ದಾವಣಗೆರೆ ಜು.03 : ಸ್ವಚ್ಛ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು ಎಸ್‌ಹೆಚ್‌ಜಿ, ಸರ್ಕಾರೇತರ ಸಂಸ್ಥೆ ಎನ್‌ಜಿಓ ಸದಸ್ಯರ ನೇಮಕಾತಿಗಾಗಿ ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
2 ವರ್ಷಗಳವರೆಗೆ ಮಹಾನಗರಪಾಲಿಕೆಯ ಜೊತೆಗೆ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ನಲ್ಮ್-ಡೇ ಅಡಿಯಲ್ಲಿ ನೋಂದಾಯಿತ ಎಸ್‌ಹೆಚ್‌ಜಿ ಸದಸ್ಯರು ಹಾಗೂ ಎನ್‌ಜಿಓ ಸದಸ್ಯರುಗಳಿಂದ ಮಹಾನಗರಪಾಲಿಕೆಯ ‘ಆಸಕ್ತಿಯ ಅಭಿವ್ಯಕ್ತಿ” ಯನ್ನು ಆಹ್ವಾನಿಸಿದ್ದು, ಇದರ ಆಯ್ಕೆ ಪ್ರಕ್ರಿಯೆ ಮತ್ತು ವೇತನಕ್ಕೆ ಸಂಬಂಧಿಸಿದ ವಿವರಗಳು; www.davanagerecity.mrc.gov.in ಅಂತರ್ಜಾಲ ತಾಣದಲ್ಲಿ ಲಭ್ಯವಿರುತ್ತದೆ.
ನಲ್ಮ್-ಡೇ ಯೊಂದಿಗೆ ನೋಂದಾಯಿಸಿಕೊಂಡ ಆಸಕ್ತ ಎಸ್‌ಹೆಚ್‌ಜಿ ಸದಸ್ಯರು, ಎನ್‌ಜಿಓ ಸದಸ್ಯರುಗಳಿಂದ ತಮ್ಮ ಆಸಕ್ತಿಯ ಅಭಿವೃತ್ತಿ’ ಯನ್ನು ನಲ್ಮ್-ಡೇ ಹಿಂಬರಹದೊಂದಿಗೆ ಮೇಲೆ ತಿಳಿಸಲಾದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲಿ ಆಗಸ್ಟ್ 2 ಸಂಜೆ 5 ಗಂಟೆಯ ಒಳಗಾಗಿ ಪಾಲಿಕೆ ಕಚೇರಿಗೆ ತಲುಪಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.