾಗುತ್ತಿವೆ. ಈಗ ಹೊಸದಾಗಿ ಜಾತಿಗಣತಿಯ ಆಗಬೇಕೆಂಬ ಬೇಡಿಕೆಯನ್ನು ತಂದಿವೆ” ಎಂದು ಆಪಾದಿಸಿದರು.
Read also : Davanagere | ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ತರಬೇತಿಗೆ ಅರ್ಜಿ ಆಹ್ವಾನ
ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಕುಂಟುನೆಪದ ಕಾಲಹರಣ ಮಾಡುವ ನಡೆಯನ್ನು ಮಾದಿಗ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ. ಮಾದಿಗರ ಪಾಲಿನ ಶೇ.6 ಪ್ರತ್ಯೇಕ ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ. ಉಳಿದ 101 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಿ. ಈ ಹಿಂದೆ ಸರ್ಕಾರವೇ ನಡೆಸಿದ ನ್ಯಾ.ಸದಾಶಿವ ಆಯೋಗದ ವರದಿಯ ಅಂಕಿ ಅಂಶಗಳಂತೆ ಹೊಸ ಆದೇಶ ಮಾಡಿ ಒಳಮೀಸಲಾತಿ ಜಾರಿಗೊಳಿಸಲಿ ಎಂದು ಒತ್ತಾಯಿಸುತ್ತೇವೆ. ಇಲ್ಲದೆ ಹೋದಲ್ಲಿ ಇದು ಕಾಲಹರಣ ಮಾಡುವ ಉದ್ದೇಶ ಬಿಟ್ಟು ಬೇರೇನೂ ಇರುವುದಿಲ್ಲ.
ಸರ್ಕಾರದ ಈ ಕಾಲಹರಣ, ಕುಂಟುನೆಪದ ಹಿಂದೆ 37 ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶವಿದೆಯೇ? ಎನ್ನುವ ಅನುಮಾನ ಸಮುದಾಯದಲ್ಲಿ ಮೂಡುತ್ತಿದೆ. ಇದು ಅಸ್ಪೃಶ್ಯತೆ ಮತ್ತು ತುಳಿತಕೊಳ್ಳಗಾದ ಮಾದಿಗ ಸಮುದಾಯಕ್ಕೆ ಮಾಡಿದ ದ್ರೋಹವಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಾಮಾಜಿಕ ನ್ಯಾಯ ಕ್ಕಾಗಿ ಜಿಲ್ಲಾದ್ಯಕ್ಷರು ಜಿಗಳಿ ಹಾಲೇಶ್ , ಜಿಲ್ಲಾ ಗೌರವ ಅಧ್ಯಕ್ಷರು ಶಿಶಿದರ್ ಎಸ್ .ಆರ್. ಶಿರಮಗೊಂಡನಹಳ್ಳಿ ,ಜಿಲ್ಲಾ ಪ್ರದಾನ ಕಾರ್ಯ ದರ್ಶಿ ಎಚ್ .ಸಿ .ಸಿದೇಶ್ ಬಾತಿ , ತಾಲ್ಲೂಕು ಅದ್ಯಕ್ಷರು ಮಲ್ಲೇಶ್ ಹಳೆ ಚಿಕ್ಕನಹಳ್ಳಿ ತಾಲೂಕ್ ಉಪಾಧ್ಯಕ್ಷ ರು .ಎಚ್ .ಕೃಷ್ಣಪ್ಪ ಹಳೆ ಚಿಕ್ಕನಹಳ್ಳಿ ತಾಲೂಕ್ ಪ್ರದಾನ ಕಾರ್ಯದರ್ಶಿ ನಾಗರಾಜ್ ಹಳೆಚಿಕ್ಕನಹಳ್ಳಿ , ಜಿಲ್ಲಾ ವಿಕಲಚೇತನರ ಜಿಲ್ಲಾ ಅದ್ಯಕ್ಷ ರು ಉಮ್ಮೇಶ್ , ಸುರೇಶ್ , ಜಿಲ್ಲಾ ಕಲಾಮಂಡಳಿ ಅದ್ಯಕ್ಷ ರು ದೊಡ್ಡಪ್ಪ ಆವರಗೊಳ್ಳ , , ರಾಜು ಶಾಮನೂರ್, ಹರೀಶ್ ಹೊನ್ನೂರ್ ,ಷಣ್ಮುಖ ,ಅಂಜಿನಪ್ಪ ಶಾಮನೂರ್ ,ಎ.ಕೆ .ಮಹೇಶ್ ಸಣ್ಣ ಹನುಮಂತಪ್ಪ ಗಾಂದಿನಗರ , ಉಪಸ್ಥಿತರಿದ್ದರು .