ಅವಳು
ಸಮುದ್ರ ಕಿತ್ತೊಗೆದ ಮರುಳು
ಬಟ್ಟಯಿಲ್ಲದ ಗೋಡೆಯಪ್ಪಿದ ಬೆತ್ತಲ ಚಿತ್ರ
ಹಾಗೆ ನೋಡಿದರೆ
ಅವಳು ನಿಜಕ್ಕೂ ಬೆತ್ತಲಲ್ಲ
ಬದುಕಿನ
ಅದೆಷ್ಟೋ ಪದರುಗಳು ಸುತ್ತಿದ
ಅದೆಷ್ಟೋ ಕೈಗಳು ಹಿಡಿದು ಬಿಟ್ಟ
ಪಟ ಅವಳು
ಕೈ ಬಿಟ್ಟವುಗಳು ಹಾಗೇ ಬಿಟ್ಟಿಲ್ಲ
ಬಗೆವುದೆಲ್ಲವ ಬಗೆದು, ಹೀರುವುದೆಲ್ಲವ ಹೀರಿ
ನುಣ್ಣನೆ ಹಣ್ಣ ನೆಕ್ಕೊಗೆದ ಸಿಪ್ಪೆ
ನಾ ಹೇಳುವುದು ಸುಳ್ಳಲ್ಲ
ಬೇಕಿದ್ದರೆ ನೋಡಿ
ಬರಿಗಣ್ಣ ಪೊರೆಬಿಚ್ಚಿ ಒಮ್ಮೆ
ಅವಳ ಜಡೆಗೆ
ಅದೆಷ್ಟೋ ಕೈಗಳು ಮುಡಿಸಿದ ಹೂವಿನ ಘಮ ಈಗಲೂ ತಾಕುತ್ತಿದೆ
ಕೊಳೆತ ಗಮುಟಂತೆ
ಕಿವಿತುಂಬ ಪಿಸುಗುಟ್ಟಿದ
ಉಸಿರ ಒಡವೆಗಳು
ಇನ್ನೂ ನಗುತ್ತಿವೆ
ಮುಕ್ಕಾದ ಶೆಲೆಯಂತೆ
ಹಿಡಿದ ಕೈ, ಮುಡಿಸಿದ ಹೂವಿನ
ಪಿಸುಗುಟ್ಟು ನೆನೆದಾಗ
ಅದೆಷ್ಟು ಸಿಹಿ
ಅವಳತನವನೆಲ್ಲ ವಿಷ ಉಂಡಷ್ಟು !
Read also : my poem | ನನ್ನ ಕವಿತೆ
ಅವಳು
ಹತಾಶೆಯ ಬೊಗೆಸೆಯ ವಶ
ಸಮುದ್ರದ ದೈತ್ಯ ಸ್ವಾತಂತ್ರ್ಯ ಬಂಧಿಸಿದೆ ಅವಳ
ಬದುಕು ಸುಮ್ಮನೆ ನಗುತ್ತದೆ
ತೊಟ್ಟಿಲ್ಲದ ಹೂವಂತೆ
ಅವಳಿಗೆ ಬೇಕಿದ್ದ
ಚೂರೇಚೂರು ಮಾನವೀಯತೆ
ಪ್ರೀತಿ ತುಂಬಿದ
ಸಣ್ಣ ಕಣ್ಣೋಟ
ಕೇವಲ ಸಿಹಿ ನೆಪ್ಪುಗಳು ಮಾತ್ರ
ಪಿಆರ್. ವೆಂಕಟೇಶ್