ಪಾರದರ್ಶಕ ಮತದಾನ ಬೇಕು, ಎಲೆಕ್ಟ್ರಾನಿಕ್ ಮಿಷಿನ್ ಯಿಂದ ಮತದಾನ ದುರ್ಬಳಕೆ ಬೇಡ, ಇವಿಎಂ ಬದಲು ಬ್ಯಾಲೆಟ್ ಪೇಪರ್ ಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದಾವಣಗೆರೆ ಜಿಲ್ಲೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ B.N.ವಿನಾಯಕ ಮನವಿ ಮಾಡಿದ್ದಾರೆ.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ದೇಶ ಹಿಟ್ಲರ್ ಆಡಳಿತ ಅಲ್ಲ, ಇಲ್ಲಿ ಎಲ್ಲಾ ಧರ್ಮಗಳಿಗೆ ಮತ್ತು ಎಲ್ಲಾ ಜಾತಿ ಸಮುದಾಯಗಳಿಗೆ ಸಮಾನ ಅವಕಾಶಗಳಿವೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಮೂಲಕ ಸಂವಿಧಾನ ಎಲ್ಲಾ ಪ್ರಜೆಗಳಿಗೆ ಸಮಾನ ಅವಕಾಶ ನೀಡಿದೆ.
ಇಂತಹ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಪ್ರಜೆಗಳಿಗೆ ಚುನಾವಣಾ ಆಯೋಗವು ನೀಡಿದೆ.
ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಮತ್ತು ಎಲ್ಲಾ ಜಾತಿಗಳು ಹಾಗೂ ಎಲ್ಲಾ ಧರ್ಮದ ಪ್ರಜೆಗಳು ತಮ್ಮದೇ ಆದ ಮತದಾನದ ಹಕ್ಕನ್ನು ಹೊಂದಿದ್ದಾರೆ, ಇಂತಹ ಮತದಾನಕ್ಕೆ ಗೌರವ ನೀಡುವ ಜವಾಬ್ದಾರಿ ಕೇಂದ್ರ ಚುನಾವಣಾ ಆಯೋಗದ ಕರ್ತವ್ಯವಾಗಿದೆ.
ದೇಶದಲ್ಲಿ ಮತದಾನ ನೀಡುವ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣವಾಗಿರುವುದರಿಂದ ಅಂದಿನಿಂದ ದೇಶದಲ್ಲಿ ಗುಪ್ತ ಮತದಾನ ನೀಡುವುದಕ್ಕೆ ಪ್ರತಿಯೊಂದು ರಾಜ್ಯಗಳಲ್ಲಿ ಬ್ಯಾಲೆಡ್ ಪೇಪರ್ ಮತದಾನ ನೀಡುವ ವ್ಯವಸ್ಥೆಯನ್ನು ಹೊಂದಿತ್ತು, ಕೆಲವೊಂದು ರಾಜಕೀಯ ದುಷ್ಪ್ರೇರಿತವಾಗಿ ಮತ್ತು ರಾಜಕೀಯ ಪಕ್ಷಗಳು ದುರುಪಯೋಗ ಮಾಡಿಕೊಳ್ಳುವುದಕ್ಕಾಗಿ ಇವಿಎಂ ಮಿಷನ್ ಮೂಲಕ ಮತದಾನ ಪಡೆಯುವುದಕ್ಕೆ ಜಾರಿ ಮಾಡಿಕೊಂಡರು.
ಅಂದಿನಿಂದ ಇಂದಿನವರೆಗೂ ಪಾರದರ್ಶಕವಾಗಿ, ನಡೆಯಬೇಕಾದ ಗುಪ್ತ ಮತದಾನವು ಇಂದು ಟೆಕ್ನಾಲಜಿಯ ಮೂಲಕ ದುರುಪಯೋಗ ಮಾಡಿಕೊಂಡು ಇವಿಎಂ ಮಿಷನ್ ಮೂಲಕ ಮತದಾನವು ಸರಿಯಾದ ರೀತಿಯಲ್ಲಿ ಪ್ರಜೆಗಳ ಮತದಾನದ ಅಂಕಿ ಅಂಶಗಳು ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ದೇಶದಲ್ಲಿ ಪ್ರಜೆಗಳು ನೀಡುತ್ತಿರುವ ಗುಪ್ತ ಮತದಾನದ ಗೌರವ ಮತ್ತು ಘನತೆಯನ್ನು ರಾಜಕೀಯ ಪಕ್ಷಗಳು ನಾಶ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದ ಚುನಾವಣೆಯ ಫಲಿತಾಂಶವೇ ಕಾರಣವಾಗುತ್ತಿದೆ.
