ದಾವಣಗೆರೆ : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ 2026 ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿಗಾಗಿ ವಿಶೇಷವಾಗಿ ಬುಧವಾರ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ರಸ್ತೆ ಸುರಕ್ಷತೆ ಸಂಚಾರ ನಿಯಮಗಳ ಪಾಲನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಬೈಕ್ ಜಾಥಾ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಸಿರು ನಿಶಾನೆ ತೋರುವ ಮೂಲಕ ಬೈಕ್ ಜಾಥಕ್ಕೆ ಚಾಲನೆ ನೀಡಿದರು.
ಬೈಕ್ ಜಾಥವು ಜಯದೇವ ವೃತ್ತದಿಂದ ಆರಂಭವಾಗಿ ಲಾಯರ್ ರಸ್ತೆ- ಈರುಳ್ಳಿ ಮಾರ್ಕೇಟ್ ರಸ್ತೆ- ಬಂಬೂಬಜಾರ್- ವೆಂಕಟೇಶ್ವರ ವೃತ್ತ- ಅರಳಿಮರ ವೃತ್ತ- ಹಳೇಬೇತೂರು ರಸ್ತೆ- ಹಗೆದಿಬ್ಬ ವೃತ್ತ –ದುರ್ಗಾಂಬಿಕಾ ದೇವಾಸ್ಥಾನ- ಹೊಂಡದ ವೃತ್ತ- ಅರುಣ ವೃತ್ತ ಪಿಬಿ ರಸ್ತೆ- ವಿನೋಬಾ ನಗರ 2 ನೇ ಮುಖ್ಯ ರಸ್ತೆ- ಶಾಮನೂರು ರಸ್ತೆ – ಭಾಪೂಜಿ ಸ್ಕೂಲ್ – ಬಿ ಐ ಇ ಟಿ ರಸ್ತೆ- ನೂತನ್ ಕಾಲೇಜ್ ರಸ್ತೆ- ಕಾಫಿ ಡೇ ವೃತ್ತ- ಡೆಂಟಲ್ ಕಾಲೇಜ್ ರಸ್ತೆ- ಶಾಮನೂರು ರಸ್ತೆ- ರಿಂಗ್ ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ ಮೂಲಕ ಜಿಲ್ಲಾ ಪೊಲೀಸ್ ಕಛೇರಿಗೆ ಆಗಮಿಸಿ ಮುಕ್ತಾಯಿತು.
Read also : ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ
ಪಾಲಿಕೆಯ ಆಯುಕ್ತೆ ರೇಣುಕಾ, ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ, ಪೊಲೀಸ್ ನಿರೀಕ್ಷಕ ಮಂಜುನಾಥ, ವಸಂತ್ ಪಿ ಎಸ್ ಐ ಗಳಾದ ಶೈಲಜಾ, ಪ್ರಮೀಳಮ್ಮ, ಮಹಾದೇವ ಭತ್ತೆ, ಶಕುಂತಲಾ, ಜಯಶೀಲ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಪಾಲಿಕೆ ಸಿಬ್ಬಂದಿಗಳು ಇದ್ದರು.
