“ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್ ಬಂದ್ವು,ಹಾಂಗಾ ಹೋದ್ವು..!
ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು. ಮಾರಿಕ್ಯಂಡನು ಉದ್ಧಾರ ಆಗಾಂಗಿಲ್ಲ … ಯಾಕಂದ್ರ ನಾವಿದೀವಲ್ಲ …ಅಷ್ಟಾಕಂದು ರಕ್ಕ ಇಟಕಂಡೂ, ನಾಕು ಟಾಟಾ ಟಿಪ್ಪರ್ ಗಾಡಿಗುಳು,ಕೈತುಂಬಾ ರಕ್ಕ , ಎಲ್ಲ ಇದ್ವು.ಆದ್ರೇನಾತು ಇವತ್ತಿಂದಿಸ ಹುಡುಕ್ಯಾಡಿದ್ನಪ ಅಂದ್ರೆ ಐಪಸ ಸೈತ ಇಲ್ಲ.” ಎಂದು ನಕ್ಕು, ಹೇಳುತ್ತಿದ್ದವನನ್ನೆ ನೋಡಿದೆ. ಕಾಲದ ಕರಾಳ ಅನುಭವಗಳು ಮೂವತ್ತರ ಆ ಹುಡುಗನನ್ನು ಮಾಗಿಸಿದಂತಿದ್ದವು.