ದಾವಣಗೆರೆ: ಚೀನಾ ದೇಶ ನಮ್ಮ ದೇಶದೊಳಗೆ ನುಗ್ಗಿ ಒಂದು ಗ್ರಾಮವನ್ನೇ ಪ್ರಾರಂಭ ಮಾಡಿದ್ದರೂ ಸಹ ನಮ್ಮ ದೇಶದ ಪ್ರಧಾನಮಂತ್ರಿ ಕಣ್ಮುಚ್ಚಿ ಕುಳಿತಿದ್ದಾರೆ. ಪುಲ್ವಾಮ ದಾಳಿಯಿಂದ 42 ಸೈನಿಕರು ಸಾವಿಗೆ ತುತ್ತಾದರೂ ಇವತ್ತಿಗೂ ಸಾಕ್ಷಿ ಆಧಾರಗಳನ್ನು ದೇಶದ ಜನರಿಗೆ ಮಾಹಿತಿ ಕೊಟ್ಟಿಲ್ಲ. ಆದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿ ವೀಕ್ ಪಿಎಂ ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎನ್ ವಿನಾಯಕ ಆರೋಪಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ನಡೆಸುವುದಕ್ಕೋಸ್ಕರ ಹಾಗೂ ಲೋಕಸಭಾ ಚುನಾವಣೆಗೋಸ್ಕರ ಎಸ್ ಬಿಐ ಬ್ಯಾಂಕ್ ನಲ್ಲಿರುವ ಚುನಾವಣೆಯ ಬಾಂಡುಗಳನ್ನು ಕದ್ದಂತ ವೀಕ್ ಪಿಎಂ ಎಂದು ದೂರಿದ್ದಾರೆ.
ಇಂತಹ ದುರ್ಬಲ ಪಿಎಂ ಅವರನ್ನು ದೇಶದ ಪ್ರಧಾನಮಂತ್ರಿಯಿಂದ ಇಳಿಸಿ, ಇವತ್ತು ನಮ್ಮ ದೇಶದ ಜನರನ್ನು ಮತ್ತು ನಮ್ಮ ದೇಶವನ್ನು ಉಳಿಸಬೇಕಾಗಿದೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾಗಿದೆ ಹಾಗೂ ಬಿಜೆಪಿ ಪಕ್ಷಕ್ಕೆ ಮತದಾನವನ್ನು ಕೊಡದೆ, ಇವತ್ತು ಜನಪರವಾದ ಹಾಗೂ ಜನರ ಯೋಗ ಕ್ಷೇಮವನ್ನು ನೋಡುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.