ಅದೇ ರೀತಿ ಉತ್ತರ ಪ್ರದೇಶದಲ್ಲಿ ನಡೆದ ಮತದಾನ ಫಲಿತಾಂಶ ಗೊಂದಲ ಮೂಡಿಸಿದೆ. ಸಾಕಷ್ಟು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ನೀಡುತ್ತಿರುವ ಮತದಾನವು ಸರಿಯಾದ ಅಂಕಿ ಅಂಶಗಳು ಇವಿಎಂ ಮಿಷನ್ ಮೂಲಕ ಮತದಾನದ ಫಲಿತಾಂಶ ತಿಳಿಯುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರದ ಬಿಜೆಪಿ ಸರ್ಕಾರ ಮಹಾರಾಷ್ಟ್ರದ ಚುನಾವಣಾ ಫಲಿತಾಂಶದಲ್ಲಿ ಗಮನಿಸಿದಾಗ 514 ಮತಗಳಲ್ಲಿ ಬಿಜೆಪಿಗೆ 527 ಮತದಾನವು ಪಡೆದಿರುತ್ತಾರೆ ಇದು ಹೇಗೆ ಸಾಧ್ಯ ?
ಅದೇ ರೀತಿಯಾಗಿ ಮಹಾರಾಷ್ಟ್ರದಲ್ಲಿ ಇನ್ನೊಂದು ಊರಿನಲ್ಲಿ 312 ಮತದಾನವಾಗಿದ್ದರೆ ಇಲ್ಲಿ ಬಿಜೆಪಿಗೆ 640 ಮತದಾನ ಬಂದಿರುತ್ತದೆ ಇದು ಹೇಗೆ ಸಾಧ್ಯ? ಈ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗವೇ ನೀಡಿರುತ್ತದೆ .
ಇದಕ್ಕೆಲ್ಲ ಕಾರಣ ಇವಿಎಂ ಮಿಷನ್ ಅನ್ನು ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀಯಾ ಎಂಬ ಸಂಶಯ ಈ ದೇಶದ ಪ್ರಜೆಗಳಲ್ಲಿ ಮೂಡುತ್ತಿದೆ,.
ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಮತದಾನವು ಸರಿಯಾಗಿ ಇವಿಎಂ ಮಿಷನ್ ಮತದಾನದ ಫಲಿತಾಂಶ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಆದ್ದರಿಂದ ಸಾರ್ವಜನಿಕರಲ್ಲಿ ಗೊಂದಲವಾಗಿರುವುದರಿಂದ ನಮ್ಮ ದೇಶದಲ್ಲಿ ಮೊದಲು ಬ್ಯಾಲೆಟ್ ಪೇಪರ್ ಮತದಾನ ಜಾರಿಯಲ್ಲಿತ್ತು ಇವತ್ತು ದೇಶದಲ್ಲಿ ಅದನ್ನೇ ಜಾರಿ ಮಾಡಬೇಕೆಂದು ಇವಿಎಂ ಮಿಷಿನ್ ಮತದಾನ ರದ್ದುಗೊಳಿಸಬೇಕೆಂದು ಚುನಾವಣೆ ಆಯೋಗಕ್ಕೆ ಕೆಪಿಸಿಸಿ ಪರಿಶಿಷ್ಟ ಜಾತಿ ಭಾಗದ ವತಿಯಿಂದ ಹಾಗೂ ಪರಿಶಿಷ್ಟ ಜಾತಿ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಸಮುದಾಯವು ಒತ್ತಾಯ ಮಾಡುತ್ತಿದ್ದೇವೆ ಎಂದು ದಾವಣಗೆರೆ ಜಿಲ್ಲೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ B.N.ವಿನಾಯಕ ಆಗ್ರಹಿಸಿದ್ದಾರೆ.